ಸಾಕಷ್ಟು ಸಿನಿಮಾಗಳಲ್ಲಿ ಜೈಲಿನ ಚಿತ್ರಣಗಳು ಇದ್ದೇ ಇರುತ್ತವೆ. ಮೊದಲೆಲ್ಲಾ ವರ್ಕಿಂಗ್ ಜೈಲುಗಳಲ್ಲೇ ಚಿತ್ರೀಕರಣಕ್ಕೆ ಅನುಮತಿ ನೀಡುತ್ತಿದ್ದರು. ʼಕೆಂಪʼ ಎನ್ನುವ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಕೈದಿಯೊಬ್ಬ ಪರಪ್ಪನ ಅಗ್ರಹಾರದಿಂದ ಎಸ್ಕೇಪ್ ಆಗಿಬಿಟ್ಟಿದ್ದ. ಭಾರತದ ಇತರೇ ಜೈಲುಗಳಲ್ಲೂ ಇಂಥಾ ಪ್ರಕರಣಗಳಾಗಿದ್ದವು. ಸಿನಿಮಾದವರ ಸಾವಾಸವೇ ಬೇಡ ಅಂತಾ ಬಂದೀಖಾನೆ ಇಲಾಖೆ ತೀರ್ಮಾನ ಮಾಡಿಬಿಟ್ಟಿತ್ತು. ಬೆಂಗಳೂರಿನ ಹಳೇ ಸೆಂಟ್ರಲ್ ಜೈಲು ಕೂಡಾ ಈಗ ಸ್ವಾತಂತ್ರ್ಯ ಉದ್ಯಾನವನವಾಗಿ ಮಾರ್ಪಟ್ಟಿರೋದರಿಂದ ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿಲ್ಲ. ಜೈಲರ್ನಂತಾ ದೊಡ್ಡ ಬಜೆಟ್ಟಿನ ಚಿತ್ರಕ್ಕೆ ಇಡೀ ಜೈಲಿನ ಸೆಟ್ ರೂಪಿಸಿಕೊಳ್ಳುತ್ತಾರೆ. […]
ಅರುಣ್ ಕುಮಾರ್.ಜಿ ಫೋಟೋಗಳು : ಕೆ.ಎನ್. ನಾಗೇಶ್ ಕುಮಾರ್, ಹಿರಿಯ ಪತ್ರಿಕಾ ಛಾಯಾಗ್ರಾಹಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಇದೇ 2023ರ ಸೆಪ್ಟೆಂಬರ್ 23ರಂದು ನಡೆಯಲಿದೆ. ಈ ಸಲ ಛೇಂಬರ್ ಅಧ್ಯಕ್ಷ ಸ್ಥಾನಕ್ಕೆ ಯಾರು ಬಂದು ಕೂರಬಹುದು ಎನ್ನುವ ಕುತೂಹಲ ಒಂದು ಕಡೆಯಾದರೆ, ಅಭ್ಯರ್ಥಿಗಳ ನಡುವೆ ಪೈಪೋಟಿ ಮತ್ತೊಂದು ಕಡೆ. ಈ ಬಾರಿ ವಾಣಿಜ್ಯ ಮಂಡಳಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಥೇಟು ರಾಜಕೀಯ ಪಕ್ಷಗಳ ಪುಢಾರಿಗಳಂತೆ ತಂತ್ರಗಾರಿಕೆ ಆರಂಭಿಸಿದ್ದಾರೆ. ಹಾಗೆ ನೋಡಿದರೆ, ಪ್ರಸಕ್ತ ವರ್ಷ ಅಧ್ಯಕ್ಷಸ್ಥಾನ […]
ಮಾಯಾಬಳಗ ಪದ್ಮ ಪ್ರಶಸ್ತಿ ವಿಜೇತ ಹಿಂದಿ ಚಿತ್ರರಂಗದ ದಿಗ್ಗಜ ನಟ ಅಮಿತಾಭ್ ಬಚ್ಚನ್, ಶಾಹರುಖ್ ಖಾನ್, ಅಜಯ್ ದೇವಗನ್ ಹಾಗೂ ಸೈಫ್ಅಲಿ ಖಾನ್ ಮುಂತಾದವರು ಗುಟ್ಕಾ, ಪಾನ್ ಮಸಾಲಾ ಇತ್ಯಾದಿ ಆರೋಗ್ಯಕ್ಕೆ ಹಾನಿಕಾರಕವಾದ ಉತ್ಪನ್ನಗಳ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವುದು ಈಗ ಪುನಃ ಮುನ್ನೆಲೆಗೆ ಬಂದಿದೆ. ಅಲಹಾಬಾದ್ ಹೈಕೋರ್ಟ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟರಿ, ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಅಲಹಾಬಾದ್ ಹೈಕೋರ್ಟ್ನ ವಕೀಲರೊಬ್ಬರು 2022ರಲ್ಲಿ […]
