ರವಿ ಬೋಪಣ್ಣದಲ್ಲಿ ಕರಿಕೋಟು ತೊಟ್ಟ ಪೈಲ್ವಾನ್!

Picture of Cinibuzz

Cinibuzz

Bureau Report

ಕಿಚ್ಚ ಸುದೀಪ್ ನಿರ್ದೇಶನದ ಮಾಣಿಕ್ಯ ಸಿನಿಮಾ ಬಿಡುಗಡೆಯಾದ ಮೇಲಂತೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸೆಕೆಂಡ್ ಇನ್ನಿಂಗ್ಸ್ ಶುರುವಾಯಿತು ಎಂದು ಹೇಳಬಹುದು. ಕೇವಲ ನಾಯಕನ ಪಾತ್ರವೇ ಬರುತ್ತಿದ್ದ ಕಾಲ ಹೋಗಿ ಸಾಕಷ್ಟು ವಿಭಿನ್ನವಾದ ಪಾತ್ರಗಳನ್ನು ರವಿಚಂದ್ರನ್ ನಟಿಸುವಂತೆ ಆಯಿತು. ದಶರಥ ಚಿತ್ರದಲ್ಲಿ ಲಾಯರ್ ಗಿರಿ ತೋರಿದ್ದ ಕ್ರೇಜಿಸ್ಟಾರ್ ಸದ್ಯ ಕುರುಕ್ಷೇತ್ರ ಚಿತ್ರದಲ್ಲಿ ಕೃಷ್ಣನಾಗಿ ಕಮಾಲು ಮಾಡಿದ್ದಾರೆ.

ಇದೀಗ ರವಿಚಂದ್ರನ್ ರವಿ ಬೋಪಣ್ಣ ಎಂಬ ಹೊಸ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ವಿಶೇಷ ಪಾತ್ರದಲ್ಲಿ ಸುದೀಪ್ ಕೂಡ ಅಭಿನಯಿಸುತ್ತಿದ್ದಾರೆ. ಈ ಬಾರಿ ಸುದೀಪ್ ರವಿ ಬೋಪಣ್ಣ ಚಿತ್ರದಲ್ಲಿ ಕರಿಕೋಟು ಧರಿಸಿ ವಕೀಲರಾಗಿ ಕಾಣಿಸಿಕೊಳ್ಳಲಿದ್ದಾರೆ ವಿಶೇಷವೆಂದರೆ ಸುದೀಪ್, ರವಿಚಂದ್ರನ್ ಮೇಲಿನ ಪ್ರೀತಿ ವಿಶ್ವಾಸಕ್ಕೆ ಕಥೆ ಮತ್ತು ಪಾತ್ರದ ವಿವರ ಕೇಳದೇ ರವಿ ಬೋಪಣ್ಣ ಸಿನಿಮಾದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.  ಈ ಹಿಂದೆ ಮಾಣಿಕ್ಯ ಚಿತ್ರದಲ್ಲಿ ಅಪ್ಪ ಮಗನಾಗಿ ನಟಿಸಿದ್ದಲ್ಲದೇ ರವಿಚಂದ್ರನ್ ಗೆ ಸುದೀಪ್ ಆ್ಯಕ್ಷನ್ ಕಟ್ ಹೇಳಿದ್ದರು. ಸದ್ಯ ರವಿ ಬೋಪಣ್ಣ ಸಿನಿಮಾದಲ್ಲಿ ಕ್ರೇಜಿಸ್ಟಾರ್ ಪೈಲ್ವಾನ್ ಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಹೊಸ ದಾಖಲೆ ಬರೆಯಲಿದ್ದಾರೆ.

ಇನ್ನಷ್ಟು ಓದಿರಿ

Scroll to Top