ಸೈಕೋ ಸಿನಿಮಾದ ಮೂಲಕ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಗ್ಲಾಮರಸ್ ಬ್ಯೂಟಿ ಅನಿತಾ ಭಟ್. ಆನಂತರ ಬಿಗ್ ಬಾಸ್ ಎಂಟ್ರಿಕೊಟ್ಟು ಕಿರುತೆರೆಯಲ್ಲಿ ಕಮಾಲು ಮಾಡಿದ ಅನಿತಾ ಬದುಕು ಹಸನಾದದ್ದು ಟಗರು ಚಿತ್ರದಿಂದ.

ಹೌದು ಟಗರು ಚಿತ್ರದಲ್ಲಿ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡ ಅನಿತಾ ಭಟ್ ಅವರಿಗೆ ಲಕ್ಕು ಖುಲಾಯಿಸಿ ಸದ್ಯ ಬೇಡಿಕೆಯಲ್ಲಿರು ನಟಿಯಾಗಿಯೂ ಹೊರಹೊಮ್ಮಿದ್ದಾರೆ. ಟಗರು ನಂತರ ಸಾಕಷ್ಟು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡ ಅನಿತಾ ಭಟ್ ಸದ್ಗುಣ ಸಂಪನ್ನ ಮಾಧವ, ಕಾಟನ್ ಸ್ಮಿತಾ, ಬೆಂಗಳೂರು 69, ಕಲಿವೀರ ಇತ್ಯಾದಿ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲೂ ಕನ್ನೇರಿ ಚಿತ್ರದಲ್ಲಿ ಅನಿತಾ ಭಟ್ ಲೇಡಿ ವಿಲನ್ ಆಗಿ ಕಾಣಿಸಿಕೊಳ್ಳಲಿರುವುದು ವಿಶೇಷವಾಗಿದೆ. ಕನ್ನೇರಿ ಚಿತ್ರವು ಪೂರ್ಣವಾಗಿ ಆ ಪಾತ್ರದ ಸುತ್ತಲೇ ಸುತ್ತುವುದರಿಂದ ಅನಿತಾ ಭಟ್ ಗೆ ಆ ಚಿತ್ರವು ಬ್ರೇಕ್ ಕೊಡುವುದರಲ್ಲಿ ಸಂಶಯವಿಲ್ಲ. ಈ ಚಿತ್ರವನ್ನು ನೀನಾಸಂ ಮಂಜು ನಿರ್ದೇಶನ ಮಾಡುತ್ತಿದ್ದಾರೆ. ಇದು ಜೇನು ಆಕಾಶದ ಅರಮನೆಯೋ ಕಾದಂಬರಿ ಆಧಾರಿತ ಚಿತ್ರವಾಗಿದ್ದು, ತಾರಾಗಣದಲ್ಲಿ ಸುಧಾರಾಣಿ, ತಬಲಾನಾಣಿ ಕಾಣಿಸಿಕೊಂಡಿದ್ದಾರೆ. ಉಮೇಶ್ ಎಂ ಕತ್ತಿ ಈ ಚಿತ್ರಕ್ಕೆ ಬಂಡವಾಳವನ್ನು ಹೂಡುತ್ತಿದ್ದಾರೆ.











































