ಸ್ವಚ್ಚ ಭಾರತ್ ಅಭಿಯಾನದ ಕನಸಿನ ಸಿನಿಮಾ ನಿರ್ಮಲ!

Picture of Cinibuzz

Cinibuzz

Bureau Report

ಸಂಪೂರ್ಣ ಮಕ್ಕಳೇ ಸೇರಿಕೊಂಡು ಸಿದ್ದಪಡಿಸಿರುವ ‘ನಿರ್ಮಲ’ ಚಿತ್ರವು ಪ್ರಧಾನ ಮಂತ್ರಿಗಳ ಸ್ವಚ್ಚ ಭಾರತ  ಅಭಿಯಾನ, ಬಯಲು ಮುಕ್ತ ದೇಶವನ್ನಾಗಿ ಮಾಡುವ ವಿಚಾರವನ್ನು  ಹೇಳುವ ಪ್ರಯತ್ನ ಮಾಡಲಾಗಿದೆ.  ಇದರ ಜೊತೆಗೆ ಸಾಮಾಜಿಕ ಕಳಕಳಿ ಇರುವ ಅಂಶಗಳನ್ನು ಚಿತ್ರದಲ್ಲಿ ಇಟ್ಟುಕೊಳ್ಳಲಾಗಿದೆ. ಇವೆಲ್ಲವನ್ನು  ಮಕ್ಕಳು ಹೇಗೆ ಮಾಡಲು ಸಾಧ್ಯ ಎನ್ನುವುದೇ ಚಿತ್ರದ ಕಥೆ.

ಇತ್ತೀಚಿಗೆ ನಿರ್ಮಲ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನೆರವೇರಿದ್ದು, ಅಮೇರಿಕಾದಿಂದ ಟ್ರೈಲರ್‌ನ್ನು ಬಿಡುಗಡೆ ಮಾಡಲು ಆಗಮಿಸಿದ್ದ ದೀಪಕ್-ಸವಿತಾರಾವ್ ದಂಪತಿಗಳು ತಂಡಕ್ಕೆ ಶುಭ ಹಾರೈಸಿದರು.  ಹಾಲಿ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್, ಮಾಜಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ, ಕಾರ್ಯದರ್ಶಿ ಎನ್.ಎಂ.ಸುರೇಶ್, ಪದಾದಿಕಾರಿಗಳಾದ ಉಮೇಶ್‌ಬಣಕಾರ್,ಶಿಲ್ಪಶ್ರೀನಿವಾಸ್, ಶಾಲೆಯ ಪ್ರ್ರಿನ್ಸಿಪಾಲ್ ಪ್ರಿಯಾ, ನಟ ದೀಪಕ್, ಬಾ.ಮ.ಹರೀಶ್, ಬಾ.ಮಾ.ಗಿರೀಶ್ ಮುಂತಾದವರು ಕಾರ್ಯಕ್ರಮದಲ್ಲಿ ಸಾಕ್ಷಿಯಾಗಿದ್ದರು. ನಿರ್ಮಲ ಸಿನಿಮಾವನ್ನು ಲೋಹಿತ್ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದು, ಬಿ.ಹೆಚ್. ಉಲ್ಲಾಸ್ ಗೌಡ ಅವಿನಾಶ್ ನಿರ್ಮಾಣ ಮಾಡಲಿದ್ದಾರೆ. ಉಳಿದಂತೆ ವರ್ಣ ಶ್ರೀ ಮುರೂರು ಸಂಗೀತ, ಲೋಹಿತ್ ಚಂದನ್ ಸಂಕಲನ, ಭಾವನಾ ನಾಯಕ್ ನೃತ್ಯ, ಮಿಥಿಲೇಶ್ ಆರ್ಯನ್ ಕಲಾ ನಿರ್ದೇಶನ, ಪವನ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ.

ಇನ್ನಷ್ಟು ಓದಿರಿ

Scroll to Top