ನಮ್ ಏರಿಯಾಲ್ ಒಂದಿನ, ತುಘಲಕ್, ಹುಲಿರಾಯದಂತಾ ಹೊಸ ಬಗೆಯ ಸಿನಿಮಾಗಳನ್ನು ನಿರ್ದೇಶಿಸಿದವರು ನಿರ್ದೇಶಕ ಅರವಿಂದ್ ಕೌಶಿಕ್. ಜೊತೆಗೆ ಕಿರುತೆರೆಯಲ್ಲೂ ಸಾಕಷ್ಟು ಯಶಸ್ವಿ ಧಾರಾವಾಹಿಗಳನ್ನು ನಿರ್ದೇಶಿಸಿರುವ ಅರವಿಂದ್ ಸದ್ಯ ಸೂಪರ್ ಹಿಟ್ ಎನಿಸಿಕೊಂಡಿರುವ ‘ಕಮಲಿ’ ಧಾರಾವಾಹಿಯ ಸೂತ್ರಧಾರ ಕೂಡಾ ಹೌದು.

ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಚಿತಾರಾಮ್, ಅನೀಶ್ ತೇಜೇಶ್ವರ್, ಬಾಲು ನಾಗೇಂದ್ರ… ಹೀಗೆ ಅರವಿಂದ್ ಕೌಶಿಕ್ ಸಾಕಷ್ಟು ಹೊಸ ಪ್ರತಿಭೆಗಳನ್ನು ಸಿನಿಮಾರಂಗದ ಮುಖ್ಯ ವಾಹಿನಿಗೆ ಪರಿಚಯಿಸಿದವರು. ಕನ್ನಡ ಚಿತ್ರರಂಗ ಕಂಡ ಅಪರೂಪದ ಪ್ರತಿಭಾವಂತರಲ್ಲಿ ಒಬ್ಬರಾದ ಅರವಿಂದ್ ಕೌಶಿಕ್ ಈಗ ಶಾರ್ದೂಲ ಮತ್ತು ಸ್ಟೀಲ್ ಪಾತ್ರೆ ಸಾಮಾನ್ ಅನ್ನೋ ಸಿನಿಮಾಗಳನ್ನು ಕಂಪ್ಲೀಟ್ ಮಾಡಿದ್ದಾರೆ. ಶಾರ್ದೂಲ ಈಗ ತೆರೆಗೆ ಬರಲು ರೆಡಿಯಾಗಿದ್ದು ಅದರ ಟ್ರೇಲರ್ ಕೂಡಾ ಅನಾವರಣಗೊಂಡಿದೆ. ಶಾರ್ದೂಲ ಹುಲಿರಾಯನ ಮತ್ತೊಂದು ಹೆಸರು. ಹುಲಿ ಅವರ ಪಾಲಿಗೆ ಲಕ್ಕಿಯೋ, ಈ ಚಿತ್ರದ ಕಥೆಗೆ ಅದು ಹೊಂದುತ್ತದೆಯಾದ್ದರಿಂದ ಆ ಶೀರ್ಷಿಕೆಯಿಟ್ಟಿದ್ದಾರೋ ಗೊತ್ತಿಲ್ಲ. ಆದರೆ ವಿಶಿಷ್ಟವಾದ ಈ ಟೈಟಲ್ಲಿನ ಮೂಲಕ ಅಷ್ಟೇ ವಿಶೇಷವಾದೊಂದು ಕಥೆಯನ್ನು ಸಿನಿಮಾವನ್ನಾಗಿ ಕಟ್ಟಿಕೊಟ್ಟಿದ್ದಾರೆ.

