ಹರೀಶ್ ರಾಜ್ ನಿರ್ದೇಶನದ “ವೆಂಕಟೇಶಾಯ ನಮಃ”ಚಿತ್ರೀಕರಣ‌ ಮುಕ್ತಾಯ

Picture of Cinibuzz

Cinibuzz

Bureau Report

ಚಂದನವನದ ಕಲಾಕರ್ ನಟ , ನಿರ್ದೇಶಕ ಹರೀಶ್ ರಾಜ್ ಸಾರಥ್ಯದ “ವೆಂಕಟೇಶಾಯ ನಮಃ”
ರೋಮ್ಯಾಂಟಿಕ್ ಲವ್ ಸ್ಟೋರಿ ಚಿತ್ರವಾಗಿದ್ದು, ಇತ್ತೀಚೆಗೆ ಬೆಂಗಳೂರಿನಲ್ಲಿ ಈ ಚಿತ್ರದ ಚಿತ್ರೀಕರಣಕ್ಕೆ ಕುಂಬಳಕಾಯಿ ಹೊಡೆದು ಚಿತ್ರೀಕಾರಣ ಪೂರ್ಣಗೋಳಿಸಿದ್ದಾರೆ. ..

ಹುಡುಗಿ ಕೈ ಕೊಟ್ಟಾಗ ಲೈಫ್ ನ ಚಾಲೆಂಜ್ ಆಗಿ ತಗೊಂಡು
ಲವ್ ಮಾಡದೆ, ಹುಡುಗೀರ ಜೊತೆ ಚೆಲ್ಲಾಟವಾಡುತ್ತಾ , ಎಂಜಾಯ್ ಮಾಡಬೇಕೆಂಬ ವೆಂಕಿ ಅಲಿಯಾಸ್ ವೆಂಕಟೇಶನಿಗೆ ಮತ್ತೆ ಲೈಫ್ ನಲ್ಲಿ ಲವ್ ಆಗುತ್ತಾ ಎಂಬುದೇ ಕಥಾಹಂದರ. ..ಕಥೆಯನ್ನು ಹಾಸ್ಯ ಮಿಶ್ರಣದೊಂದಿಗೆ ಸಂಪೂರ್ಣ ಮನರಂಜನೆಯ ಜೊತೆ ನೀಡುತ್ತೇವೆ ಎನುತ್ತಾರೆ
ಒಟ್ಟಿನಲ್ಲಿ ಆ ವೆಂಕಟೇಶ್ವರನ ಆಶೀರ್ವಾದ ಮತ್ತು ಜನಗಳ ಪ್ರೋತ್ಸಾಹ ವಿರಲಿ ಎನುತ್ತಾರೆ ಹರೀಶ್ ರಾಜ್

ಈ ಚಿತ್ರದ ನಿರ್ಮಾಪಕ ಪಿ. ಜನಾರ್ದನ , ನಿರ್ದೇಶಕರು ಈ ಕಾಮಿಡಿ ಸಬ್ಜೆಕ್ಟ್ ಹೇಳಿದ್ರು, ನಮಗೆ ಬಹಳ ಇಷ್ಟವಾಗಿ ಚಿತ್ರವನ್ನ ಆರಂಭಿಸಿದ್ದೆವು ಇದೀಗ ಚಿತ್ರೀಕರಣ ಮುಗಿದಿದೆ.
ನಮಗೆ ಎಲ್ಲರೂ ಸಪೋರ್ಟ್ ಮಾಡಿ ಎಂದು ಕೇಳಿಕೊಂಡರು.

ಇದರಲ್ಲಿ ನಾಯಕ ಹರೀಶ್ ರಾಜ್ ಸಾಫ್ಟ್ವೇರ್ ಉದ್ಯೋಗಿ ಪಾತ್ರವನ್ನು ನಿರ್ವಹಿಸುತ್ತಿದ್ದಾರ, ತಾಯಿಯ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ ರವರು ಅಭಿನಯಿಸುತ್ತಿದ್ದಾರೆ. ಈ ಚಿತ್ರದ ನಾಯಕಿಯಾಗಿ ಪ್ರಕೃತಿ ಪ್ರಸಾದ್ ನಟಿಸಿದ್ದಾರೆ . ದೊಡ್ಡ ತಾರಾ ಬಳಗವೇ ಹೊಂದಿದೆ.
ಹಿರಿಯ ನಟ ಅಶೋಕ್,
ಉಮೇಶಣ್ಣ,
ತಬಲಾ ನಾಣಿ ,ನಾಯಕಿಯ ತಾಯಿಯಾಗಿ ಚಿತ್ಕಲ ಬಿರಾದರ್ , ರಾಘು ರಾಮನ ಕೊಪ್ಪ , ಸೇರಿದಂತೆ ಹಲವಾರು ಕಲಾವಿದರಿದ್ದಾರೆ
ಶ್ರೀ ಲಕ್ಷ್ಮಿ ಜನಾರ್ದನ ಮೂವೀಸ್ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು , ಈ ಚಿತ್ರಕ್ಕೆ ಶಿವಶಂಕರ್ ಛಾಯಾಗ್ರಾಹಣ ,
ಪ್ರವೀಣ್ ಶ್ರೀನಿವಾಸ್ ಮೂರ್ತಿ ಸಂಗೀತ , ಪ್ರಮೋದ್ ಮರುವಂತೆ , ಚೇತನ್ ಕುಮಾರ್, ಗೌವ್ಸ್ ಪೀರ್ ಸಾಹಿತ್ಯ , ಜೀವನ್ ಪ್ರಕಾಶ್ ಸಂಕಲನ , ವಿನಯ್. ಜಿ. ಆಲೂರ್ ಡಿ.ಐ, ಮಿತೇಶ್, ಸಂತೋಷ್. ಸಿ.ಎಂ ಸಹ ನಿರ್ದೇಶನವಿದೆ
ಮುರಳಿ ಮಾಸ್ಟರ್ dance ಚೋರೆಗ್ರಾಫರ್,
ಮೊರು ಹಾಡುಗಳಿವೆ
ಎರಡು ಫೈಟ್ ಗಳಿವೆ

ಇನ್ನಷ್ಟು ಓದಿರಿ

Scroll to Top