ಡಿ ಬಾಸ್ ಬಳಗದಿಂದ ದರ್ಶನ್ ಸಾಕ್ಷ್ಯ ಚಿತ್ರ ಬಿಡುಗಡೆ!

Picture of Cinibuzz

Cinibuzz

Bureau Report

ದರ್ಶನ್ ಪ್ರಾಣಿ ಪ್ರಿಯರೆಂಬುದು ಈಗಾಗಲೇ ಸಾಬೀತಾಗಿದೆ. ಅವರು ಸಾಕಷ್ಟು ಪ್ರಾಣಿಗಳನ್ನು ಸಾಕುತ್ತಿದ್ದಾರೆ. ದತ್ತು ತೆಗೆದುಕೊಂಡಿದ್ದಾರೆ. ಫಾರಂ ನೋಡಿಕೊಳ್ಳುತ್ತಿದ್ದಾರೆ. ಆಗಾಗ ಪ್ರಾಣಿಗಳ ಅವಘಡಗಳಿಂದ ಮನನೊಂದಿದ್ದಾರೆ. ಇತ್ತೀಚಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ತಮ್ಮ ಕ್ಯಾಮೆರಾದಲ್ಲಿ ಕಾಡು ಪ್ರಾಣಿಗಳ ಚಲನವಲನಗಳನ್ನು ಸೆರೆ ಹಿಡಿದಿರುವುದನ್ನು ಡಿ ಬಾಸ್ ಬಳಗ ಸಾಕ್ಷ್ಯ ಚಿತ್ರ ಮಾಡಿ ರಿಲೀಸ್ ಮಾಡಿದೆ.

ದರ್ಶನ್ ಕ್ಲಿಕ್ಕಿಸಿದ್ದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಸ್ವಚ್ಚಂದವಾಗಿ ತಿರುಗಾಡಿದ್ದ ಒಡೆಯನ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಾಗರಹೊಳೆಯ ದಮ್ಮನಕಟ್ಟೆ, ಕಬಿನಿ ಹಿನ್ನೀರು ಪ್ರದೇಶ, ಬಳ್ಳೆ ಶಿಬಿರ, ಇನ್ನಿತರ ಕಡೆಗಳ ಪ್ರಕೃತಿ ಸೌಂದರ್ಯ, ಪ್ರಾಣಿ ಪಕ್ಷಿಗಳ ಚಲನವಲನಗಳನ್ನು ಸೆರೆ ಹಿಡಿದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸುಂದರ ವಿಡಿಯೋವನ್ನು ಸಾಕ್ಷ್ಯಚಿತ್ರವನ್ನಾಗಿ ಮಾಡಲಾಗಿದೆ. ಅಲ್ಲದೇ ಸಫಾರಿ ವೇಳೆ ಕಾಡಿನ ಮಕ್ಕಳೊಂದಿಗೆ ಸೆಲ್ಫಿಗೆ ಪೋಸ್ ಕೊಟ್ಟಿದ್ದ ಕೌರವೇಂದ್ರನ ಗಜಪಡೆ ಕ್ಯಾಪ್ಟನ್ ಅರ್ಜುನ ಹುಲಿ, ಕರಡಿ, ಚಿರತೆ, ಸೇರಿದಂತೆ ಕಾಡು ಪ್ರಾಣಿ ಪಕ್ಷಿಗಳ ಲವಲವಿಕೆಯನ್ನು ಕ್ಯಾಮೆರಾದಲ್ಲಿ ಕ್ಲಿಕ್ಕಿಸುವ ಪರಿಯನ್ನೂ ಈ ಸಾಕ್ಷ್ಯಚಿತ್ರ ಕವರ್ ಮಾಡಿದೆ.

ಇನ್ನಷ್ಟು ಓದಿರಿ

Scroll to Top