ವೆಂಕಟನಿಗೆ ಹುಚ್ಚು ಬಿಡ್ತಂತೆ!

Picture of Cinibuzz

Cinibuzz

Bureau Report

ಬಾಯಲ್ಲಿ ಎಕ್ಕಡ ಇಟ್ಟುಕೊಂಡೇ ಹುಟ್ಟಿದವನಂತೆ ಆಡುತ್ತಿದ್ದವನು ಹುಚ್ಚ ವೆಂಕಟ್. ಮಾತೆತ್ತಿದರೆ ‘ನನ್ ಎಕ್ಡ ನನ್ ಎಕ್ಡ’ ಎನ್ನುತ್ತಿದ್ದವನು, ಬರೀ ಕೂಗಾಟ, ಅರಚಾಟ, ಸಿಕ್ಕ ಸಿಕ್ಕವರ ಮೇಲೆಲ್ಲಾ ರಗಳೆ ಎಳೆದುಕೊಳ್ಳುತ್ತಿದ್ದ ವೆಂಕಟ್ ಈಗ ಏಕಾಏಕಿ ಸಾಧು ಸಜ್ಜನನಂತಾಗಿದ್ದಾನೆ ಅನ್ನೋ ಸುದ್ದಿ ಕೇಳಿಬರುತ್ತಿದೆ.

ಕೆಲ ದಿನಗಳ ಹಿಂದೆ ವೆಂಕಟ್ ಚೆನ್ನೈಗೆ ಹೋಗಿದ್ದನಂತೆ. ಅಲ್ಲಿ ತನ್ನ ಪರ್ಸು, ಪರ್ಸಲ್ಲಿದ್ದ ಎಟಿಎಂ ಕಾರ್ಡು ಎಲ್ಲವನ್ನೂ ಕಳೆದುಕೊಂಡು ರಸ್ತೆ ರಸ್ತೆ ಅಲೆದು, ಕಿಲೋಮೀಟರುಗಟ್ಟಲೆ ನಡೆದು ಕಡೆಗೆ ಹೇಗೋ ಮಾಡಿ ಬೆಂಗಳೂರು ತಲುಪಿದನಂತೆ. ಕರ್ನಾಟಕದ ಯಾವುದೇ ಮೂಲೆಯಲ್ಲಿ ವೆಂಕಟ ಹೀಗೆ ಪರ್ಸು ಮಿಸ್ ಮಾಡಿಕೊಂಡಿದ್ದರೂ ಮಿಸುಕಾಡುವ ಪರಿಸ್ಥಿತಿಯೇ ಬರುತ್ತಿರಲಿಲ್ಲ. ತನ್ನದಲ್ಲದ ಜಾಗದಲ್ಲಿ ವಿಲಿವಿಲಿ ಅಂತಾ ಒದ್ದಾಡುವಂತಾಗಿದ್ದೇ ವೆಂಕಟನಿಗೆ ಹತ್ತು ವರ್ಷದಿಂದ ಅಮರಿಕೊಂಡಿದ್ದ ಹುಚ್ಚ ಟಪಕ್ಕಂತಾ ಬಿಟ್ಟುಹೋಗಿದೆ! ಹೀಗಾಗಿ ಈಗ ವೆಂಕಟ್ ತೀರಾ ಡೀಸೆಂಟಾಗಿ ನಡೆದುಕೊಳ್ಳಲು ಆರಂಭಿಸಿದ್ದಾನೆ. ಎದುರಿಗೆ ಸಿಕ್ಕ ಯಾರೇ ಆದರೂ ಗೌರವ ಕೊಟ್ಟು ಮಾತಾಡುತ್ತಾನೆ ಅನ್ನೋದು ಸದ್ಯದ ವರ್ತಮಾನ. ವೆಂಕಟನ ಆರೋಗ್ಯಸ್ಥಿತಿ ಹೀಗೇ ಸುಧಾರಿಸಲಿ ಅನ್ನೋದು ನಮ್ಮ ಹಾರೈಕೆ ಕೂಡಾ..!

ಇನ್ನಷ್ಟು ಓದಿರಿ

Scroll to Top