ಭಾನು  ವೆಡ್ಸ್  ಭೂಮಿ ವಿಚಾರ ಗೊತ್ತಾ?

Picture of Cinibuzz

Cinibuzz

Bureau Report

ಮನೆಯಲ್ಲಿ ಹಿರಿಯರನ್ನು ಎದುರಿಸಲಾಗದೆ  ಮನೆಬಿಟ್ಟು  ಹೊರಬಂದು  ಕಷ್ಟ ಅನುಭವಿಸುವ  ಪ್ರೇಮಿಗಳ  ಕಥೆಗಳು ತೆರೆಮೇಲೆ ಅದೆಷ್ಟೋ  ಬಂದುಹೋಗಿವೆ.  ಅವೆಲ್ಲವುಗಳನ್ನು ಮೀರಿಸುವ ಕಂಟೆಂಟ್ ಹೊಂದಿರುವ  ಮತ್ತೊಂದು ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಚಿತ್ರದ ಹೆಸರು ಭಾನು  ವೆಡ್ಸ್  ಭೂಮಿ. ಚಿತ್ರದಲ್ಲಿ  ಇಬ್ಬರು ಪ್ರೇಮಿಗಳ ಹೋರಾಟದ ಬದುಕಿನ ಚಿತ್ರಣವಿದೆ.

ಚಿತ್ರದ  ನಿರ್ದೇಶಕ  ಜಿ.ಕೆ. ಆದಿ  ಚಿತ್ರದ ಕುರಿತು ಮಾತನಾಡುತ್ತ ನನ್ನ ಚಿತ್ರದಲ್ಲಿ ಬರುವ  ಪಾತ್ರಗಳಿಗೆ ಯಾವುದೇ ಅಡಿಪಾಯವಿಲ್ಲ. ನಾವುಗಳೆಲ್ಲಾ  ಹೊರಗೆ  ಬಂದಾಗ ಏನೇನೆಲ್ಲಾ ಸಮಸ್ಯೆಗಳನ್ನು  ಎದುರಿಸುತ್ತೇವೆ ಎನ್ನುವುದೇ ಈ ಚಿತ್ರದ ಕಥೆ.  ಒಬ್ಬ  ಯುವತಿ  ತನ್ನ  ವ್ಯಕ್ತಿತ್ವವನ್ನು ಪಕ್ಕಕ್ಕಿಟ್ಟು,  ಹುಡುಗನೊಬ್ಬನನ್ನು  ಇಷ್ಟಪಟ್ಟಾಗ  ಆ ಇಬ್ಬರ ಮನಸ್ಸು  ಹೇಗಿರುತ್ತದೆ,   ತನ್ನ ತಂದೆ ತಾಯಿಯಿಂದ  ದೂರವಾಗಿ   ತಾನು ಪ್ರೀತಿಸಿದವನೊಂದಿಗೆ ಮನೆಯಿಂದ  ಹೊಸ ಬಂದಾಗ  ಸಮಾಜದಲ್ಲಿ ಏನೇನೆಲ್ಲ   ತೊಂದರೆ ತಾಪತ್ರಯ ಎದುರಿಸಿ ಬಾಳಬೇಕಾಗುತ್ತದೆ ಎಂಬುದನ್ನು  ಚಿತ್ರದಲ್ಲಿ  ಪರಿಣಾಮಕಾರಿಯಾಗಿ ತೋರಿಸಿದ್ದೇನೆ. ಚಿತ್ರದ  ಕ್ಲೈಮ್ಯಾಕ್ಸ್‌ನಲ್ಲಾದರೂ  ಭಾನು ಮತ್ತು  ಭೂಮಿ  ಎಲ್ಲರನ್ನೂ ಎದುರಿಸಿ  ಒಂದಾಗುತ್ತಾರಾ ಇಲ್ಲವಾ ಎನ್ನುವುದೇ  ಈ ಚಿತ್ರದ  ಕಥೆ. ರಂಗಾಯಣ ರಘು ಹಾಗೂ ಶೋಭರಾಜ್ ಅವರನ್ನು  ನಮ್ಮ ಚಿತ್ರದ ಪಿಲ್ಲರ್ ಎಂದೇ ಹೇಳಬಹುದು. ಅವರು  ಚಿತ್ರಕ್ಕೆ ನೀಡಿದ  ಸಹಕಾರವನ್ನು  ನಾವು  ಎಂದಿಗೂ ಮರೆಯಲಾಗದು ಎಂದು ಹೇಳಿದ್ದಾರೆ.

