N1ಕ್ರಿಕೆಟ್ ಅಕಾಡೆಮಿಯ IPT 12 ಸೀಸನ್-2 ಕ್ರಿಕೆಟ್ ಟ್ರೋಫಿ ಅನಾವರಣ

Picture of Cinibuzz

Cinibuzz

Bureau Report

ಸುನಿಲ್ ಕುಮಾರ್ ಬಿ. ಆರ್ ನೇತೃತ್ವದ ಎನ್ 1 ಕ್ರಿಕೆಟ್ ಅಕಾಡೆಮಿ ಕ್ರಿಕೆಟ್ ಪ್ರೇಮಿಗಳಿಗಾಗಿ ಹಲವಾರು ಟೂರ್ನಮೆಂಟ್ ಆಯೋಜಿಸಿ ಯಶಸ್ವಿ ಕಂಡಿದೆ. ಇದೀಗ ಮತ್ತೊಮ್ಮೆ IPT12 ಏರ್ಪಡಿಸಿದೆ.‌ ಕಳೆದ ವರ್ಷ IPT12 ಯಶಸ್ವಿಯಾಗಿ ಜರುಗಿದ್ದು, ಇದೀಗ IPT12 ಸೀಸನ್ 2 ಚಾಲನೆ ದೊರೆತಿದೆ. ಡಾಕ್ಟರ್ಸ್, ಲಾಯರ್ಸ್, ಸಿನಿಮಾ ನಟರು, ಕಿರುತೆರೆ ಕಲಾವಿದರು, ಮಾಧ್ಯಮದವರು, ಸಿವಿಲ್ ಕಾಂಟ್ರಾಕ್ಟರ್ಸ್,ಎಕ್ಸ್ಜಿ ಡಿಪಾರ್ಟ್ಮೆನ್ ಕರ್ನಾಟಕ ಪೊಲೀಸ್,ಪ್ರೈವೇಟ್ ಲಿಮಿಟೆಡ್ ಕಂಪನಿ ವಿನ್ ಟೈಮ್ ಹೀಗೆ ಎಲ್ಲಾ ಕ್ಷೇತ್ರದವರು ಸೇರಿ ಆಡಲಿರುವ ಕ್ರಿಕೆಟ್ ಟೂರ್ನಮೆಂಟ್ IPT12 ಇದಾಗಿದೆ. ಈ ಕ್ರಿಕೆಟ್ ಪಂದ್ಯಾವಳಿಯ ಎರಡನೇ ಸೀಸನ್ ಗೆ ಚಾಲನೆ ದೊರೆತಿದ್ದು, ಟ್ರೋಫಿ ಬಿಡುಗಡೆ ಕಾರ್ಯಕ್ರಮ ನಿನ್ನೆ ಖಾಸಗಿ ಹೋಟೆಲ್ ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಎಡಿಜಿಪಿ
ಅಲೋಕ್ ಕುಮಾರ್, ಅಬಕಾರಿ ಇಲಾಖೆ ಹೆಚ್ಚುವರಿ ಕಮಿಷನರ್ ಡಾ.ವೈ.ಮಂಜುನಾಥ್, ನಟರಾದ ಸಚಿನ್ ಚೆಲುವರಾಯಸ್ವಾಮಿ, ಶರತ್ ಪದ್ಮನಾಭ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇಂಡಿಪೆಂಡೆನ್ಸ್ ಕಪ್ ಪ್ರೊಫೆಷನಲ್ ಟೂರ್ನಮೆಂಟ್ ಎರಡನೇ ಆವೃತ್ತಿ
ಒಂದು ವಾರಗಳ ಕಾಲ ನಡೆಯಲಿದೆ. 12 ಓವರ್ ಗಳ ಪಂದ್ಯಾವಳಿಯು ಹಗಲು ಮತ್ತು ರಾತ್ರಿ ನಡೆಯಲಿದ್ದು, ಆಗಸ್ಟ್ 9 ರಿಂದ 15 ರವರೆಗೆ ಲೀಗ್-ಕಮ್-ನಾಕೌಟ್ ಸ್ವರೂಪದಲ್ಲಿ ಪ್ರಾರಂಭವಾಗಲಿದೆ. ಟೂರ್ನಮೆಂಟ್ ಗೆ ಎಂ ಆರ್ ಗ್ರೂಪ್ಸ್ ಟೈಟಲ್ ಸ್ಪಾನ್ಸರ್ ಮಾಡಿದೆ.
ಬೆಂಗಳೂರಿನ ಅಶೋಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯವನ್ನು ಆಯೋಜಿಸಲಾಗಿದೆ.

ಭಾಗವಹಿಸುವ ತಂಡಗಳು ಯಾವುದು

  • ಎಂಆರ್ ಪ್ಯಾಂಥರ್ಸ್
  • ಬುಲ್ ಸ್ಕ್ವಾಡ್
  • ಟೀಮ್ ಲಾಯರ್ಸ್
  • ಲಿಯೋಸ್ ಲೈಫ್ ಸೆವಿಯರ್ಸ್
  • ಸಿವಿಲ್ ಟೈಗರ್ಸ್
  • ವಿಜಿ
  • ಬೆಂಗಳೂರು ವಾರಿಯರ್ಸ್
  • ವಿನ್ ಟೈಮ್ ರಾಕರ್ಸ್

ಇನ್ನಷ್ಟು ಓದಿರಿ

Scroll to Top