ತನಿಖೆ ಸಾಂಗು ರಿಲೀಸಾಯ್ತು!

Picture of Cinibuzz

Cinibuzz

Bureau Report

ಜಿ.ಎಸ್.ಕಲಿಗೌಡ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ತನಿಖೆ ಚಿತ್ರದ ಹೆಸರು ಕೇಳಿದರೆ ಇದೊಂದು ಪೊಲೀಸ್ ಇನ್ಸ್‌ವೆಸ್ಟಿಗೇಷನ್ ಕುರಿತಾದ ಕಥೆ ಹೊಂದಿರೋ ಚಿತ್ರ ಎನಿಸಬಹುದು. ಆದರೆ ನಿರ್ದೇಶಕರು ಯಾವುದೇ ಕ್ರೈ ಸ್ಟೋರಿಯನ್ನು ಈ ಚಿತ್ರದ ಮೂಲಕ ಹೇಳಹೊರಟಿಲ್ಲ. ಇಲ್ಲೊಂದು ನಿಗೂಡವಾದ ಕಥೆಯಿದೆ. ಕ್ರಿಸ್ಟೋಫರ್ ಲೀ ಅವರ ಸಂಗೀತ ಸಂಯೋಜನೆ ಈ ಚಿತ್ರದ ಹಾಡುಗಳಿಗಿದೆ. ಶ್ಯಾಮ್‌ಸಿಂಧನೂರು ಚಿತ್ರಕ್ಕೆ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ. ಆರ್.ಡಿ.ಅನಿಲ್ ಕಾದೇನಹಳ್ಳಿ, ಕಲಿಗೌಡ ಹಾಗೂ ಮುನಿರಾಜು ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.


ಮಂಡ್ಯದ ಬಳಿ ನಡೆದಂಥ ನೈಜ ಘಟನೆಯನ್ನು ಆಧರಿಸಿ ತನಿಖೆ ಚಿತ್ರದ ಕಥಾ ಹಂದರವನ್ನು ಹೆಣೆಯಲಾಗಿದೆ.ಮೈಸೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಇದೊಂದು ಲವ್ ಸಬ್ಜೆಕ್ಟ್ ಆದರೂ ಶೀರ್ಷಿಕೆ ಮಾತ್ರ ತನಿಖೆ ಎಂದಿದೆ. ಗ್ರಾಮೀಣ ಭಾಗದಲ್ಲಿ ನಡೆಯುವ ಕಥೇ ಇದಾಗಿದ್ದು, ಏನೋ ಒಂದು ಸಮಸ್ಯೆ ಉಂಟಾದಾಗ ಅದನ್ನು ಹೇಗೆ ತನಿಖೆ ಮಾಡುತ್ತಾರೆ ಎನ್ನುವುದು ಈ ಚಿತ್ರದ ಕಥೆ ಎಂದು ನಿರ್ದೇಶಕ ಜಿ.ಎಸ್.ಕರೀಗೌಡ ಹೇಳಿದರು.


ಈ ಹಿಂದೆ ಈ ಚಿತ್ರವನ್ನು ಬೇರೊಬ್ಬ ನಿರ್ದೇಶಕರು ಆರಂಭಿಸಿದ್ದರು. ಆದರೆ ಕಾರಣಾಂತರಗಳಿಂದ ಅರ್ಧಕ್ಕೆ ಬಿಟ್ಟು ಹೋದ ಕಾರಣ ಕರೀಗೌಡ ಅವರು ಚಿತ್ರದ ಉಳಿದ ಕೆಲಸಗಳನ್ನು ಕಂಪ್ಲೀಟ್ ಮಾಡಿ ತೆರೆಗೆ ತರುತ್ತಿದ್ದಾರೆ. ಎರಡು ದಶಕಗಳ ಹಿಂದೆ ಬಂದ ತನಿಖೆ ಚಿತ್ರದಲ್ಲಿದ್ದ ಡಿಂಗ ಡಿಂಗ ಹಾಡು ಜನಪ್ರಿಯವಾಗಿತ್ತು. ಆಗಲೇ ನನಗೆ ಈ ಶೀರ್ಷಿಕೆ ಇಷ್ಟವಾಗಿತ್ತು. ಆದ್ದರಿಂದ ತನಿಖೆ ಹೆಸರಿನಲ್ಲಿ ಚಿತ್ರ ಮಾಡಿರುವುದಾಗಿ ನಿರ್ದೇಶಕ ಕಲಿಗೌಡ ಹೇಳಿದರು. ಅನಿಲ್ ಹಾಗೂ ಚಂದನ್ ಈ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ಅಭಿನಯಿಸಿದ್ದಾರೆ. ವಿಶೇಷ ಎಂದರೆ ಈ ಚಿತ್ರದ ನಿರ್ದೇಶಕ ಹಾಗೂ ನಾಯಕ ಇಬ್ಬರೂ ನಿರ್ಮಾಪಕರು ಸದ್ಯದಲ್ಲೇ ಚಿತ್ರವನ್ನು ರಿಲೀಸ್ ಮಾಡುವುದಾಗಿ ನಿರ್ದೇಶಕ ಕಲಿಗೌಡ ತಿಳಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top