ಚಿತ್ರದ ನಾಯಕ ಭಾನು  ಉತ್ತಮ  ಮನೆತನದ ಹುಡುಗ, ಮದುವೆಯ ಬಗ್ಗೆ  ಯಾವುದೇ ಆಸಕ್ತಿ ಹೊಂದಿರದ  ಆತನ ಲೈಫ್‌ನಲ್ಲಿ   ಭೂಮಿ ಎಂಬ ಸುಂದರ ಯುವತಿಯ  ಆಗಮನವಾಗುತ್ತದೆ.  ಈ ಇಬ್ಬರ  ಲವ್‌ಗೆ  ಮನೆಯ  ಹಿರಿಯರು ಕಡಿವಾಣ ಹಾಕುತ್ತಾರೆ.  ಅನಿವಾರ್ಯವಾಗಿ ಇಬ್ಬರೂ ಮನೆಬಿಟ್ಟು  ಹೊರಬಂದು ಜೀವನ ಮಾಡುವಾಗ ಎದುರಿಸುವ ತೊಂದರೆ, ತಾಪತ್ರಯಗಳೇ ಈ ಚಿತ್ರದ ಕಥಾವಸ್ತು.  ಭಾನುಗೆ ಭೂಮಿ ಕೊನೆಗಾದರೂ ದಕ್ಕತ್ತಾಳಾ ಇಲ್ವಾ ಎನ್ನುವುದೇ ಚಿತ್ರದ  ಕ್ಲೈಮ್ಯಾಕ್ಸ್ ಎಂದು ಚಿತ್ರದ  ನಾಯಕ ಸೂರ್ಯಪ್ರಭು ಚಿತ್ರದ  ಕುರಿತಂತೆ  ಮಾತನಾಡುತ್ತ  ಹೇಳಿದರು.  ಈ ಚಿತ್ರದ ನಾಯಕಿಯಾಗಿ ಅಭಿನಯಿಸಿರುವ  ರಶ್ಮಿಕಾ ಮಲ್ನಾಡ್  ತನ್ನ ಪಾತ್ರದ ಕುರಿತಂತೆ  ಮಾತನಾಡುತ್ತ  ತನ್ನ ಮನೆಯವರು, ಹುಟ್ಟೂರನ್ನು  ಬಿಟ್ಟು  ಇನ್ನೊಂದು ಅಪರಿಚಿತ ಜಾಗಕ್ಕೆ  ತನ್ನ ಪ್ರೀತಿಯನ್ನು ಹುಡುಕಿಕೊಂಡು  ನಾಯಕಿ  ಬಂದಾಗ  ಆಕೆಗೆ ಆ ಪ್ರೀತಿ  ಸಿಗುತ್ತಾ ಇಲ್ವಾ  ಎನ್ನುವುದೇ  ಪಾತ್ರದ ಹೈಲೈಟ್ ಅಂತೆ.

ಪೂರ್ವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕಿಶೋರ್ ಶೆಟ್ಟಿ ನಿರ್ಮಾಣದ ’ಭಾನು ವೆಡ್ಸ್ ಭೂಮಿ’ ಚಿತ್ರವು ಯು/ಎ ಸರ್ಟಿಫಿಕೆಟ್‌ನೊಂದಿಗೆ ಈ ವಾರಾ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರವನ್ನು  ಜಿ.ಕೆ. ಆದಿ ನಿರ್ದೇಶಿಸುತ್ತಿದ್ದಾರೆ.  ಈ ಚಿತ್ರದ ಛಾಯಾಗ್ರಹಣ – ಗಣೇಶ್ ಹೆಗ್ಡೆ, ಸಂಗೀತ- ಎ.ಎಂ. ನೀಲ್, ಸಂಕಲನ- ಶ್ರೀನಿವಾಸ್ ಪಿ ಬಾಬು, ನಿರ್ವಹಣೆ – ಗಂಡಸಿ ರಾಜು, ತಾರಾಗಣದಲ್ಲಿ – ಸೂರ್ಯಪ್ರಭ್, ರಕ್ಷತಾ ಮಲ್ನಾಡ್. ಶೋಭರಾಜ್, ಗಿರೀಶ್, ಮೈಕೋ ಮಂಜು, ಸಿಲ್ವಾಮೂರ್ತಿ, ಹಂಸಾ, ಸೂರ್ಯಕಿರಣ್, ಪಲ್ಲವಿ ಶೆಟ್ಟಿ, ಹೆಚ್.ಎಂ.ಟಿ. ವಿಜಿ, ಪ್ರವೀಣ್, ಮಿಮಿಕ್ರಿ ರಾಜು, ರಂಗಾಯಣ ರಘು ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ.

ಇನ್ನಷ್ಟು ಓದಿರಿ

Scroll to Top