ಮನಸ್ಸು ತಟ್ಟುವ ಕಥೆಯೊಂದಿಗೆ ಬಂದ ʼಜೂನಿಯರ್ʼ…ಜುಲೈ 18ಕ್ಕೆ ಕಿರೀಟಿ ಸಿನಿಮಾ ರಿಲೀಸ್‌

Picture of Cinibuzz

Cinibuzz

Bureau Report

ಕಿರೀಟಿ ನಟನೆಯ ಚೊಚ್ಚಲ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಇದೇ ತಿಂಗಳ 18ಕ್ಕೆ ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು ಚಿತ್ರ ತೆರೆಗೆ ಬರ್ತಿದೆ. ಟೀಸರ್‌ ಮೂಲಕ ಭರವಸೆ ಹುಟ್ಟಿಸಿದ್ದ ಚಿತ್ರತಂಡವೀಗ ಟ್ರೇಲರ್‌ ಬಿಡುಗಡೆ ಮಾಡಿದೆ. ಮನಸ್ಸು ಮುಟ್ಟುವ ಕಥೆ ಟ್ರೇಲರ್‌ನಲ್ಲಿದೆ. ಆಕ್ಷನ್ ಎಮೋಷನ್‌, ಲವ್‌, ಫ್ಯಾಮಿಲಿ, ಸ್ಟುಡೆಂಟ್‌ ಲೈಫ್‌ ಎಲ್ಲವೂ ಟ್ರೇಲರ್‌ನಲ್ಲಿ ಕಟ್ಟಿಕೊಡಲಾಗಿದೆ.

ಕಿರೀಟಿಗೆ ಇದು ಚೊಚ್ಚಲ ಸಿನಿಮಾ ಅನಿಸುವುದಿಲ್ಲ. ಜೂನಿಯರ್‌ನಲ್ಲಿ ಕಿರೀಟಿ ಆಲ್ ರೌಂಡರ್ ಆಗಿ ಕಾಣಿಸಿಕೊಂಡಿದ್ದಾರೆ. ನೃತ್ಯ, ಫೈಟಿಂಗ್ ಮತ್ತು ತಮ್ಮ ಪಾತ್ರಕ್ಕೆ ಅಗತ್ಯವಾದ ಮನೋಭಾವವನ್ನು ಅದ್ಭುತವಾಗಿ ನಿಭಾಯಿಸುತ್ತಾರೆ. ತಮ್ಮ ಅದ್ಭುತ ಹಾಸ್ಯ ದಿಂದಲೂ ಮನರಂಜಿಸುತ್ತಾರೆ. ನಾಯಕಿಯಾಗಿ ಶ್ರೀಲೀಲಾ ಅದ್ಭುತವಾಗಿ ಕಾಣುತ್ತಾರೆ. ಕಿರೀಟಿ ತಂದೆಯಾಗಿ ರವಿಚಂದ್ರನ್‌ ಹಾಗೂ ಸುಧಾರಾಣಿ ಸಾಥ್‌ ಕೊಟ್ಟಿದ್ದಾರೆ.

ಜೆನಿಲಿಯಾ ಡಿಸೋಜಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾವ್‌ ರಮೇಶ್‌, ಅಚ್ಯುತ್‌ ಕುಮಾರ್‌, ಸತ್ಯ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ನಿರ್ದೇಶಕ ರಾಧಾ ಕೃಷ್ಣ ಒಂದು ಸಂಪೂರ್ಣ ಯುವ ಮನರಂಜನೆಯನ್ನು ನೀಡಿದ್ದಾರೆ. ಕೆ ಕೆ ಸೆಂಥಿಲ್ ಕುಮಾರ್ ಅವರ ಛಾಯಾಗ್ರಹಣ ಅದ್ಭುತವಾಗಿದೆ, ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಸಂಗೀತ ಚಿತ್ರದ ಹೈಲೆಂಟ್‌ಗಳಲ್ಲೊಂದು. ಸಿನಿಮಾಗೆ ಖ್ಯಾತ ಆ್ಯಕ್ಷನ್ ಕೊರಿಯೋಗ್ರಾಫರ್ ಪೀಟರ್ ಹೆನ್ಸ್ ಸಾಹಸ ಸಂಯೋಜಿಸಿದ್ದಾರೆ. ವಾರಾಹಿ ಚಲನಚಿತ್ರ ಬ್ಯಾನರ್‌ನಡಿ ರಜನಿ ಕೊರ್ರಪಾಟಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸಾಯಿಶಿವಾನಿ ಪ್ರಸೆಂಟ್‌ ಮಾಡುತ್ತಿದ್ದಾರೆ. ಜುಲೈ 18 ರಂದು ಸಿನಿಮಾ ಬಿಡುಗಡೆಯಾಗಲಿದೆ.

ಇನ್ನಷ್ಟು ಓದಿರಿ

Scroll to Top