ಮೈಸೂರು ಮಸಾಲಾದಲ್ಲಿ ರಘು ದೀಕ್ಷಿತ್!

Picture of Cinibuzz

Cinibuzz

Bureau Report

ಕೌಟುಂಬಿಕ ಸಮಸ್ಯೆಯ ಬಳಿಕ ರಘು ದೀಕ್ಷಿತ್ ಮತ್ತೆ ಫಾರ್ಮ್ ಗೆ ಮರಳಿದ್ದು ಮೈಸೂರು ಮಸಾಲಾ ಎಂಬ ಚಿತ್ರದ ಹಾಡೊಂದಕ್ಕೆ ದನಿಯಾಗಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತವಾದ ಸಿನಿಮಾ ಇದಾಗಿದ್ದು, ಹಾರುವ ತಟ್ಟೆಯ ಮೇಲೆ ಚಿತ್ರದ ಕಥೆ ಸಾಗಲಿದೆ. ಈ ಚಿತ್ರವನ್ನು ಅಜಯ್ ಸರ್ಪೇಶ್ವರ್ ನಿರ್ದೇಶನ ಮಾಡುತ್ತಿದ್ದಾರೆ.

ವಾಸುಕಿ ವೈಭವ್ ಸಾಹಿತ್ಯದಲ್ಲಿ ಮೂಡಿಬಂದಿರುವ ಈ ಹಾಡು ಲಾಂಗ್ ಡ್ರೈವ್ ಗೆ ಹೇಳಿ ಮಾಡಿಸಿದಂತಿದೆ. ಚಿತ್ರದಲ್ಲಿ ಕಳೆದುಹೋದ ಪ್ರೀತಿ ಹುಡುಕುವ ನಾಯಕನ ಸಂಕಟದ ದೃಶ್ಯಕ್ಕೆ ರಘು ದೀಕ್ಷಿತ್​​ ಹಾಡಿದ್ದು, ಈ ದೃಶ್ಯ ಅಧ್ಬುತವಾಗಿ ಮೂಡಿಬಂದಿದೆ ಎಂಬುದು ನಿರ್ದೇಶಕರ ಅಂಬೋಣ.

ರಘು ದೀಕ್ಷಿತ್ ಮಾತನಾಡಿ ಮೈಸೂರು ಮಸಾಲಾ’ ಚಿತ್ರಕ್ಕೆ ವಾಸುಕಿ ಅದ್ಭುತ ಸಾಹಿತ್ಯವನ್ನು ಬರೆದಿದ್ದಾರೆ, ಈ ಹಾಡು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತದೆ. ನನ್ನ ಲೈವ್‌ ಶೋಗಳಲ್ಲಿ ಈ ಹಾಡು ಹೆಚ್ಚಿನ ಬೇಡಿಕೆ ಸೃಷ್ಟಿಸಲಿದೆ. ಹಾಡನ್ನು ಭಾವಪೂರ್ಣವಾಗಿ ಕಟ್ಟಿಕೊಡಲು 10 ರಿಂದ 12 ಬಾರಿ ಹಾಡನ್ನು ರೆಕಾರ್ಡ್‌ ಮಾಡಲಾಗಿದೆ ಎಂದಿದ್ದಾರೆ. ಗಣೇಶ ಚತುರ್ಥಿಗೆ ಈ ಹಾಡನ್ನು ಬಿಡುಗಡೆಗೊಳಿಸಲು ಚಿತ್ರತಂಡವು ಪ್ಲ್ಯಾನ್ ಮಾಡಿಕೊಂಡಿದೆ. ಚಿತ್ರದಲ್ಲಿ ಹಿರಿಯ ನಟ ಅನಂತ್‌ನಾಗ್‌, ಪ್ರಕಾಶ್‌ ಬೆಳವಾಡಿ, ಸುಧಾ ಬೆಳವಾಡಿ, ಶರ್ಮಿಳಾ ಮಾಂಡ್ರೆ, ಸಂಯುಕ್ತ ಹೊರನಾಡು, ಕಿರಣ್‌ ಶ್ರೀನಿವಾಸು ಬಣ್ಣ ಹಚ್ಚಿದ್ದಾರೆ.

ಇನ್ನಷ್ಟು ಓದಿರಿ

Scroll to Top