ಉಪೇಂದ್ರ ಜತೆ ಶಶಾಂಕ್ ಸಿನಿಮಾ!

Picture of Cinibuzz

Cinibuzz

Bureau Report

ಐ ಲವ್ ಯು ಚಿತ್ರದ ನಂತರ ಲಕ್ ಖುಲಾಯಿಸಿರುವ ರಿಯಲ್ ಸ್ಟಾರ್ ಉಪೇಂದ್ರ ಸದ್ಯ ಫುಲ್ ಬ್ಯುಸಿಯಾಗಿದ್ದಾರೆ. ಒಂದರ ಮೇಲೆ ಒಂದರಂತೆ ಸಿನಿಮಾಗಳನ್ನು ಒಪ್ಪಿಕೊಂಡಿರುವ ಅವರು ಕೃಷ್ಣಲೀಲಾ ಖ್ಯಾತಿಯ ಶಶಾಂಕ್ ನಿರ್ದೇಶನದ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಮಹೂರ್ತ ಪ್ರೊಡಕ್ಷನ್ ನಂಬರ್ 1 ನಾಮ ಫಲಕದಲ್ಲಿ ಇಂದು ನೆರವೇರಿತು.

ಈ ಚಿತ್ರದಲ್ಲಿ ಉಪೇಂದ್ರ ಜತೆಯಾಗಿ ನಿಶ್ವಿಕಾ ನಾಯ್ಡು ಮತ್ತು ಬೀರ್ ಬಲ್ ಖ್ಯಾತಿಯ ರುಕ್ಮಿಣಿ ನಾಯಕಿಯರಾಗಿ ಅಭಿನಯಿಸಲಿದ್ದು, ಶಶಾಂಕ್ ತಮ್ಮದೇ ಬ್ಯಾನರ್ ನಲ್ಲಿ ನಿರ್ಮಾಣವನ್ನು ಮಾಡುತ್ತಿದ್ದಾರೆ. ಇನ್ನು ಮುಂದಿನ ತಿಂಗಳ ಉಪೇಂದ್ರ ಹುಟ್ಟುಹಬ್ಬಕ್ಕೆ ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ನ್ನು ಬಿಡುಗಡೆಗೊಳಿಸುವ ಪ್ಲ್ಯಾನ್ ನಲ್ಲಿ ಶಶಾಂಕ್ ಇದ್ದಾರೆ.

 

ಇನ್ನಷ್ಟು ಓದಿರಿ

Scroll to Top