ಎಡವಬ್ಯಾಡ ಚಿಟ್ಟೆ!

Picture of Cinibuzz

Cinibuzz

Bureau Report

ರಾಜಾ ಹುಲಿ, ರುದ್ರ ತಾಂಡವ ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಅನ್ನಿಸಿಕೊಂಡು, ನಂತರ ಅಲೋನ್ ಅನ್ನೋ ಸಿನಿಮಾದಲ್ಲಿ ಹೀರೋ ಕೂಡಾ ಆಗಿದ್ದವರು ನಟ ವಸಿಷ್ಟ ಸಿಂಹ. ಇಂಥಾ ವಸಿಷ್ಠರನ್ನು ಜನ ಗುರುತಿಸಿದ್ದು ಮಫ್ತಿ, ಗೋಧಿ ಬಣ್ಣ ಮತ್ತು ಟಗರು ಸಿನಿಮಾಗಳಲ್ಲಿ ಮಾತ್ರ.

ಮನೆ, ಮಾಲ್ ಮುಂತಾದೆಡೆ ಒಳಗಿದ್ದಾಗಲೂ ವಸಿಷ್ಠ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಓಡಾಡುತ್ತಾರೆ ಎನ್ನುವ ಘನಘೋರ ಆರೋಪವೊಂದಿದೆ. ಇತ್ತೀಚೆಗೆ ಒರಾಯನ್ ಮಾಲ್’ನಲ್ಲಿ ಕೂಲಿಂಗ್ ಕನ್ನಡಕ ಹಾಕಿಕೊಂಡು ನಡೆದು ಹೋಗುತ್ತಿದ್ದ ವಸಿಷ್ಠ ಮುಗ್ಗರಿಸಿ ಬಿದ್ದರು ಅನ್ನೋ ವರ್ತಮಾನವೊಂದು ಕೇಳಿಬಂದಿದೆ!

ಟಗರು ಬಿಟ್ಟ ಟಾರ್ಚ್ ಲೈಟಲ್ಲಿ ಚಿಟ್ಟೆ ವಸಿಷ್ಠ ಕೂಡಾ ಮಿಂಚುತ್ತಿದ್ದಾರೆ. ಒಂದು ಸಿನಿಮಾ ಹಿಟ್ ಆಗಿ, ಪ್ರಭೆ ಹೆಚ್ಚುತ್ತಿದ್ದಂತೇ ಏರೋಪ್ಲೇನು ಚಿಟ್ಟೆಯಂಥಾ ಜನ ಸುತ್ತುವರೆಯುತ್ತಾರೆ. ಅಂಥವರ ಹಾರಾಟದ ಅವಧಿ ಕಡಿಮೆ. ಅದನ್ನು ವಸಿಷ್ಠ ಕೂಡಾ ಅರ್ಥ ಮಾಡಿಕೊಳ್ಳಲಿ. ಒಂದೊಂದು ಹೆಜ್ಜೆಯನ್ನೂ ಎಚ್ಚರದಿಂದಿಡುವಂಥಾಗಲಿ. ಮೊದಲು ಆ ಕಪ್ಪು ಕನ್ನಡಕವನ್ನು ಬಿಚ್ಚಿಡಲಿ. ಅಂದಹಾಗೆ, ಕೆ. ಲಕ್ಷ್ಮಣ್ ಶ್ರೀರಾಮ್ ಎನ್ನುವ ಹೊಸ ನಿರ್ದೇಶಕರ `ತಲ್ವಾರ್ ಪೇಟೆ’ ಎನ್ನುವ ಸಿನಿಮಾ ಈಗಷ್ಟೇ ಶೂಟಿಂಗ್ ಆರಂಭಿಸಿದೆ. ಈ ಸಿನಿಮಾ ಗಟ್ಟಿ ದನಿಯ ವಸಿಷ್ಠ ಅವರ ವೃತ್ತಿಬದುಕನ್ನು ಮತ್ತಷ್ಟು ಗಟ್ಟಿ ಮಾಡಲಿ ಎಂದು ಆಶಿಸೋಣ.

ಇನ್ನಷ್ಟು ಓದಿರಿ

Scroll to Top