ಕರ್ನಾಟಕ ಹಾಗೂ ಕೇರಳದ ನೆರೆ ಸಂತ್ರಸ್ತರ ನೆರವಿಗೆ ಕಾಲಿವುಡ್ ಖ್ಯಾತ ನಟರಾದ ಸೂರ್ಯ ಮತ್ತು ಕಾರ್ತಿ ಸಹಾಯ ಹಸ್ತ ಚಾಚಿದ್ದಾರೆ. ತಮಿಳು ಚಿತ್ರರಂಗದ ಈ ಸಹೋದರರುಮಹಾಮಳೆಗೆ ನಲುಗಿರುವ ಕುಟುಂಬಗಳಿಗೆ ಧನ ಸಹಾಯ ಮಾಡಿದ್ದಾರೆ.

ರಾಜ್ಯದಲ್ಲಿ ಹಾಗೂ ಕೇರಳದಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಸಾವಿರಾರು ಜನರು ಮನೆ ಮಠ ಕಳೆದುಕೊಂಡಿದ್ದಾರೆ. ಭೀಕರ ಮಳೆಗೆ ಎರಡು ರಾಜ್ಯದಲ್ಲಿ ಇದುವರೆಗೆ 150ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ ಸಾವಿರಾರು ಮಂದಿ ನಿರಾಶ್ರಿತರಾಗಿ ಗಂಜಿ ಕೇಂದ್ರದಲ್ಲಿ ದಿನದೂಡುವಂತಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ನಟ ಸೂರ್ಯ ಹಾಗೂ ಕಾರ್ತಿ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.











































