ಉತ್ತರ ಕರ್ನಾಟಕ ಸಂತ್ರಸ್ತರಿಗಾಗಿ ಚಾಲೆಂಜಿಂಗ್ ಸ್ಟಾರ್ ಮನವಿ!

Picture of Cinibuzz

Cinibuzz

Bureau Report

ಬಿಟ್ಟೂ ಬಿಡದ ಮಳೆಯಿಂದಲಾಗಿ ತತ್ತರಿಸಿರುವ ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ಅಗತ್ಯ ವಸ್ತುಗಳನ್ನು ನೀಡುವಂತೆ ಸೋಶಿಯಲ‍್ ಮೀಡಿಯಾದ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿ ಮಾಡಿಕೊಂಡಿದ್ದಾರೆ.

“ಪ್ರವಾಹದ ಪರಿಣಾಮವಾಗಿ ಉತ್ತರ ಕರ್ನಾಟಕದಲ್ಲಿ ಹಾನಿಗೆ ತುತ್ತಾಗಿರುವ ಹಳ್ಳಿಗಳ ಜನರಿಗೆ ಅಗತ್ಯ ಸಾಮಾಗ್ರಿಗಳ ಅವಶ್ಯಕತೆ ಇದೆ. ನಮ್ಮ ಡಿ ಕಂಪನಿ ಬಳಗದಿಂದಲೂ ಸಹ ನಮ್ಮ ಕೈಲಾದ ಅಳಿಲು ಸೇವೆಯನ್ನು ಮಾಡೋಣ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಅಗತ್ಯ ವಸ್ತುಗಳು, ಬಟ್ಟೆಗಳು ಬೇಳೆ, ಅಕ್ಕಿ, ದವಸ ಧಾನ್ಯಗಳು, ಬಿಸ್ಕತ್ ಮತ್ತು ಸಂರಕ್ಷಿತ ಆಹಾರ ಪದಾರ್ಥಗಳು, ಚಪ್ಪಲಿಗಳು, ರೈನ್ ಕೋರ್ಟ್ ಗಳು, ವಾಟರ್ ಬಾಟಲ್ ಗಳು, ಜನರಲ್ ಮೆಡಿಸನ್ಸ್, ಅಡುಗೆ ಎಣ್ಣೆ, ಟೂತ್ ಬ್ರಷ್, ಟೂತ್ ಪೇಸ್ಟ್, ಸಾಬೂನು, ಟೆಟ್ರಾ ಪ್ಯಾಕ್ ಹಾಲು ನೀಡಬಹುದು ಎಂದು ದರ್ಶನ ಮನವಿ ಮಾಡಿದ್ದಾರೆ.

ತಮ್ಮ ಕೈಲಾದ ಸಹಾಯದೊಂದಿಗೆ ಈ ಕಾರ್ಯದಲ್ಲಿ ಭಾಗವಹಿಸಲು ಕೆಳಗಿನ ದೂರವಾಣಿ ನಂ. ಗಳಿಗೆ ಸಂಪರ್ಕಿಸತಕ್ಕದ್ದು. ರಾಹುಲ್ 9986103219, ಶರತ್ 9036197999, ಚೇತನ್ 9620629646 ಅವರನ್ನು ಸಂಪರ್ಕಿಸಬಹುದು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ಓದಿರಿ

Scroll to Top