ಮೊಗ್ಗಿನ ಮನಸ್ಸಿನ ಮೂಲಕ ಕನ್ನಡಿಗರ ಮನಗೆದ್ದ ರಾಕಿಂಗ್ ಸ್ಟಾರ್ ಕೆಜಿಎಫ್ ಮೂಲಕ ಭಾರತವನ್ನೇ ಗೆದ್ದು ಬೀಗುತ್ತಿರುವ ನಟ. ತಮ್ಮ ವಿಭಿನ್ನ ಡೈಲಾಗ್ ಡೆಲಿವರಿ, ಸ್ಪುರಧ್ರೂಪಿ ಸೌಂದರ್ಯದ ಮೂಲಕ ಪಡ್ಡೆ ಹುಡುಗಿಯರ ಕಮ್ ಹುಡುಗರ ಹಾರ್ಟ್ ಫೇವರೇಟ್ ಆಗಿರುವ ಯಶ್ ಕರ್ನಾಟಕದ ಮಗನಾಗಿ ಇಡೀ ಭಾರತವೇ ಕನ್ನಡ ಚಿತ್ರದತ್ತ ತಿರುಗಿ ನೋಡುವಂತೆ ಮಾಡಿರುವ ಖ್ಯಾತಿಯನ್ನು ಗಳಿಸಿದ್ದಾರೆ. ಅವರ ಸಾಧನೆಗೆ ಪ್ರತೀಕವಾಗಿ ಈಗಾಗಲೇ ಸಾಕಷ್ಟು ಪ್ರಶಸ್ತಿಗಳು ದೊರೆತಿದ್ದು, ಸದ್ಯ ಕೆಜಿಎಫ್ ಚಿತ್ರಕ್ಕಾಗಿ ಸೌತ್ ಇಂಡಿಯಾದ ದಾದಾ ಸಾಹೇಬ್ ಪಾಲ್ಕೆ ಸೌತ್ ಪ್ರಶಸ್ತಿ ಲಭಿಸಿದೆ. ವಿಶೇಷವೆಂದರೆ ಇದು ಕನ್ನಡಕ್ಕೆ ದೊರೆಯುತ್ತಿರುವ ಮೊದಲ ಪ್ರಶಸ್ತಿ ಕೂಡ.

ದಾದಾ ಸಾಹೇಬ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ವತಿಯಿಂದ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತಿದ್ದು, ಸೆಪ್ಟೆಂಬರ್ 20ರಂದು ಹೈದರಾಬಾದ್ ನಲ್ಲಿ ಸಮಾರಂಭ ನಡೆಯಲಿದೆ. ಸೌತ್ ಇಂಡಿಯಾದ ಬೆಸ್ಟ್ ಪರ್ಫಾಮರ್ ಆಫ್ ದಿ ಇಯರ್ ಆಧಾರದ ಮೇಲೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.











































