ವಿಷ್ಣು ಪ್ರಿಯನಾದ ಪಡ್ಡೆಹುಲಿ!

Picture of Cinibuzz

Cinibuzz

Bureau Report

ಪಡ್ಡೆ ಹುಲಿ ಚಿತ್ರದ ಯಶಸ್ಸಿನ ನಂತರ ಕೆ. ಮಂಜು ಪುತ್ರ ಶ್ರೇಯಸ್ ಸದ್ಯ ಹೊಸ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಚಿತ್ರಕ್ಕೆ ವಿಷ್ಣು ಪ್ರಿಯ ಎಂದು ಹೆಸರಿಡಲಾಗಿದ್ದು, ಮಲಯಾಳಂ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ವಿ.ಕೆ. ಪ್ರಕಾಶ್ ವಿಷ್ಣು ಪ್ರಿಯ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಬಾಲ್ಯದಿಂದಲೂ ವಿಷ್ಣು ವರ್ಧನ್ ಅಪ್ಪಟ ಅಭಿಮಾನಿಯಾಗಿರುವ ಕೆ.ಮಂಜು ತಮ್ಮ ಮಗನನ್ನು ಮೊದಲ ಸಿನಿಮಾದಲ್ಲಿ ವಿಷ್ಣು ಅಭಿಮಾನಿಯನ್ನಾಗಿ ತೋರಿಸಲಾಗಿತ್ತು. ಇದೀಗ ತಮ್ಮ ಎರಡನೇ ಚಿತ್ರಕ್ಕೂ ವಿಷ್ಣು ಪ್ರಿಯ ಎಂದು ಹೆಸರಿಡುವ ಮೂಲಕ ವಿಷ್ಣುವರ್ಧನ್ ಅಭಿಮಾನವನ್ನು ಮೆರೆದಿದ್ದಾರೆ.  ಅಂದಹಾಗೆ ವಿಷ್ಣುಪ್ರಿಯ ನೈಜ ಘಟನೆ ಆಧರಿತ ಕಥೆಯನ್ನು ಒಳಗಿದ್ದು, ಪ್ರೀ ಪ್ರೊಡಕ್ಷನ್ ಕೆಲಸಗಳು ಮುಕ್ತಾಯದ ಹಂತದಲ್ಲಿದೆ. ಮುಂದಿನ ತಿಂಗಳು ಚಿತ್ರದ ಮುಹೂರ್ತ ಆಗಲಿದ್ದು, ಸೆಪ್ಟೆಂಬರ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ಇನ್ನಷ್ಟು ಓದಿರಿ

Scroll to Top