ಸ್ಯಾಂಡಲ್ ವುಡ್ ಮಂದಿಗೆ ವದು ಬೇಕಾಗಿದೆಯಂತೆ!

Picture of Cinibuzz

Cinibuzz

Bureau Report

ಸ್ಯಾಂಡಲ್ ವುಡ್ ಮಂದಿಗೆ ವದು ಬೇಕಾಗಿದೆಯಂತೆ. ಹೌದು.. ಕಿರಣ್ ನಾಯಕ್ ಮತ್ತು ಕೈಲಾಶ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸ ಸಿನಿಮಾ ಟೈಟಲ್ ಇದು. ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕ್ಯೂರಿಯಾಸಿಟಿಯನ್ನು ಹುಟ್ಟುಹಾಕುವ ಚಿತ್ರ ವಿಚಿತ್ರವಾದ ಟೈಟಲ್ ಗಳ ಸಿನಿಮಾಗಳು ಬರುತ್ತಿದ್ದು, ಸದ್ಯ ಅದರ ಪಟ್ಟಿಗೆ ವಧು ಬೇಕಾಗಿದೆ ಎಂಬ ಸಿನಿಮಾ ಕೂಡ ಸೇರ್ಪಡೆಯಾಗಿದೆ.

ಮೂವತ್ತು ದಾಟಿದರೂ ಮದುವೆಯಾಗದೇ ಇರುವ ಯುವಕರ ಕಥೆಯನ್ನು ಚಿತ್ರತಂಡವು ಹೇಳುತ್ತಿದೆ. ಮದುವೆ ಎನ್ನುವುದು ಸ್ವರ್ಗದಲ್ಲಿಯೇ ನಿಶ್ಚಯ ಆಗಿರುತ್ತದೆ ಎನ್ನುವ ಮಾತಿದೆ. ಆದರೆ, ಕೆಲವರಿಗೆ ಅದು ಆಗಿರುವುದೇ ಇಲ್ಲ ಅನಿಸುತ್ತದೆ. ಹಾಗಾಗಿ ಅವರು ನಿರಂತರವಾಗಿ ವಧು ಹುಡುಕಾಟದಲ್ಲಿ ಇರುತ್ತಾರೆ. ಹರಸಾಹಸ ಪಟ್ಟರೂ ಅವರಿಗೆ ಹುಡುಗಿಯರು ಸಿಗುವುದಿಲ್ಲ. ಇಂತಹ ಹುಡುಗರ ಮನಸ್ಥಿತಿಯನ್ನು ಮನರಂಜನಾತ್ಮಕವಾಗಿ ಕಟ್ಟಿಕೊಡುವ ಪ್ರಯತ್ನ ನಿರ್ದೇಶಕರದ್ದು.  ಹಾಸ್ಯದ ಮೂಲಕ ಚಿತ್ರದ ಕಥೆಯನ್ನು ಹೇಳುತ್ತಿದ್ದರೂ ಸಹ ಭಾವನಾತ್ಮಕವಾದ ಪ್ರಪಂಚಕ್ಕೆ ಕರೆದೊಯ್ಯುವ ಪ್ರಯತ್ನವಂತೂ ವಧು ಬೇಕಾಗಿದೆ ಚಿತ್ರದಲ್ಲಿ ಇದೆ ಎನ್ನುತ್ತಾರೆ ಕಿರಣ್ ನಾಯಕ್. ಇನ್ನು ಈ ಚಿತ್ರವನ್ನು ರತ್ನಾತನಯ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top