ಸಹೋದರ ಸತ್ಯನಾರಾಯಣನ ಆರೋಗ್ಯ ವಿಚಾರಿಸಿದ ರಜನಿಕಾಂತ್!

Picture of Cinibuzz

Cinibuzz

Bureau Report

ದರ್ಬಾರ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಸೂಪರ್ ಸ್ಟಾರ್ ರಜನಿಕಾಂತ್ ಸಡನ್ನಾಗಿಯೇ ಬೆಂಗಳೂರಿನ ಶೇಷಾದ್ರಿಪುರಂಗೆ ದೌಡಾಯಿಸಿದ್ದಾರೆ. ಅಪೋಲೋ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಸಹೋದರ ಸತ್ಯನಾರಾಯಣ ಅವರನ್ನು ನೋಡಲು ಬಂದಿದ್ದ ರಜನಿಕಾಂತ್ ಅವರನ್ನು ಟ್ರೀಟ್ ಮಾಡಿದ ವೈದ್ಯ ಕಿರಣ್ ಚೌಕ್ ಅವರೊಂದಿಗೂ ಮಾತನಾಡಿದ್ದಾರೆ.

ಬಹಳ ದಿನಗಳಿಂದ ಮಂಡಿನೋವಿಂದ ಬಳಲುತ್ತಿದ್ದ ರಜನಿ ಸಹೋದರ ಸತ್ಯನಾರಾಯಣ ಅಪೋಲೋ ಆಸ್ಪತ್ರೆಯಲ್ಲಿ ಮಂಡಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆಗೆ ಮೊದಲು ಅವರಿಗೆ ನಡೆದಾಡುವುದಕ್ಕೂ ತೀರ ಕಷ್ಟವಾಗುತ್ತಿತ್ತಂತೆ. ಚಿಕಿತ್ಸೆಯ ಬಳಿಕ ಆ ಸಮಸ್ಯೆ ದೂರವಾಗಿದ್ದು, ನಡೆಯಲು ಅಡ್ಡಿಯಿಲ್ಲವೆಂದು ವೈದ್ಯರು ತಿಳಿಸಿದ್ದಾರೆ. ರಜನಿಕಾಂತ್ ಆಸ್ಪತ್ರೆಗೆ ಬಂದಿದ್ದಾರೆಂಬ ವಿಚಾರ ತಿಳಿದು ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಆಸ್ಪತ್ರೆಯ ಎದುರು ಜಮಾಯಿಸಿದ್ದರು. ಇದರಿಂದ ಕೆಲ ಗಂಟೆಗಳು ಆಸ್ಪತ್ರೆಯ ಬಳಿ ವಾಹನ ಸಂಚಾರಕ್ಕೂ ಅಡ್ಡಿಯುಂಟಾಗಿತ್ತು.

ಇನ್ನಷ್ಟು ಓದಿರಿ

Scroll to Top