ಸಾಮಾನ್ಯರು ಸೆಲೆಬ್ರೆಟಿಗಳೆಂದರೆ ರಾಯಲ್ ಲೈಫು, ಕಾರು, ಪಾರ್ಟಿ, ಫೈವ್ ಸ್ಟಾರ್ ಹೋಟೆಲ್, ಸೆಲ್ಫಿ ಇತ್ಯಾದಿಗಳೆಂದು ಬಿಂಬಿಸುತ್ತಾರೆ. ಆದರೆ ಇವೆಲ್ಲದರ ಮಧ್ಯೆ ಅವರು ಅನುಭವಿಸುವ ಯಮಯಾತನೆಯಂತೂ ಯಾವ ಶತ್ರುಗಳಿಗೂ ಬೇಡ. ಹೌದು.. ಇವೆಲ್ಲದರ ಮಧ್ಯೆ ಅವರ ಕಷ್ಟ ನಷ್ಟಗಳು, ಅಭಿಮಾನಿಗಳ ಹಾವಳಿ, ಪ್ರತಿರೋಧ, ಆಕ್ರಮಣ, ಹಲ್ಲೆಗಳಿಗೂ ಬರವಿಲ್ಲ.
View this post on InstagramA post shared by Guru Randhawa (@gururandhawa) on
ಇತ್ತೀಚಿಗೆ ಬಾಲಿವುಡ್ ಖ್ಯಾತ ಗಾಯಕ ಹಾಗೂ ಪಂಜಾಬಿ ಸಿಂಗರ್ ಗುರು ರಂಧವಾ ಇಂತಹುದೇ ಪರಿಸ್ಥಿತಿಗೆ ತಗುಲಿಕೊಂಡಿದ್ದಾರೆ. ಕೆನಡಾದಲ್ಲಿ ಸಂಗೀತ ಕಾರ್ಯಕ್ರಮಕ್ಕೆ ತೆರಳಿದ್ದ ಗುರು ಕಾರ್ಯಕ್ರಮದಲ್ಲೇ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದಾರೆ. ಅವರು ಕಾರ್ಯಕ್ರಮ ಮುಗಿಸಿ, ತಮ್ಮ ಕಾರಿನ ಬಳಿ ಹೋಗುವಾಗ ಯಾರೋ ಒಬ್ಬರು, ಏನನ್ನೋ ತೆಗೆದುಕೊಂಡು ಅವರ ತಲೆಗೆ ಬೀಸಿದ್ದಾರೆ. ಇದರಿಂದಾಗಿ ಗುರು ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಘಟನೆ ಕುರಿತಂತೆ ಗುರು ರಂಧವಾ ಅವರ ಆತ್ಮೀಯ ಸ್ನೇಹಿತರೊಬ್ಬರು ಅವರು ಗಾಯಗೊಂಡಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅವರಿಗೆ ಚಿಕಿತ್ಸೆ ಕೊಡಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.











































