ಶರಯೂ ರಾಕಿಂಗ್!

Picture of Cinibuzz

Cinibuzz

Bureau Report

ಧೀರ ರಾಕ್ ಲೈನ್ ವೆಂಕಟೇಶ್  ಸಿನಿಮಾ ನಿರ್ಮಾಪಕರಾಗಿ, ನಟನಾಗಿ ಭಾರತದಾದ್ಯಂತ ಹೆಸರು ಮಾಡಿದ್ದಾರೆ. ಅವರ ಪುತ್ರ ಯತೀಶ್ ಕೂಡಾ ಸಿನಿಮಾ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಯತೀಶ್ ಅವರು ನಿರ್ಮಾಪಕ ಹಾಗೂ ಶಾಸಕ ಮುನಿರತ್ನ ಅವರ ಅಳಿಯ ಕೂಡ.‌ ಈಗ ಯತೀಶ್ ಅವರ ಪುತ್ರಿ ಶರಯೂ(ರಾಕ್ ಲೈನ್ ವೆಂಕಟೇಶ್ – ಮುನಿರತ್ನ ಅವರ ಮೊಮ್ಮಗಳು) ಗಾಯಕಿಯಾಗಿ ಸಾಂಸ್ಕೃತಿಕ ಜಗತ್ತಿಗೆ ಪಾದಾರ್ಪಣೆ ಮಾಡುತ್ತಿದ್ದಾಳೆ.

ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ರೂಪಿಸಿರುವ ʻಕೃಷ್ಣ ಜನಾರ್ದನʼ ಹಾಡಿನ ರೀಮಿಕ್ಸ್ ಹಾಡಿಗೆ ಶರಯೂ ದನಿ ನೀಡಿದ್ದಾಳೆ. ಶ್ರೀ ಕೃಷ್ಣನ ಅವತಾರವನ್ನು ಪರಿಚಯುಸುವ ಕೃಷ್ಣ ಜನಾರ್ದನ ಹಾಡು ಸುಶ್ರಾವ್ಯವಾಗಿ ಮೂಡಿಬಂದಿದೆ. ಶರಯೂ ವೈ ಮಲ್ಲೇಶ್ವರಂನ ಬ್ರಿಗೇಡ್ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದಾಳೆ. ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿರುವ ಶರಯೂ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿದ್ದಾಳೆ. ಅನುಪಮಾ ರಚಿಸಿ ಸಂಗೀತ ಸಂಯೋಜಿಸಿದ್ದ ಮೂಲ ಹಾಡಿಗೆ ಈಗ ಶರಯೂ ದನಿ ನೀಡಿರುವುದು ಮಾತ್ರವಲ್ಲದೆ ದೃಶ್ಯರೂಪಕದಲ್ಲೂ ಭಾಗಿಯಾಗಿದ್ದಾಳೆ. ಶ್ರೀ ಕೃಷ್ಣನನ್ನು ಪೂಜಿಸುವ ಹಾಡಿನೊಂದಿಗೆ ಶರಯೂ ಭಾವಾಭಿವ್ಯಕ್ತಿ ಕೂಡಾ ಇಲ್ಲಿ ಅನಾವರಣಗೊಂಡಿದೆ.

ಸ್ಯಾಮ್ ಪ್ರೋಗ್ರಾಮಿಂಗ್ನೊಂದಿಗೆ ಸಂಭ್ರಮ್ ಸ್ಟುಡಿಯೋದಲ್ಲಿ ಈ ಹಾಡಿಗೆ ರೀರೆಕಾರ್ಡಿಂಗ್ ಮತ್ತು ಮಿಕ್ಸಿಂಗ್ ಮಾಡಲಾಗಿದೆ. ಫಣೀಂದ್ರ ರೆಡ್ಡಿ ಛಾಯಾಗ್ರಹಣ, ಸಿಂಧೂರಿ ಯತೀಶ್ ಕ್ರಿಯೇಟೀವ್ ಹೆಡ್ ಹಾಗೂ ಸ್ಟೈಲಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಶರಯೂ ವೈ ಯೂ ಟ್ಯೂಬ್ ಚಾನೆಲ್ಲಿನಲ್ಲಿ ಈ ಹಾಡು ಬಿಡುಗಡೆಯಾಗಿದೆ.

ಇನ್ನಷ್ಟು ಓದಿರಿ

Scroll to Top