ʼಕೊತ್ತಲವಾಡಿʼ ಟೈಟಲ್‌ ಟ್ರ್ಯಾಕ್ ರಿಲೀಸ್..ಯಶ್‌ ತಾಯಿ ನಿರ್ಮಾಣದ ಚಿತ್ರ ಆಗಸ್ಟ್‌ 1ಕ್ಕೆ ಬಿಡುಗಡೆ

Picture of Cinibuzz

Cinibuzz

Bureau Report

ಯಶ್ ತಾಯಿ ಪುಷ್ಪ ಅರುಣ್‌ ಕುಮಾರ್‌ ನಿರ್ಮಾಣದ ಚೊಚ್ಚಲ ಚಿತ್ರ ಕೊತ್ತಲವಾಡಿ ಆಗಸ್ಟ್‌ 1ರಂದು ತೆರೆಗೆ ಬರ್ತಿದೆ. ಈಗಾಗಲೇ
ಬಿಡುಗಡೆಯಾಗಿರುವ ಟೀಸರ್‌ಗೆ ಪ್ರೇಕ್ಷಕವಲಯದಿಂದ ಭರಪೂರ ಮೆಚ್ಚುಗೆ ಪಡೆದುಕೊಂಡಿದೆ. ಇದೀಗ ಚಿತ್ರತಂಡ ಕೊತ್ತಲವಾಡಿ ಟೈಟಲ್‌ ಟ್ರ್ಯಾಕ್‌ ಅನಾವರಣ ಮಾಡಿದೆ. ಕಿನ್ನಾಲ್‌ ರಾಜ್‌ ಸಾಹಿತ್ಯ ಬರೆದಿರುವ ಗೀತೆಗೆ ವ್ಯಾಸರಾಜ್‌ ಸೋಸಲೆ ಕಂಠ ಕುಣಿಸಿದ್ದಾರೆ. ವಿಕಾಸ್‌ ವಸಿಷ್ಠ ಸಂಗೀತ ಹಾಡಿನ ತೂಕ ಹೆಚ್ಚಿಸಿದೆ. ನಾಯಕನ ಶೌರ್ಯವನ್ನು ವರ್ಣಿಸುವ ಹಾಡು ಸಖತ್‌ ಪವರ್‌ ಫುಲ್‌ ಆಗಿ ಮೂಡಿ ಬಂದಿದೆ.

ಪುಷ್ಪ ಅರುಣ್‌ ಕುಮಾರ್‌ ತಮ್ಮದೇ PA ಪ್ರೊಡಕ್ಷನ್‌ ನಡಿ ಕೊತ್ತಲವಾಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಯುವ ಪ್ರತಿಭೆ ಶ್ರೀರಾಜ್ ಆಕ್ಷನ್‌ ಕಟ್‌ ಹೇಳಿದ್ದು, ಪೃಥ್ವಿ ಅಂಬರ್ ನಾಯಕನಾಗಿ ಹಾಗೂ ಕಿರುತೆರೆ ನಟಿ ಕಾವ್ಯಾ ಶೈವ ನಾಯಕಿಯಾಗಿ ನಟಿಸುತ್ತಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ ಅವರಂತಹ ಅನುಭವಿ ತಾರಾಬಳಗ ಚಿತ್ರದಲ್ಲಿದೆ. ಇಲ್ಲಿಯವರೆಗೂ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪೃಥ್ವಿ ‘ಕೊತ್ತಲವಾಡಿ’ ಚಿತ್ರದಲ್ಲಿ ಕಂಪ್ಲೀಟ್ ಮಾಸ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾದ ಹಾಡುಗಳಿಗೆ ವಿಕಾಸ್ ವಸಿಷ್ಠ ಮತ್ತು ಹೀರೋ ಇಂಟ್ರೊಡಕ್ಷನ್ ಹಾಡಿಗೆ ಹಾಗೂ ಹಿನ್ನಲೆ ಸಂಗೀತ ಅಭಿನಂದನ್ ಕಶ್ಯಪ್ ಸಂಯೋಜಿಸಿದ್ದಾರೆ. ಕಾರ್ತಿಕ್ ಎಸ್. ಛಾಯಾಗ್ರಹಣ ಮಾಡಿದ್ದಾರೆ. ರಾಮಿಸೆಟ್ಟಿ ಪವನ್ ಸಂಕಲನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ವಿ. ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್, ಪ್ರಮೋದ್ ಮರವಂತೆ, ಗೌಸ್ ಪಿರ್ ಸಾಹಿತ್ಯ ಬರೆದಿದ್ದಾರೆ. ಅಭಿನಂದನ್‌ ಕಶ್ಯಪ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ

ಇನ್ನಷ್ಟು ಓದಿರಿ

Scroll to Top