ಕಳೆದೆರಡು ವರ್ಷಗಳಿಂದ ಯೂ ಟ್ಯೂಬ್ ಮೀಡಿಯಾ ಅಬ್ಬರಿಸುತ್ತಿದೆ. ಉತ್ತಮ ಕಂಟೆಂಟ್ ಕೊಡುತ್ತಿರುವವರು ನಿಜಕ್ಕೂ ಗೆಲುವು ಸಾಧಿಸಿದ್ದಾರೆ. ಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ ಅನ್ನೋದನ್ನು ಹಲವು ಯೂಟ್ಯೂಬರುಗಳು ತೋರಿಸಿದ್ದಾರೆ. ಆದರೆ ಇದೇ ಯೂ ಟ್ಯೂಬ್ ಹೆಸರಲ್ಲಿ ಹೆಸರು-ಹಣ ಮಾಡಲು ನಿಂತವರೂ ಸಾಕಷ್ಟು ಜನರಿದ್ದಾರೆ. ಹುಟ್ಟು ಸೋಂಬೇರಿಗಳಿಗೆ ಯೂ ಟ್ಯೂಬ್ ಒಂದು ನೆಪವಾಗಿದೆ. ನೂರಿನ್ನೂರು ಸಬ್ಸ್ಕ್ರೈಬರ್ಗಳೂ ಇಲ್ಲದ, ಬೆರಳೆಣಿಕೆಯ ವ್ಯೂಸ್ ಹೊಂದಿರುವ ಚಾನೆಲ್ಲುಗಳನ್ನು ತೆರೆದ ʻಸ್ವಯಂ ಘೋಷಿತ ಜರ್ನಲಿಸ್ಟುʼಗಳ ಸಂಖ್ಯೆ ಜಾಸ್ತಿಯಾಗಿದೆ. ಸಿನಿಮಾ ವಲಯದಲ್ಲಿ ಸುಶಾಂತ್ ಎನ್ನುವ ಹೇತ್ಲಾಂಡಿಯ ಕಾಟ […]
ನಿರ್ದೇಶಕ ಗುರುಪ್ರಸಾದ್ ಬದುಕು ಹೆಚ್ಚೂಕಮ್ಮಿ ಕೇರ್ ಆಫ್ ಫುಟ್ ಪಾತ್ ಲೆವೆಲ್ಲಿಗೆ ಬಂದು ನಿಂತಿದೆ. ನಂಬಿದವರಿಗೆ ಲಕ್ಷಗಟ್ಟಲೆ ವಂಚಿಸಿದ ಪ್ರತಿಫಲವಾಗಿ ಮಠ ಗುರುಪ್ರಸಾದ ಜೈಲಿಗೆ ಹೋಗಿದ್ದಾನೆ. ಒಬ್ಬ ವ್ಯಕ್ತಿಯ ಬದುಕು ಹೇಗೆಲ್ಲಾ ಇರಬೇಕು ಮತ್ತು ಇರಬಾರದು ಅನ್ನೋದಕ್ಕೆ ಜ್ವಲಂತ ಉದಾಹರಣೆಯಾಗಿರುವವನು ನಿರ್ದೇಶಕ ಗುರುಪ್ರಸಾದ್. ತಮ್ಮ ಸಿನಿಮಾಗಳಲ್ಲಿ ಸಮಾಜದ ಸೊಟ್ಟಂಪಟ್ಟ ವಿಚಾರಗಳನ್ನು ಲೇವಡಿ ಮಾಡುತ್ತಾ ಹಾಸ್ಯದ ಮೂಲಕ ತಿವಿಯುತ್ತಿದ್ದವರು ಗುರು. ಈಗ ಇವನ ಬದುಕೇ ಅಡ್ಡಾದಿಡ್ಡಿಯಾಗಿ ಸಾಗುತ್ತಿದೆ. ಯಾವೆಲ್ಲವನ್ನೂ ತಪ್ಪು ಅಂತಾ ಗುರು ಗುರುತು ಮಾಡಿ ಹೇಳುತ್ತಿದ್ದರೋ ಅದೇ […]
sarpini kannada movie snake
