ಬೆಲ್ ಬಾಟಂ ಜಯತೀರ್ಥ ಮುಂದಿನ ಸಿನಿಮಾ ಬನಾರಸ್!

Picture of Cinibuzz

Cinibuzz

Bureau Report

ಕಾಂಗ್ರೆಸ್ ಪಕ್ಷದ ಮಾಜಿ ಮಂತ್ರಿ ಜಮೀರ್ ಅಹಮದ್ ಅವರ ಪುತ್ರ ಸ್ಯಾಂಡಲ್ ವುಡ್ ಗೆ ಸದ್ಯದಲ್ಲೇ ಲಾಂಚ್ ಆಗಲಿದ್ದಾರೆ. ಆ ಚಿತ್ರವನ್ನು ಬೆಲ್ ಬಾಟಂ ಖ್ಯಾತಿಯ ಜಯತೀರ್ಥ ನಿರ್ದೇಶನ ಮಾಡುತ್ತಿದ್ದಾರೆ ಎಂಬ ಸುದ್ದಿ ಇಂದು ನಿನ್ನೆಯದಲ್ಲ. ಅದಕ್ಕಾಗಿಯೇ ಜಯತೀರ್ಥ ಕಾಶಿ ಯಾತ್ರೆಯನ್ನು ಮಾಡಿಯೂ ಬಂದಿದ್ದರು. ಆದರೆ ಬರೀ ಲೊಕೇಷನ್ ಹುಡುಕಾಟಕ್ಕಾಗಿ ಕಾಶಿಗೆ ಹೋದರೋ ಇಲ್ಲ ಕಥೆಯೊಂದರ ಜಾಡು ಹಿಡಿದು ಹೋದರೋ ಎಂಬ ರಹಸ್ಯವನ್ನು ಮಾತ್ರ ಜಯತೀರ್ಥ ಎಲ್ಲಿಯೂ ಬಿಟ್ಟುಕೊಟ್ಟಿರಲಿಲ್ಲ. ಸದ್ಯ ಅವರ ಹೊಸ ಚಿತ್ರಕ್ಕೆ ಟೈಟಲ್ ಅನೌನ್ಸ್ ಮಾಡಿದ್ದು ಬನಾರಸ್ ಎಂದು ಹೆಸರಿಟ್ಟಿದ್ದಾರೆ.

ಪಕ್ಕಾ ಲವ್ ಪ್ಯೂರ್ ಲವ್ ಸ್ಟೋರಿಯಾಗಿರುವ ಬನಾರಸ್ ಚಿತ್ರಕ್ಕೆ ಪಂಚತಂತ್ರ ಖ್ಯಾತಿಯ ಸೋನಲ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ವಾರಣಾಸಿ, ಕಾಶಿ ಸೇರಿದಂತೆ ಉತ್ತರ ಭಾರತದಲ್ಲಿ ಬನಾರಸ್ ಶೂಟಿಂಗ್ ನಡೆಸುವ ಪ್ಲ್ಯಾನ್ ನಲ್ಲಿರುವ ಜಯತೀರ್ಥ ನೆಟಿವಿಟಿಗೆ ತಕ್ಕಂತೆ ಲೊಕೇಶನ್ ಸೆಲೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಹಾಗೂ ಅದ್ವೈತ್​  ಛಾಯಾಗ್ರಹಣ ಇರಲಿದೆ. ಇನ್ನು ಇದೇ ಆಗಸ್ಟ್​ ತಿಂಗಳ ಕೊನೆಯಲ್ಲಿ ಚಿತ್ರದ ಟೈಟಲ್, ಟೀಸರ್​ ರಿಲೀಸ್ ಮಾಡೋಕೆ ಚಿತ್ರತಂಡ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಈಗಾಗಲೇ ಚಿತ್ರ ಕಥೆಯಿಂದಾಗಿ ದೊಡ್ಡ ನಿರೀಕ್ಷೆ ಹುಟ್ಟುಹಾಕಿರುವ ಬನಾರಸ್ ನಲ್ಲಿ ಯಾರೆಲ್ಲಾ ಇರಲಿದ್ದಾರೆ ಕಾದು ನೋಡಬೇಕಿದೆ.

ಇನ್ನಷ್ಟು ಓದಿರಿ

Scroll to Top