ಉಪ ಚುನಾವಣೆಗೆ ರೆಡಿಯಾಗುತ್ತಿದೆ ಉಪೇಂದ್ರ ಪ್ರಜಾಕೀಯ!

Picture of Cinibuzz

Cinibuzz

Bureau Report

ಕರ್ನಾಟಕದ ದೊಂಬರಾಟದ ರಾಜಕಾರಣದಲ್ಲಿ ಸದ್ಯ ಅನರ್ಹಗೊಂಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಮಾಜಿ ಶಾಸಕರ ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದ್ದು, ಉಪೇಂದ್ರ ಅವರ ಪ್ರಜಾಕೀಯ ಪಕ್ಷವು ಸ್ಪರ್ಧಿಸುವ ಉತ್ಸಾಹ ತೋರುತ್ತಿದೆ.

ಒಂದು ವೇಳೆ ಈ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸುವ ಘೋಷಣೆಯಾದಲ್ಲಿ ಅಖಾಡಕ್ಕೆ ಧುಮುಕಲು ಪ್ರಜಾಕೀಯ ಪಕ್ಷವು ರೆಡಿಯಾಗಿದೆ. ಅಲ್ಲದೆ, ಸ್ವತಃ ಉಪೇಂದ್ರ ಕೂಡ ಸ್ಪರ್ಧಿಸುವ ಸೂಚನೆ ಸಿಕ್ಕಿದೆ. ಈ ವಿಚಾರವನ್ನು ಸೂಪರ್ ಸ್ಟಾರ್ ಉಪೇಂದ್ರ ಅವರೇ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಐ ಲವ್ ಯು ಚಿತ್ರದ 50ನೇ ದಿನದ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ಒಂದು ವೇಳೆ ಉಪ ಚುನಾವಣೆ ನಡೆದರೆ ಖಂಡಿತವಾಗಲೂ ಪ್ರಜಾಕೀಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದು ತಿಳಿಸಿದರು. ಯಾವುದಾದರೂ ಕ್ಷೇತ್ರದಿಂದ ಉಪೇಂದ್ರ ಸ್ಪರ್ಧಿಸುತ್ತಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತವಾಗಿಯೂ ಸಾಧ್ಯತೆ ಇದೆ ಎಂದಿದ್ದಾರೆ. ಆದರೆ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.

ಅಲ್ಲದೆ ಪಕ್ಷಾಂತರಿಗಳ ವಿರುದ್ಧ ಮಾತನಾಡಿದ ಉಪೇಂದ್ರ, ಒಂದು ಪಕ್ಷದ ಚಿಹ್ನೆ ಮತ್ತು ಐಡಿಯಾಲಜಿ ಮೇಲೆ ನಿಂತ ಮೇಲೆ ಆ ಪಕ್ಷದ ಪರವಾಗಿ ನಿಲ್ಲಬೇಕು. ಒಂದು ವೇಳೆ ಅವರಿಗೆ ಆಂತರಿಕ ಸ್ವಾತಂತ್ರ್ಯ ಅನ್ನೋದು ಬೇಕಾಗಿದ್ದಾರೆ ಇಂಡಿಪೆಂಡೆಂಟ್ ಅಭ್ಯರ್ಥಿಯಾಗಿ ನಿಂತು ಚುನಾವಣೆ ಎದುರಿಸಬೇಕು. ಅದನ್ನು ಬಿಟ್ಟು ಒಂದು ಪಕ್ಷದಿಂದ ಗೆದ್ದು, ಮತ್ತೊಂದು ಪಕ್ಷಕ್ಕೆ ಬೆಂಬಲಿಸುವುದು ತಪ್ಪು ಎಂದು ಹೇಳಿದರು.  ಸದ್ಯದ ಪರಿಸ್ಥಿತಿಯಲ್ಲಿ ಕೇವಲ 15 ಸೀಟುಗಳಿಂದ ಒಂದು ಸರ್ಕಾರವೇ ಬೀಳುತ್ತೆ ಅಂದ್ರೆ ಅದು ದುರಂತವೇ ಸರಿ. ಈಗ ಪ್ರಜೆಗಳಿಗೆ ಮತ್ತೊಂದು ಅಧಿಕಾರ ಸಿಕ್ಕಿದೆ. ತಮ್ಮ ಮಾತು ಕೇಳುವಂತ ಸೂಕ್ತ ವ್ಯಕ್ತಿಗಳನ್ನು ಗೆಲ್ಲಿಸಿಕೊಳ್ಳಬೇಕು ಎಂದು ಸಲಹೆಯನ್ನು ನೀಡಿದ್ದಾರೆ.

ಇನ್ನಷ್ಟು ಓದಿರಿ

Scroll to Top