ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಿಸಿದ ನೀನಾಸಂ ಸತೀಶ್!

Picture of Cinibuzz

Cinibuzz

Bureau Report

ಸಹೃದಯಿಗಳು ನೆರವಿನ ಹಸ್ತವನ್ನು ಚಾಚಿದಾಗ ಮಾತ್ರವಷ್ಟೇ ತೂಗುಕತ್ತಿಯ ಮಧ್ಯೆಯಿರುವ ಉತ್ತರ ಕರ್ನಾಟಕದ ಮಂದಿ ಪಾರಾಗಲು ಸಾಧ್ಯ. ಇದರಿಂದ ನೂರಾರು ಸಂಘಸಂಸ್ಥೆಗಳು, ಸೆಲೆಬ್ರೆಟಿಗಳು, ಸರ್ಕಾರ, ಎನ್ ಜಿ ಓಗಳು ಸಹ ನೆರೆ ಹಾವಳಿಗೆ ತುತ್ತಾದವರಿಗೆ ಸಹಾಯ ಹಸ್ತ ಚಾಚುತ್ತಲೇ ಇದೆ.

ಈ ಮಧ್ಯೆ ಗದನ ಜಿಲ್ಲೆಯಲ್ಲಿ ಮಲಪ್ರಭಾ ನದಿಯ ಪ್ರವಾಹದಿಂದ ಹಲವು ಗ್ರಾಮಗಳು ಮುಳುಗಡೆಯಾಗಿ ಜನ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂತ್ರಸ್ತರನ್ನು ಭೇಟಿ ಮಾಡಿದ ನಟ ನೀನಾಸಂ ಸತೀಶ್ ಪರಿಹಾರ ಸಾಮಗ್ರಿ ವಿತರಿಸಿದ್ದಾರೆ. ಅಲ್ಲದೇ ಪುಣ್ಯಾಶ್ರಮದಲ್ಲಿ ಸಂತ್ರಸ್ತರೊಂದಿಗೆ ಮಾತನಾಡಿ ಧೈರ್ಯ ಹೇಳಿದ್ದಾರೆ.  ವೀರೇಶ್ವರ ಪುಣ್ಯಾಶ್ರಮದ ಪುಟ್ಟಯ್ಯಜ್ಜನವರ ಗದ್ದುಗೆ ದರ್ಶನ ಪಡೆದ ನೀನಾಸಂ ಸತೀಶ್ ಕಲ್ಲಯ್ಯಜ್ಜನವರ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top