ಪಾರವ್ವನ ಕನಸು ಆಡಿಯೋ ಬಿಡುಗಡೆ!

Picture of Cinibuzz

Cinibuzz

Bureau Report

ಸಿ. ಮಲ್ಲಿಕಾರ್ಜುನ್ ನಿರ್ದೇಶನದ ಪಾರವ್ವನ ಕನಸು ಚಿತ್ರದ ಧ್ವನಿಸುರಳಿ ಬಿಡುಗಡೆ ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆಯಿತು. ಒಂದು ಹಳ್ಳಿಯಲ್ಲಿ ಕೂಲಿ ಕೆಲಸ ಮಾಡುವ ಮಹಿಳೆ ಪಾರವ್ವ. ತಾನು ಇರುವ ಹಳೆ ಮನೆಯನ್ನು ಕೆಡವಿ, ಒಳ್ಳೆಯ ಮನೆ ಕಟ್ಟಿಸಿ, ತನ್ನ ಇಬ್ಬರು ಮಕ್ಕಳಿಗೆ ಒಳ್ಳೆಯ ದಾರಿ ತೋರಿಸಬೇಕು ಎಂಬುದು ಪಾರವ್ವಳ ಆಸೆ. ಬೇಜವಾಬ್ದಾರಿ ಕುಡುಕ ಗಂಡನನ್ನು ಸರಿದಾರಿಗೆ ತರಬೇಕು ಎಂಬ ಆಸೆಯೂ ಆಕೆಯಲ್ಲಿರುತ್ತದೆ. ಈ ಆಸೆಗಳನ್ನೆಲ್ಲ ಹೊತ್ತು ಬೆಂಗಳೂರಿಗೆ ಬರುವ ಪಾರವ್ವ ಮುಂದೆ ಏನಾಗುತ್ತಾಳೆ ಎಂಬುದು ಪಾರವ್ವನ ಕಥೆಯ ಒಂದೆಳೆ.

ಚಿತ್ರದ ತಾರಾಗಣದಲ್ಲಿ ಆರ್ ಸುರೇಶ್ ಕುಮಾರ್, ರಶ್ಮಿತಾ, ಅಪೂರ್ವಶ್ರೀ, ಅಂಜನಪ್ಪ, ಶಿವಕುಮಾರ್ ಆರಾಧ್ಯ ಮತ್ತಿತರರು ನಟಿಸಿದ್ದಾರೆ. ಚಿಕ್ಕಮಗಳೂರು, ಮಂಗಳೂರಿನಲ್ಲಿ ಚಿತ್ರದ ಚಿತ್ರೀಕರಣವನ್ನು ನಡೆಸಲಾಗಿದೆ. ಪಾರವ್ವನ ಕನಸು ಚಿತ್ರಕ್ಕೆ ಸುರೇಶ್ ಕುಮಾರ ಬಂಡವಾಳ ಹೂಡಿದ್ಧಾರೆ.

ಇನ್ನಷ್ಟು ಓದಿರಿ

Scroll to Top