ವಿಷ್ಣು ವರ್ಧನ್ ಸ್ಮಾರಕದ ವಿಚಾರಕ್ಕೆ ಸರ್ಕಾರದ ಗಮನ ಸೆಳೆದು ಮಾತನಾಡಿದ್ದ ಅಳಿಯ ಅನಿರುದ್ಧ್ ಕಿರುತೆರೆಗೆ ಪದಾರ್ಪಣೆ ಮಾಡಲಿದ್ದಾರೆ. ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲ್ಲಿ ಧಾರವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
JotheJotheyali | Coming Soon | On Zee Kannada
ಜಗತ್ತು ಜನರೇಷನ್ನು ಎರೆಡು ಬೇರೆ ಬೇರೆ ಇರೋ ಮನಸ್ಸುಗಳು ಬರ್ತಾಯಿವೆ ಜೊತೆಜೊತೆಯಲಿ.#Zeekannada#JotheJotheyaliಶೀಘ್ರದಲ್ಲಿ
Gepostet von Zee Kannada am Dienstag, 23. Juli 2019
ಸದ್ಯ ಜೊತೆ ಜೊತೆಯಲ್ಲಿ ಧಾರವಾಹಿಯ ಪ್ರೊಮೋ ಬಿಡುಗಡೆಯಾಗಿದ್ದು, 20 ವರ್ಷದ ಹುಡುಗಿ 45 ವರ್ಷದ ಮಧ್ಯ ವಯಸ್ಕನ ಪ್ರೇಮ ಕಥೆಯನ್ನು ಈ ಧಾರವಾಹಿ ಹೊಂದಿದೆ. ಎರಡು ವಿಭಿನ್ನ ಮನಸ್ಥಿತಿಗಳ ಮನಸ್ಸಿನ ವ್ಯಕ್ತಿತ್ವಗಳ ನಡುವಿನ ಲವ್ ಸ್ಟೋರಿಯ ಕಥೆ ಜೊತೆ ಜೊತೆಯಲಿ ಧಾರವಾಹಿ ಶೀಘ್ರದಲ್ಲಿಯೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಹಿಂದೆಯೂ ಜೊತೆ ಜೊತೆಯಲಿ ಎಂಬ ಧಾರವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. ವಿರಾಟ್ ಹಾಗೂ ಆಶಿತಾ ಚಂದ್ರಪ್ಪ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ಅದೇ ಹೆಸರಿನ ಧಾರವಾಹಿ ಪ್ರಾರಂಭವಾಗಲಿದೆ.











































