ತವರಿಗೆ ಹಿಂತಿರುಗಲಿದ್ದಾರೆ ಶಿವರಾಜ್ ಕುಮಾರ್!

Picture of Cinibuzz

Cinibuzz

Bureau Report

ಸಾಕಷ್ಟು ದಿನಗಳಿಂದ ಶಸ್ತ್ರ ಚಿಕಿತ್ಸೆಯ ಕಾರಣದಿಂದ ಲಂಡನಲ್ಲೇ ಉಳಿದಿದ್ದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಜುಲೈ 23ರಂದು ಬೆಂಗಳೂರಿಗೆ ಮರಳಲಿದ್ದಾರೆ. ಬಲಭುಜದ ನೋವಿನ ಬಳಲಿಕೆಯಲ್ಲಿದ್ದ ಶಿವಣ್ಣ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅಲ್ಲೇ ವಿಶ್ರಾಂತಿಯಲ್ಲಿದ್ದ ಶಿವಣ್ಣ ತಮ್ಮ ಹುಟ್ಟುಹಬ್ಬವನ್ನು ಅಲ್ಲಿಯೇ ಆಚರಿಸಿಕೊಂಡಿದ್ದರು.

ಇದೀಗ ತವರಿಗೆ ಮರಳುವ ಮೂಲಕ ಅಭಿಮಾನಿಗಳಿಗೆ ಸಂತಸದ ವಿಚಾರವನ್ನು ತಿಳಿಸಿದ್ದಾರೆ. ಮಂಗಳವಾರ ಜುಲೈ 23 ಸಂಜೆ 6 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಶಿವಣ್ಣ ಆಗಮಿಸಲಿದ್ದು, ಅಭಿಮಾನಿಗಳು ನೋಡಿ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ‘ಲಂಡನ್‌ಗೆ ಬಂದು ಸರ್ಜರಿ ಮಾಡಿಸಿಕೊಂಡಿದ್ದು ಒಳ್ಳೆಯದಾಯಿತು. ಸರ್ಜರಿ ತುಂಬಾ ಚೆನ್ನಾಗಿ ಆಯಿತು. ಮುಂದೆ ಇನ್ನೂ ಚೆನ್ನಾಗಿ, ಹೆಚ್ಚು ಆಕ್ಟಿವ್‌ ಆಗಿರ್ತೀನಿ. ಡಾನ್ಸ್‌, ಫೈಟ್‌ ಇನ್ನೂ ಚೆನ್ನಾಗಿ ಮಾಡಬಹುದು ಎಂದುಕೊಂಡಿದ್ದೇನೆ ಎಂದಿದ್ದಾರೆ ಶಿವಣ್ಣ.

ಇನ್ನಷ್ಟು ಓದಿರಿ

Scroll to Top