ಉತ್ತರ ಕರ್ನಾಟಕದ ಜಾನುವಾರುಗಳಿಗೆ ಮೇವು ನೆರವು ನೀಡಿದ ಲೀಲಾವತಿ!

Picture of Cinibuzz

Cinibuzz

Bureau Report

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರು ಹಾಗೂ ನೆಲೆ ಕಳೆದುಕೊಂಡ ಜಾನುವಾರುಗಳ ಮೂಕರೋದನೆಗೆ ಹಿರಿಯ ನಟಿ ಡಾ. ಎಂ. ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್ ಸ್ಪಂದಿಸಿದ್ದಾರೆ. ಜಾನುವಾರುಗಳಿಗಾಗಿ ಸ್ವಂತ ಖರ್ಚಿನಲ್ಲಿ ಜೋಳದ ಕಡ್ಡಿ ಖರೀದಿ ಮಾಡಿ ಲಾರಿಯಲ್ಲಿ ಮೇವನ್ನು ತುಂಬಿ ಕಳುಹಿಸಿದ್ದಾರೆ.

ತಾಲೂಕಿನ ಸೋಲದೇವನಹಳ್ಳಿಯಲ್ಲಿ ತಮ್ಮ ಪುತ್ರನೊಟ್ಟಿಗೆ ನೆಲೆಸಿರುವ ಲೀಲಾವತಿ ಅವರು ಗ್ರಾಮದ ರೈತರು ಬೆಳೆದಿದ್ದ ಜೋಳದ ಕಡ್ಡಿಯನ್ನು ಖರೀದಿಸಿ ನೆರೆ ಹಾವಳಿಯಿಂದ ಬಳಲುತ್ತಿರುವ ರಾಸುಗಳಿಗೆ ಮೇವನ್ನು ಸಾಗಿಸಲು ಮುಂದಾಗಿರೋದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನಷ್ಟು ಓದಿರಿ

Scroll to Top