ಅರವಿಂದ್ ಕೌಶಿಕ್ ಚಿತ್ರವೆಂದ ಮೇಲೆ ಅದರಲ್ಲೇಲನೋ ವಿಶೇಷ ಇದ್ದೇ ಇರುತ್ತದೆಂಬುದು ಪ್ರೇಕ್ಷಕರ ನಂಬಿಕೆ. ಅದಕ್ಕನುಗುಣವಾಗಿಯೇ ಸದ್ದೇ ಇಲ್ಲದಂತೆ ಈ ಚಿತ್ರವನ್ನವರು ಮುಗಿಸಿಕೊಂಡಿದ್ದಾರೆ. ಈ ಹಂತದಲ್ಲಿ ಮಾಧ್ಯಮವನ್ನು ತಮ್ಮ ತಂಡದೊಂದಿಗೆ ಮುಖಾಮುಖಿಯಾಗಿರೋ ಅರವಿಂದ್ ಕೌಶಿಕ್ ಶಾರ್ದೂಲನ ಬಗೆಗಿನ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಮನುಷ್ಯ ಪ್ರತೀ ನಿತ್ಯದ ಆಗುಹೋಗುಗಳ ಬಗ್ಗೆ ನಿಖರವಾದ ಅರಿವು ಹೊಂದಿರುವಾತ. ಬೆಳಗ್ಗೆ ಎದ್ದಾಗಿನಿಂದ ಅವರವರ ಕೆಲಸ ಕಾರ್ಯಕ್ಕೆ ಇಳಿಯುವವರೆಗೂ ಇಂಥಾದ್ದೇ ಘಟಿಸುತ್ತದೆಂಬ ಅರಿವು ಪ್ರತಿಯೊಬ್ಬರಿಗೂ ಇರುತ್ತದೆ. ಅದರ ಬಗ್ಗೆ ಯಾರಿಗೂ ಕುತೂಹಲವಿರೋದಿಲ್ಲ. ಆದರೆ ಹೊಸಾ ಜಾಗ, ಗುರುತಿರದ ಜನರ ಮಧ್ಯೆ ಹೋಗಿ ನಿಂತಾಗ ಪ್ರತೀ ಕ್ಷಣಗಳೂ ಎದೆಗೆ ಸವರಿಕೊಂಡೇ ಚಲಿಸಿದಂತಾಗುತ್ತದಲ್ಲಾ? ಅಂಥಾದ್ದೊಂದು ಸೂಕ್ಷ್ಮವನ್ನಿಟ್ಟುಕೊಂಡು ಪ್ರಯಾಣದ ಜೊತೆ ಜೊತೆಗೇ ಕಥೆ ಹೇಳಲು ಅರವಿಂದ್ ಮುಂದಾಗಿದ್ದಾರೆ.
ಶನಿವಾರ ಬಿಡುಗಡೆಯಾದ ಶಾರ್ದೂಲ ಚಿತ್ರದ ಟ್ರೇಲರ್ ನನ್ನ ವಾಲ್‌ನಲ್ಲಿ ಇವತ್ತು ಬಿಡುಗಡೆ. ಅರವಿಂದ್ ಕೌಶಿಕ್ ನಿರ್ದೇಶನದ ಈ ಥ್ರಿಲ್ಲರ್ ಟ್ರೇಲರ್ ನೋಡಿ.. ಒಂದು ಕುತೂಹಲ ಇಟ್ಟುಕೊಳ್ಳಿ.. ಸಿನಿಮಾ ನಿರಾಸೆ ಮಾಡುವುದಿಲ್ಲ.ಚಿತ್ರದ ಮೊದಲ ಟ್ರೇಲರ್ರನ್ನು ನೇರ ಫೇಸ್ ಬುಕ್ಕಿನಲ್ಲಿ ಪೋಸ್ಟ್ ಮಾಡ್ತಿದ್ದೇನೆ. ಯೂಟ್ಯೂಬ್ ಲಿಂಕ್ ಹಾಕಿದರೆ ಅದ್ಯಾಕೋ ಹೆಚ್ಚು ಜನಕ್ಕೆ ತಲುಪುವುದಿಲ್ಲ. ಹಲವರು ಆ ಲಿಂಕ್ ಕ್ಲಿಕ್‌ಮಾಡಿ ಯೂಟ್ಯೂಬ್ ತನಕ ಹೋಗಿ ನೋಡದಿರುವುದೂ ಕಾರಣ ಇರಬಹುದು.ಯೂಟ್ಯೂಬಿನಲ್ಲೇ ನೋಡಿ ಅಲ್ಲಿ ಮಿಲಿಯನ್ ಗಟ್ಲೆ ಹಿಟ್ ಕಾಣಿಸಬೇಕು ಎಂಬ ಉದ್ದೇಶ ತಂಡದವರಿಗಿಲ್ಲ. ಜನಕ್ಕೆ ಹೀಗೊಂದು ಸಿನಿಮಾ ಬರುತ್ತಿದೆ ಎಂದು ಗೊತ್ತಾದರೆ ಸಾಕು ಎಂಬುದಷ್ಟೇ ಟ್ರೇಲರ್ ನ ಉದ್ದೇಶ.