ಅಂಗ ವಿಕಲವಾಗಿದ್ದರೂ ಅದಮ್ಯ ಚೇತನದಿಂದ ಸಾಧಿಸಿದ ಎಷ್ಟೋ ಮಂದಿ ಇದ್ದಾರೆ. ಅಂಥವರ ನಡುವೆ ಕೆಲವರು ಚೇಷ್ಟೆ ಮಾಡಿ ಹೆಸರು ಕೆಡಿಸಿಕೊಳ್ಳುತಾರೆ. ಅದಕ್ಕೇ ಹೇಳಿದ್ದು ಗಾದೆ ಮಾತುಗಳನ್ನು ನಿಜವಾಗಿಸುವ ಪ್ರಯತ್ನ ಮಾಡುತ್ತಾರೆ ಅಂತಾ…
ಕೆಲವೊಮ್ಮೆ ಗಾದೆ ಮಾತುಗಳನ್ನು ನಿಜವಾಗಿಸುವ ಕೃತ್ಯಗಳು ನಡೆಯುತ್ತಿರುತ್ತವೆ. ತಿಂಗಳ ಹಿಂದೆ ಚೆನ್ನೈನಲ್ಲಿರುವ ಸೂಪರ್ ಸ್ಟಾರ್ ರಜನಿಕಾಂತ್ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದಿತ್ತು. ಮನೆಯನ್ನೆಲ್ಲಾ ಜಾಲಾಡಿದ ಪೊಲೀಸರಿಗೆ ಇದೊಂದು ಹುಸಿ ಬಾಂಬ್ ಕರೆ ಅನ್ನೋದು ಗೊತ್ತಾಗಿತ್ತು.

ನೆನ್ನೆ ರಾತ್ರಿ ಇಳಯದಳಪತಿ ವಿಜಯ್ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಬಂದಿತ್ತು. ನಿಜವೋ ಸುಳ್ಳೋ ಇಂಥ ಕರೆ ಬಂದಮೇಲೆ ತಕ್ಷಣ ಸಿಬ್ಬಂದಿಯ ಸಮೇತ ಹೋಗಿ ಒಂದು ಸಲ ಶೋಧಿಸುವುದು ಅಧಿಕಾರಿಗಳ ಕರ್ತವ್ಯ. ಹೀಗಾಗಿ, ಸಾಲಿಗ್ರಾಮದಲ್ಲಿರುವ ವಿಜಯ್ ಮನೆಗೆ ನಡುರಾತ್ರಿಯಲ್ಲಿ ಶ್ವಾನಗಳ ಸಮೇತ ಪೊಲೀಸರು ಎಂಟ್ರಿಕೊಟ್ಟಿದ್ದರು. ಇರೋಬರೋ ಜಾಗವನ್ನೆಲ್ಲಾ ತಡಕಾಡಿ, ಹುಡುಕಾಡಿದರೂ ಸ್ಫೋಟಕ ವಸ್ತುಗಳ್ಯಾವುವೂ ಸಿಗಲೇ ಇಲ್ಲ. ಅಷ್ಟು ದೊಡ್ಡ ಬಂಗಲೆಯನ್ನು ಮೂಸಿ ಮೂಸಿ ನಾಯಿಗಳೂ ಸುಸ್ತಾದವು. ಅಲ್ಲಿಗೆ ಇದು ಕೂಡಾ ಹುಸಿ ಬೆದರಿಕೆ ಅನ್ನೋದು ಖಾತ್ರಿಯಾಗಿತ್ತು. ಇದೇ ವರ್ಷ ವಿಜಯ್ ಮನೆಯಲ್ಲಿ ಬಾಂಬ್ ಇರುವುದಾಗಿ ಬಂದ ಎರಡನೇ ಕರೆ ಇದಾಗಿದೆ. ಬಿಗಿಲ್ ಸಿನಿಮಾ ಬಿಡುಗಡೆಯಾಗಿ ಹಿಟ್ ಆದ ಸಂದರ್ಭದಲ್ಲೂ ಇದೇ ರೀತಿ ಆಗಿತ್ತು.

ಹದಿನೈದು ದಿನಗಳ ಮುಂಚೆ ರಜನಿ ಮನೆಯನ್ನು ಸ್ಫೋಟಿಸುವುದಾಗಿ ಹೇಳಿದ್ದವನು ಎರಡೇ ದಿನಗಳಲ್ಲಿ ಸಿಕ್ಕಿಬಿದ್ದಿದ್ದ. ಆ ವ್ಯಕ್ತಿ ವಿಕಲಚೇತನನಾಗಿದ್ದ. ವಿಚಿತ್ರವೆಂದರೆ, ಈಗ ವಿಜಯ್ ಮನೆಯನ್ನು ಢುಂ ಅನ್ನಿಸುವುದಾಗಿ ಕರೆ ಮಾಡಿರುವ ವ್ಯಕ್ತಿ ಕೂಡಾ ವಿಶೇಷ ಚೇತನನಾಗಿದಾನೆ. ಅಂಗ ವಿಕಲವಾಗಿದ್ದರೂ ಅದಮ್ಯ ಚೇತನದಿಂದ ಸಾಧಿಸಿದ ಎಷ್ಟೋ ಮಂದಿ ಇದ್ದಾರೆ. ಅಂಥವರ ನಡುವೆ ಕೆಲವರು ಚೇಷ್ಟೆ ಮಾಡಿ ಹೆಸರು ಕೆಡಿಸಿಕೊಳ್ಳುತಾರೆ. ಅದಕ್ಕೇ ಹೇಳಿದ್ದು ಗಾದೆ ಮಾತುಗಳನ್ನು ನಿಜವಾಗಿಸುವ ಪ್ರಯತ್ನ ಮಾಡುತ್ತಾರೆ ಅಂತಾ…
ಮೊದಲೇ ಜಗತ್ತು ಕೊರೋನಾದ ಕರಾಳತೆಯಲ್ಲಿ ಸಿಲುಕಿ ನಲುಗಿದೆ. ಈಗ ಎದುರಾಗಿರುವ ಅವಾಂತರಗಳಿಂದ ಚಿತ್ರರಂಗ ಹೇಗೆ ಹೊರ ಬರುತ್ತದೋ ಗೊತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಬಾಂಬು, ಬದನೇಕಾಯಿ ಅಂತೆಲ್ಲಾ ಬೆದರಿಸಿ, ಕಿತಾಪತಿ ಮಾಡುವ ಜನರೂ ಇದ್ದಾರೆ…!











































