ಉತ್ತರ ಕರ್ನಾಟಕದ ನೆರೆ ಸಂತ್ರಸ್ಥರಿಗೆ ಸನ್ನಿಲಿಯೋನ್ 2 ಕೋಟಿ ನೆರವು!

Picture of Cinibuzz

Cinibuzz

Bureau Report

ಸಮಾಜ ಆಕೆಯನ್ನು ನೋಡುವುದು ಬೇರೆ ರೀತಿ. ಆಕೆಯೂ ಸಮಾಜವನ್ನೂ ನೋಡುವ ರೀತಿಯೂ ಬೇರೆಯೇ. ಎಲ್ಲವೂ ಇದ್ದು ಏನೂ ಇಲ್ಲದಂತೆ ಕೈ ಚೆಲ್ಲಿ ಕೂರುವ ಮಂದಿಗೆ ಸನ್ನಿ ಲಿಯೋನ್ ಪ್ರತ್ಯಕ್ಷ ನಿದರ್ಶನ. ಎಲ್ಲೇ ಯಾರೇ ಸಂಕಷ್ಟ ಎಂಬ ವಿಚಾರ ಕಿವಿಗೆ ಬಿದ್ದರೂ ಸಹ ಅಲ್ಲಿ ಬಾಲಿವುಡ್ ಸುಂದರಿ ಸನ್ನಿ ಲಿಯೋನ್ ನೆರವಿನ ಹಸ್ತ ಮೊದಲಿರುತ್ತದೆ. ಕೊಡಗು, ಕೇರಳ ನೆರೆ ಪ್ರವಾಹದಲ್ಲಿಯೂ ತನ್ನ ಕೈಲಾದ ನೆರವನ್ನು ನೀಡಿದ್ದ ಸನ್ನಿಲಿಯೋನ್ ಉತ್ತರ ಕರ್ನಾಟಕದ ನೆರೆ ಸಂತ್ರಸ್ಥರ ನೆರವಿಗಾಗಿ ಎರಡು ಕೋಟಿ ನೀಡಿದ್ದಾರೆಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇದು ಸುಳ್ಳೋ ನಿಜವೋ ಎಂಬ ಗೊಂದಲದಲ್ಲಿದ್ದ ಮಂದಿಗೆ ನಿವೃತ್ತ ಡಿಜಿಪಿ ಶಂಕರ್ ಬಿದರಿ ಟ್ವಿಟರ್ ನಲ್ಲಿ “ಉತ್ತರ ಕರ್ನಾಟಕ ಪರಿಹಾರ ನಿಧಿಗೆ ಸನ್ನಿಲಿಯೋನ್ 2 ಕೋಟಿ ಕೊಟ್ಟಿದ್ದಾರೆ” ಎಂದು ಬರೆದುಕೊಳ್ಳುವ ಮೂಲಕ ಶಾಕ್ ನೀಡಿದ್ದಾರೆ.

ಇನ್ನಷ್ಟು ಓದಿರಿ

Scroll to Top