ಸೈರಾ ನರಸಿಂಹರೆಡ್ಡಿ ಟೀಸರ್ ಗೆ ಅಜ್ಞಾತವಾಸಿ ಧ್ವನಿ!

Picture of Cinibuzz

Cinibuzz

Bureau Report

ಚಿರಂಜೀವಿ ಅಭಿನಯದ ಹಾಗೂ ರಾಮ್ ಚರಣ್ ತೇಜ್ ನಿರ್ಮಾಣದ ಬಹುನಿರೀಕ್ಷಿತ ತೆಲುಗು ಸಿನಿಮಾ ಸೈರಾ ನರಸಿಂಹ ರೆಡ್ಡಿ. ಅತಿ ದೊಡ್ಡ ಬಜೆಟ್ ನಲ್ಲಿ ಸಿದ್ಧಗೊಳ್ಳುತ್ತಿರುವ ಈ ಚಿತ್ರದಲ್ಲಿ ಚಿರಂಜೀವಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಬಾದ್ ಶಾ ಸುದೀಪ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಚಿರು ಜತೆಯಾಗಿದ್ದಾರೆ.

ಆಗಸ್ಟ್ 20ರಂದು ಸೈರಾ ನರಸಿಂಹ ರೆಡ್ಡಿಯ ಮತ್ತೊಂದು ಟೀಸರ್ ಬಿಡುಗಡೆಯಾಗಲಿದ್ದು, ಅಭಿಮಾನಿಗಳಲ್ಲಿ ಕುತೂಹಲವನ್ನು ಸೃಷ್ಟಿಸಿದೆ. ವಿಶೇಷವೆಂದರೆ ಅಜ್ಞಾತವಾಸಿ ಖ್ಯಾತಿಯ ನಟ, ರಾಜಕಾರಣಿ ಪವನ್ ಕಲ್ಯಾಣ್ ಆ ಟೀಸರ್ ಗೆ ದನಿಯಾಗಿದ್ದಾರೆ. ಹೌದು.. ಟೀಸರ್​ನಲ್ಲಿ ಬರುವ ಘಟನೆ ಹಾಗೂ ಪಾತ್ರಗಳನ್ನು ವಿವರಿಸಲು ಪವನ್​ ಕಲ್ಯಾಣ್​ ಧ್ವನಿ ನೀಡಿದ್ದಾರಂತೆ. ಈ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ‘ಅಜ್ಞಾತವಾಸಿ’ ಸಿನಿಮಾ ಪ್ಲಾಫ್​ ಆದ ನಂತರ ಪವನ್​ ಕಲ್ಯಾಣ್​ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲೂ ಅವರು ಸ್ಪರ್ಧಿಸಿದ್ದರು. ಈಗ ವರ್ಷದ ನಂತರ ಅವರು ಮತ್ತೆ ಸಿನಿಮಾ ಕೆಲಸದಲ್ಲಿ ತೊಡಗಿದ್ದು ಅಭಿಮಾನಿಗಳಿಗೆ ಸಂತಸ ತಂದಿದೆ.

ಇನ್ನಷ್ಟು ಓದಿರಿ

Scroll to Top