ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಹೊಸ ಟೈಟಲ್ ಕೊಟ್ಟ ಸುಮಲತಾ ಅಂಬರೀಶ್!

Picture of Cinibuzz

Cinibuzz

Bureau Report

ಇತ್ತೀಚಿಗೆ ಕುರುಕ್ಷೇತ್ರ ಸಿನಿಮಾ ಬಿಡುಗಡೆಗೂ ಮುನ್ನವೇ ಬೆಂಗಳೂರಿನ ಮಂತ್ರಿಮಾಲ್ ನಲ್ಲಿ ಸಿನಿತಾರೆಯರಿಗಾಗಿ ಪ್ರೀಮಿಯರ್ ಶೋವನ್ನು ಏರ್ಪಡಿಸಲಾಗಿತ್ತು. ಆಗ ಸಾಕಷ್ಟು ಸಿನಿಮಾ ಮಂದಿ ಕುರುಕ್ಷೇತ್ರ ಸಿನಿಮಾವನ್ನು ನೋಡಲು ಬಂದಿದ್ದರು. ಈ ಮಧ್ಯೆ ದರ್ಶನ್ ಅವರ ಕುರುಕ್ಷೇತ್ರ ಸಿನಿಮಾವನ್ನು ನೋಡಲು ಬಂದಿದ್ದ ಅಂಬರೀಶ್ ಪತ್ನಿ, ಸಂಸದೆ ಸುಮಲತಾ ಸಿನಿಮಾ ನೋಡಿ ದರ್ಶನ್ ಸೇರಿದಂತೆ ಎಲ್ಲ ನಟರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಗೊಳ್ಳಿ ರಾಯಣ್ಣ ಸಿನಿಮಾದ ಬಳಿಕ ದರ್ಶನ್ ಅವರಿಗೆ ಕುರುಕ್ಷೇತ್ರ ಲ್ಯಾಂಡ್ ಮಾರ್ಕ್ ಆಗುತ್ತದೆ. ದುರ್ಯೋಧನ ಅಂದರೆ ದರ್ಶನ್ ಎನ್ನುವಷ್ಟರ ಮಟ್ಟಿಗೆ ಅವರ ನಟನೆ ಇದೆ. ದರ್ಶನ್ ಇನ್ನು ಮುಂದೆ ಡಿ ಬಾಸ್ ಅಲ್ಲ, ದುರ್ಯೋಧನ ಬಾಸ್ ಎಂದು ಹೊಸ ಟೈಟಲ್ ನ್ನು ನೀಡಿದ್ದಾರೆ. ಇನ್ನು ಈ ಸಿನಿಮಾ ನನಗೆ ತುಂಬಾ ಭಾವನಾತ್ಮಕ ವಿಚಾರವಾಗಿದೆ. ಅಂಬರೀಶ್ ಅವರನ್ನು ಮತ್ತೆ ಈ ಸಿನಿಮಾದಲ್ಲಿ ನೋಡುತ್ತಿದ್ದೇವೆ. ಅವರು ನಟಿಸಲ್ಲ ಎಂದರೂ ಮುನಿರತ್ನ ಅವರ ಕೋರಿಕೆ ಮೇಲೆ ನಟಿಸಿದ್ದರು. ಆದ್ದರಿಂದಲೇ ಅವರನ್ನು ಮತ್ತೆ ನೋಡುವ ಅವಕಾಶ ಸಿಕ್ಕಿದೆ ಎಂದರು.

ಇನ್ನಷ್ಟು ಓದಿರಿ

Scroll to Top