ಶ್ರೀದೇವಿಯದು ಸಹಜ ಸಾವಲ್ಲ! ಕೊಲೆ?

Picture of Cinibuzz

Cinibuzz

Bureau Report

ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಮೃತಪಟ್ಟು ವರ್ಷಗಳೇ ಕಳೆದಿದೆ. 2018ರ ಫೆಬ್ರವರಿ 24ರಂದು ದುಬೈನಲ್ಲಿ ಇದ್ದಾಗ ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಶ್ರೀದೇವಿ ಸಾವಿನ ಸುದ್ದಿ ಬಹಳಷ್ಟು ಜನರಿಗೆ ಶಾಂಕಿಂಗ್ ಸಂಗತಿ ಕೂಡ. ಮೊದಲು ಅದೊಂದು ಕೊಲೆ ಎಂದೇ ಹಲವರು ಪ್ರತಿಪಾದಿಸಿದರೂ ಕೂಡ ತನಿಖೆಯ ಬಳಿಕ ಶ್ರೀದೇವಿಯವರು ಬಾತ್​ ಟಬ್​ನಲ್ಲಿ ಮುಳುಗಿಯೇ ಮೃತಪಟ್ಟಿದ್ದು ಎಂದು ವರದಿ ನೀಡಲಾಗಿತ್ತು. ಆದರೆ ಶ್ರೀದೇವಿಯವರು ಮೃತಪಟ್ಟು ಒಂದು ವರ್ಷಗಳ ಕಳೆದ ಬಳಿಕ ಕೇರಳದ ಕಾರಾಗೃಹ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ರಿಷಿರಾಜ್ ಸಿಂಗ್ ಅವರು ಶ್ರೀದೇವಿ ಸಾವಿನ ಕುರಿತು ಮಾತನಾಡಿದ್ದಾರೆ. ಪತ್ರಿಕೆಯೊಂದರ ಅಂಕಣ ಬರಹದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿರುವ ಅವರು ಶ್ರೀದೇವಿ ಸಾವು ಬಾತ್ ಟಬ್ ನಲ್ಲಿ ಮುಳುಗಿದ್ದರಿಂದಲೇ ಆಗದೇ ಇರಬಹುದು ಎಂದು ಹೇಳಿದ್ದಾರೆ.

ನನ್ನ ಸ್ನೇಹಿತ ವಿಧಿ ವಿಜ್ಞಾನ ತಜ್ಞ ಡಾ. ಉಮಾದತ್ತನ್ ಈ ಹಿಂದೆ ಶ್ರೀದೇವಿ ಸಾವಿನ ಕುರಿತಾಗಿ ನನ್ನ ಬಳಿ ಚರ್ಚಿಸಿದ್ದರು. ನಾನು ಅವರ ಬಳಿ ಶ್ರೀದೇವಿಯವರ ಅಸಹಜ ಸಾವಿನ ಬಗ್ಗೆ ಕುತೂಹಲದಿಂದ ಪ್ರಶ್ನಿಸಿದ್ದೆ. ಆಗ ಇದೊಂದು ಕೊಲೆಯಾಗಿರಬಹುದು. ಆಕಸ್ಮಿಕ ಸಾವಲ್ಲ ಅವರೂ ಎಂದಿದ್ದರು. ಅದನ್ನು ಅವರ ಬಾಯಿಯಲ್ಲೇ ದೃಢೀಕರಿಸೋಣವೆಂದರೆ ಅವರೀಗ ಬದುಕಿಲ್ಲ ಎಂದು ರಿಷಿರಾಜ್ ಸಿಂಗ್ ಬರೆದುಕೊಂಡಿದ್ದಾರೆ. ಡಾ. ಉಮಾದತ್ತನ್​ ಅವರು ನನ್ನ ಬಳಿ ಹೇಳಿರುವ ಪ್ರಕಾರ ಯಾವ ಮನುಷ್ಯನೂ ಒಂದು ಅಡಿ ಆಳದ ನೀರಿನಲ್ಲಿ ಮುಳುಗಲು ಸಾಧ್ಯವೇ ಇಲ್ಲ. ಎಷ್ಟೇ ಕುಡಿದಿದ್ದರೂ ಸ್ವತಃ ಹೋಗಿ ಮುಳುಗಲಾಗದು. ಯಾರಾದರೂ ಅವರ ಎರಡೂ ಕಾಲುಗಳನ್ನು ಗಟ್ಟಿಯಾಗಿ ಹಿಡಿದು ತಲೆಯನ್ನು ನೀರಿನಲ್ಲಿ ಮುಳುಗಿಸಿ ಒತ್ತಿ ಹಿಡಿದುಕೊಂಡರೆ ಮಾತ್ರ ಮುಳುಗಿ ಉಸಿರುಗಟ್ಟಿ ಸಾಯಬಹುದು ಎಂದಿದ್ದಾರೆ. ಶ್ರೀದೇವಿ ತಮ್ಮ ಕುಟುಂಬದೊಂದಿಗೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಯುಎಇಗೆ ತೆರಳಿದ್ದಾಗ ದುರ್ಘಟನೆ ಸಂಭವಿಸಿತ್ತು. ಆಕೆ ಬಾತ್​ ಟಬ್​ನಲ್ಲಿ ಮುಳುಗಿದ್ದರು. ಸಾಯುವುದಕ್ಕೂ ಮೊದಲು ಸಿಕ್ಕಾಪಟೆ ಕುಡಿದಿದ್ದರು ಎಂದು ಪೋಸ್ಟ್​ ಮಾರ್ಟ್ಂ ವೇಳೆ ಗೊತ್ತಾಗಿತ್ತು.

ಇನ್ನಷ್ಟು ಓದಿರಿ

Scroll to Top