ಕಾಫಿ ಸುಪುತ್ರನ ನಿಧನಕ್ಕೆ ಪವರ್ ಸ್ಟಾರ್ ಕಂಬನಿ!

Picture of Cinibuzz

Cinibuzz

Bureau Report

ಕರ್ನಾಟಕದ ಕಾಫಿ ಗಮಲನ್ನು ಇಡೀ ವಿಶ್ವಕ್ಕೆ ಪಸರಿಸಿ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದ ಉದ್ಯಮಿ ಸಿದ್ಧಾರ್ಥ್. ಅವರ ಅಕಾಲಿಕ ಮರಣ ಅರಗಿಸಿಕೊಳ್ಳಲಾಗದ ತುತ್ತಾಗಿ ಪರಿಣಮಿಸಿದೆ. ಕಳೆದೊಂದು ದಿನದಿಂದ ಅವರು ಸುರಕ್ಷಿತವಾಗಿ ಹಿಂತಿರುಗಿ ಬರಲಿ ಎಂದು ಪ್ರಾರ್ಥಿಸಿದವರ ನಂಬಿಕೆ ಹಳ್ಳಹಿಡಿದಿದೆ. ನೇತ್ರಾವತಿ ನದಿವಯ ಸೇತುವೆಯ ಮೇಲೆ ನಾಪತ್ತೆಯಾಗಿದ್ದ ವಿಜಿ ಸಿದ್ಧಾರ್ಥ್ ಇಂದು ಬೆಳಿಗ್ಗೆ ಮೃತದೇಹವಾಗಿ ಪತ್ತೆಯಾಗಿದ್ದು, ಅಂದಾಜು 35 ಗಂಟೆಗಳ ಕಾರ್ಯಾಚಾರಣೆಯ ಬಳಿಕ ಹೊಯ್ಗೆ ಬಜಾರ್ ಎಂಬಲ್ಲಿ ಸಿದ್ಧಾರ್ಥ್ ಪತ್ತೆಯಾಗಿದ್ದರು.

ಅವರ ಸಾವಿಗೆ ಇಡೀ ಭಾರತವೇ ಕಂಬನಿಗರೆದಿದ್ದು, ಅದರಲ್ಲೂ ಕನ್ನಡಿಗರು ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. ಇನ್ನು ಸಿನಿ ತಾರೆಯರು ಕೂಡ ಸಿದ್ಧಾರ್ಥ ಸಾವಿಗೆ ಮನನೊಂದು ಸಂತಾಪ ಸೂಚಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಅಗಲಿದ ಸಿದ್ಧಾರ್ಥ್ ಅವರಿಗೆ ಸಂತಾಪ ಸೂಚಿಸಿದ್ದು, ಡೈನಮಿಕ್ ​ ಉದ್ಯಮಿ , ಒಂದು ಕಾಫಿ ಹೇಗೆ ಸಾವಿರಾರು ಮಂದಿಗೆ ಉದ್ಯೋಗವನ್ನು ಸೃಷ್ಟಿಸಬಹುದು ಎಂದು ತೋರಿಸಿಕೊಟ್ಟವರು ಸಿದ್ಧಾರ್ಥ್ ಅವರು ಮಾಡಿರುವ ಕೆಲಸಗಳು ಸದಾ ಹಸಿರಾಗಿ ಮನಸಿಲ್ಲಿ ಉಳಿಯುತ್ತದೆ’ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top