ಕನ್ನಡ ಚಿತ್ರರಂಗವನ್ನು ಕೆಲವು ಅಲಾಲುಟೋಪಿಗಳು ನಿರಂತರವಾಗಿ ಯಾಮಾರಿಸುತ್ತಲೇ ಬಂದಿದ್ದಾರೆ. ಸದ್ಯ ಆ ಲಿಸ್ಟಿಗೆ ಹೊಸೂರು ವೆಂಕಟನೆಂಬ ಗಿರಾಕಿಯೂ ಸೇರಿಕೊಂಡಿದ್ದಾನೆ. ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಬಹಿರಂಗ ಸಭೆಯಂತಾ ಸಮಾರಂಭ ಮಾಡಿ ‘ಗಡಿ’ ಎನ್ನುವ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದರು. ಆ ಟ್ರೇಲರಲ್ಲಿ ಹೆಚ್ಚೂ ಕಡಿಮೆ ತಮಿಳು ಕಲಾವಿದರೇ ತುಂಬಿಕೊಂಡಿದ್ದರು. ಅಲ್ಲಿನ ವಾತಾವರಣವನ್ನು ನೋಡಿದವರಿಗೆ, ಇದೇನಿದು ಪ್ಯಾನ್ ಇಂಡಿಯಾ ಸಿನಿಮಾನಾ? ಅಥವಾ ಡಬ್ಬಿಂಗ್ ಚಿತ್ರವಾ ಅನ್ನೋ ಅನುಮಾನ ಹುಟ್ಟಿಕೊಂಡಿತ್ತು. ಇದು ಎಷ್ಟು ಭಾಷೆಯಲ್ಲಿ ರಿಲೀಸಾಗುತ್ತಿದೆ? ಅಂತಾ ಕೇಳಿದ್ದಕ್ಕೆ […]
ಡೈರೆಕ್ಟರ್ ಗುರುಪ್ರಸಾದ್ ವಿರುದ್ಧ ದೂರು ದಾಖಲು ಮಠ, ಎದ್ದೇಳು ಮಂಜುನಾಥ ಮತ್ತಿತರ ಸಿನಿಮಾಗಳ ನಿರ್ದೇಶಕ, ನಟ ಗುರುಪ್ರಸಾದನ ವಂಚನಾ ಪುರಾಣ ಬಗೆದಷ್ಟೂ ತೆರೆದುಕೊಳ್ಳುತ್ತಾ ಹೋಗುತ್ತಿದೆ. ತಮ್ಮ ಜೊತೆಯಲ್ಲಿದ್ದ ಸಹಾಯಕ ನಿರ್ದೇಶಕ ಶ್ರೀನಿವಾಸ್ ಎಂಬುವವರಿಗೆ ಗುರು ಮಾಡಿದ ಮಹಾ ಮೋಸದ ವಿಚಾರವನ್ನು ಇತ್ತೀಚೆಗೆ ತಾನೆ ಪ್ರಕಟಿಸಲಾಗಿತ್ತು. ಈಗ ಮತ್ತೊಬ್ಬರು ಗುರು ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಟೋಟಲ್ ಕನ್ನಡ ಹೆಸರಿನಲ್ಲಿ ಪುಸ್ತಕ ಮಳಿಗೆ ನಡೆಸುತ್ತಿರುವ ವಿ. ಲಕ್ಷ್ಮೀಕಾಂತ್ ಅವರು ಜಯನಗರ ಪೊಲೀಸ್ ಠಾಣೆಯಲ್ಲಿ ಗುರುಪ್ರಸಾದ್ ವಿರುದ್ಧ ಕಂಪ್ಲೇಂಟು ನೀಡಿದ್ದಾರೆ. […]
ರವಿಚಂದ್ರನ್ ಮನೆ ಮಾರಿಬಿಟ್ಟರಂತೆ. ಸಿಕ್ಕಾಪಟ್ಟೆ ಸಾಲಕ್ಕೆ ಸಿಲುಕಿರುವ ಕ್ರೇಜಿಸ್ಟಾರ್ ಮನೆ ಮಾರಿ ಬಾಡಿಗೆ ಮನೆಗೆ ಹೋಗಿದ್ದಾರೆ – ಎಂಬಿತ್ಯಾದಿ ವಿಚಾರಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಅಪ್ಪ ಮಾಡಿಟ್ಟಿದ್ದ ಮನೆಯನ್ನೂ ಮಾರುವಷ್ಟು ಕನಸುಗಾರ ಕಷ್ಟಕ್ಕೆ ಸಿಲುಕಿದ್ದಾರಾ? ಏನಿದು ವಿಚಾರ? ಇದರ ಅಸಲೀಯತ್ತೇನು ಎಂಬಿತ್ಯಾದಿ ವಿಚಾರಗಳ ಬಗ್ಗೆ ಸ್ವತಃ ವಿ. ರವಿಚಂದ್ರನ್ ಮನಬಿಚ್ಚಿ ಮಾತಾಡಿದ್ದಾರೆ. ಅದರ ವಿವರ ಇಲ್ಲಿದೆ. ನಾನು ಅಂದುಕೊಂಡಂತೆ ನನ್ನ ಸಿನಿಮಾ ಯಶ್ವಿಯಾಗಿಲ್ಲ. ರವಿ ತೋಪಣ್ಣ ಆಗಿದ್ದು ನಿಜ. ಆದರೆ ನನ್ನ ಮನೆಯ ವಿಚಾರದಲ್ಲಿ ಕೆಲವು ಮೀಡಿಯಾದವರು […]