ಉತ್ತರ ಕರ್ನಾಟಕದ ಮಂದಿ ದಕ್ಷಿಣ ಕರ್ನಾಟಕದವರಂತೆ ಖುಷಿ ಖುಷಿಯಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುವಂತಿದ್ದರೆ ಅದೇ ಖುಷಿಯಲ್ಲಿ ಕೋಟೆ ನಾಡಿನಲ್ಲಿ ಪೈಲ್ವಾನ್ ಆಡಿಯೋವನ್ನು ಪವರ್ ಸ್ಟಾರ್ ಬಿಡುಗಡೆ ಮಾಡಬೇಕಿತ್ತು. ಆದರೆ ಉತ್ತರ ಕರ್ನಾಟಕದ ಭಾಗಗಳಲ್ಲಿ ಉಂಟಾಗಿರುವ ಭಾರಿ ಪ್ರವಾಹದ ಕಾರಣ ನಿಗದಿಯಾಗಿದ್ದ ಪೈಲ್ವಾನ್ ಬಿಡುಗಡೆ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.
https://twitter.com/KicchaSudeep/status/1159441387890151424
ಈ ಕುರಿತು ಸ್ವತಃ ಸುದೀಪ್ ಅವರೇ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದು, ”ಚಿತ್ರದುರ್ಗದಲ್ಲಿ ನಡೆಯಬೇಕಿದ್ದ ಪೈಲ್ವಾನ್ ಆಡಿಯೋ ಕಾರ್ಯಕ್ರಮವನ್ನು ಸದ್ಯಕ್ಕೆ ಮುಂದಕ್ಕೆ ಹಾಕಿಕೊಳ್ಳುತ್ತಿದ್ದೇವೆ. ಈ ಸಮಯದಲ್ಲಿ ನಾವು ನೆರೆ ಸಂತ್ರಸ್ಥರಿಗೆ ಬೆಂಬಲ ನೀಡಬೇಕಾಗಿರುವ ಅವಶ್ಯಕತೆ ಇದೆ. ದಯವಿಟ್ಟು ಎಲ್ಲ ನನ್ನ ಅಭಿಮಾನಿಗಳು ನಮ್ಮನ್ನು ಕ್ಷಮಿಸಿ, ನನ್ನ ಗೆಳೆಯ ಪುನೀತ್ ರಾಜ್ ಕುಮಾರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ” ಎಂದಿದ್ದಾರೆ. ಪೈಲ್ವಾನ್ ಚಿತ್ರತಂಡದ ಈ ನಿರ್ಧಾರವನ್ನು ಪವರ್ ಸ್ಟಾರ್ ಕೂಡ ಸ್ವಾಗತಿಸಿ ಅವರ ಕಾರ್ಯಕ್ಕೆ ಬೆಂಬಲ ನೀಡಿದ್ಧಾರೆ.











































