ಒಡೆಯ ಸಿನಿಮಾದ ಚಿತ್ರೀಕರಣಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಚಿತ್ರತಂಡ ಸ್ವಿಜರ್ಲ್ಯಾಂಡ್‌ಗೆ ಹೊರಟು ನಿಂತಿದೆ.
ಇತ್ತೀಚೆಗಷ್ಟೇ ದರ್ಶನ್ ತಮ್ಮ ಕೀನ್ಯಾಗೆ ಖಾಸಗಿ ಪ್ರವಾಸಕ್ಕೆ ಹೋಗಿಬಂದಿದ್ದರು. ಈಗ ಸ್ವಿಜರ್ಲ್ಯಾಂಡ್‌ಗೆ ಹೊರಡಲು ರೆಡಿಯಾಗುತ್ತಿದ್ದಾರೆ. ಇದೇ ಅಕ್ಟೋಬರ್ ೧೫ ರಂದು ಒಡೆಯನ ತಂಡ ಸ್ವಿಜರ್ಲ್ಯಾಂಡ್‌ಗೆ ತೆರಳಲಿದ್ದು, ಅಲ್ಲಿ ಎರಡು ಹಾಡುಗಳ ಶೂಟಿಂಗ್ ನಡೆಸಲಿದೆ.
ದರ್ಶನ್ ನಟನೆಯ ೫೨ನೇ ಚಿತ್ರ ಇದಾಗಿದ್ದು, ಎಂ.ಡಿ. ಶ್ರೀಧರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ದರ್ಶನ್ ಅವರೊಟ್ಟಿಗೆ ಪಂಕಜ್ ನಾರಾಯಣ್, ಯಶಸ್ ಸೂರ್ಯ ಮುಂತಾದವರು ಕಾಣಿಸಿಕೊಳ್ಳುತ್ತಿದ್ದಾರೆ.
ಈ ಹಾಡುಗಳ ಚಿತ್ರೀಕರಣ ಮುಗಿದರೆ ಬಹುತೇಕ ಸಿನಿಮಾ ಕಂಪ್ಲೀಟ್ ಆದಂತೆ. ನಂತರ ಆಡಿಯೋ, ಟ್ರೇಲರ್ ಬಿಡುಗಡೆ ಹಂತಕ್ಕೆ ಬರಲಿದೆ.












