ಇಂಟರ್ನೆಟ್ ಮತ್ತು ಸೋಷಿಯಲ್‌ಮೀಡಿಯಾದ ಲೆಕ್ಕಾಚಾರಗಳು ಇತ್ತೀಚೆಗೆ ತುಂಬ ಕಮರ್ಷಿಯಲ್ ಆಗಿದೆ. ಉಚಿತ ಕಂಟೆಂಟ್ ಗಳು ಸ್ನೇಹವಲಯವನ್ನು ತಲುಪುತ್ತಿಲ್ಲ. ಸಾವ್ರಾರು ಫ್ರೆಂಡ್ಸ್ ಲಕ್ಷಗಟ್ಲೆ ಫಾಲೋವರ್ಸ್ ಇದ್ರೂ ಅವರಿಗೆ ನಾವು ಮಾಡುವ ಪೋಸ್ಟ್ ಗಳು ಕಾಣುತ್ತಲೇ ಇಲ್ಲ. ಅದೆಲ್ಲದರ ನಡುವೆಯೂ ನಾವೆಲ್ಲರೂ ಮೊದಲಿನಂತೆಯೇ ಸೋಶಿಯಲ್ ಮೀಡಿಯಾವನ್ನು ಬಳಸುತ್ತಿದ್ದೇವೆ.ಇರ್ಲಿ…ಈ ಟ್ರೇಲರ್ ಬಗ್ಗೆ ಒಂದು ಮಾತು ಕಮೆಂಟ್ ಹಾಕಿ. ಟ್ರೇಲರ್ ಶೇರ್ ಮಾಡಿ ಈ ಪ್ರಯತ್ನಕ್ಕೆ ಬೆಂಬಲ ನೀಡಿ.ಬೆಸ್ಟ್ ಕ್ವಾಲಿಟಿ ವಿಡಿಯೋ ನೋಡೋಕೆ ಯೂಟ್ಯೂಬ್‌ಲಿಂಕ್ ಇಲ್ಲಿದೆhttps://youtu.be/cOjnKcwKkiY
Gepostet von Naveen Sagar am Sonntag, 4. August 2019
ರವಿತೇಜ ಮತ್ತು ಚೇತನ್ ಚಂದ್ರ ಈ ಚಿತ್ರದ ನಾಯಕರು. ಐಶ್ವರ್ಯಾ ಮತ್ತು ಕೃತಿಕಾ ರವೀಂದ್ರ ಈ ಚಿತ್ರದ ನಾಯಕಿಯರು. ನಿರ್ದೇಶಕ ಅರವಿಂದ್ ಕೌಶಿಕ್ ಅವರಿಗೆ ದಶಕಗಳಿಂದಲೂ ಸ್ನೇಹಿತರಾಗಿರುವ ಕಲ್ಯಾಣ್ ಸಿ ಮತ್ತು ರೋಹಿತ್ ಎಸ್ ಜೊತೆ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಹು ಕಾಲದಿಂದಲೂ ಒಂದೊಳ್ಳೆ ಚಿತ್ರವನ್ನು ನಿರ್ಮಾಣ ಮಾಡಬೇಕೆಂಬ ಕನಸು ಹೊಂದಿದ್ದ ರೋಹಿತ್ ಈ ಕಥೆ ಕೇಳಿದಾಕ್ಷಣವೇ ನಿರ್ಮಾಪಕರಾಗಲು ಒಪ್ಪಿಕೊಂಡಿದ್ದರಂತೆ. ಇನ್ನು ಸದಭಿರುಚಿಯ ಚಿತ್ರ ನಿರ್ಮಾಣ ಮಾಡಬೇಕೆಂಬ ಕನಸು ಹೊಂದಿದ್ದ ಕಲ್ಯಾಣ್ ಅವರನ್ನು ನಿರ್ಮಾಪಕರನ್ನಾಗಿ ಮಾಡಿದ್ದೂ ಕೂಡಾ ಅರವಿಂದ್ ಕೌಶಿಕ್ ಅವರ ಚೆಂದದ ಕಥೆಯೇ!
ಇದೊಂದು ಪ್ರಯಾಣದಲ್ಲಿ ನಡೆಯೋ ಕಥೆ. ಆದರೆ ಇದು ಮಾಮೂಲಿ ಪಯಣವಾಗಿರಲಿಕ್ಕಿಲ್ಲ ಎಂಬ ಅಂದಾಜು ನಿರ್ದೇಶಕ ಅರವಿಂದ್ ಕೌಶಿಕ್ ಆಲೋಚನಾ ಕ್ರಮ ಗೊತ್ತಿರುವವರಿಗೆಲ್ಲ ಪಕ್ಕಾ ಆಗಿರುತ್ತದೆ. ಅದು ಅವರ ಈ ಹಿಂದಿನ ಸಿನಿಮಾಗಳ ಮೂಲಕವೂ ಸ್ಪಷ್ಟವಾಗಿಯೇ ಸಾಬೀತಾಗಿದೆ. ಅಂದಹಾಗೆ, ಶಾರ್ದೂಲ ಸಿನಿಮಾ ಶೀರ್ಷಿಕೆಗೆ ‘ದೆವ್ವ ಇರಬಹುದಾ? ಎನ್ನುವ ಅಡಿಬರಹ ನೀಡಲಾಗಿದೆ. ಟ್ರೇಲರ್ ನೋಡಿದವರಿಗೂ ಇದೇ ಪ್ರಶ್ನೆ ಕಾಡುತ್ತದೆ. ಸಿನಿಮಾ ಬಿಡುಗಡೆಯಾದ ಮೇಲೆ ಅದು ದೆವ್ವವೇನಾ ಅಥವಾ ಬೇರೇನಾದರೂ ಇದೆಯಾ ಅನ್ನೋದು ನಿಖರವಾಗಿ ತಿಳಿಯಲಿದೆ!











































