ಬಾಲಿವುಡ್ ನಟಿ ಶ್ರೀದೇವಿಯದ್ದು ಕೊಲೆ ಎಂದವರ ವಿರುದ್ಧ ಹರಿಹಾಯ್ದ ಬೋನಿ ಕಪೂರ್!

Picture of Cinibuzz

Cinibuzz

Bureau Report

ಬಾಲಿವುಡ್ ನಟಿ ಶ್ರೀದೇವಿ ಅಕಾಲಿಕವಾಗಿ ನಿಧನ ಹೊಂದಿ ಒಂದು ವರ್ಷವೇ ಕಳೆದು ಹೋಯಿತು. ಅವರದ್ದು ಸಹಜ ಸಾವು ಎಂದೂ ಕೇಸ್ ಕ್ಲೋಸ್ ಕೂಡ ಆಗಿತ್ತು. ಆದರೆ ಇತ್ತೀಚಿಗೆ ಕೇರಳ ಡಿಜಿಪಿ ರಿಷಿರಾಜ್ ಸಿಂಗ್ ಅವರು ಕೆಲವೊಂದು ಸಾಕ್ಷ್ಯಾಧಾರಗಳನ್ನಿಟ್ಟುಕೊಂಡು ನಟಿ ಶ್ರೀದೇವಿ ಅವರದ್ದು ಸಹಜ ಸಾವಲ್ಲ ಎಂದು ಹೇಳಿಕೆ ನೀಡಿ ಗೊಂದಲವನ್ನು ಸೃಷ್ಟಿಸಿದ್ದರು.

ಈ ಆರೋಪಕ್ಕೆ ಶ್ರೀದೇವಿ ಪತಿ ಬೋನಿ ಕಪೂರ್ ಪ್ರತಿಕ್ರಿಯೆ ನೀಡಿ ಇದೆಲ್ಲ ಸ್ಟುಪಿಡ್ ಸುದ್ದಿಗಳು ಎಂದಿದ್ದಾರೆ.  ಹಾಗೆ ನೋಡಿದರೆ ಇಂತಹ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡಲು ನಾನು ಇಷ್ಟಪಡುವುದಿಲ್ಲ. ಪ್ರತಿಕ್ರಿಯೆ ಕೊಡುವ ಅಗತ್ಯವೂ ಇಲ್ಲ. ಇಂತಹ ಸುದ್ದಿಗಳು ಆಗಾಗ ಬರುತ್ತಲೇ ಇರುತ್ತವೆ. ನಿಜಹೇಳಬೇಕೆಂದರೆ ಇಂತಹ ಸುದ್ದಿಗಳು ಕಾಲ್ಪನಿಕ. ಹುರುಳಿರುವುದಿಲ್ಲ ಎಂದು ತಿಳಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top