ಫಿಲಂ ಚೇಂಬರಲ್ಲಿ ಮಂಜನ ಚೇಷ್ಟೆ…!

Picture of Cinibuzz

Cinibuzz

Bureau Report

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈಗ ಅಧಿಕಾರದಲ್ಲಿರುವವರು ತುಂಬಾ ಬ್ಯುಸಿ ಇದ್ದಾರೆ. ವಿವಿಧ ಬಗೆಯ ಪ್ರಕರಣಗಳನ್ನು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಾಕಷ್ಟು ವಿಚಾರಗಳನ್ನು ಇತ್ಯರ್ಥ ಮಾಡಿಸಿದ್ದಾರೆ. ಸಿಕ್ಕಸಿಕ್ಕವರನ್ನೆಲ್ಲಾ ʻಬ್ಯಾನ್‌ʼ ಮಾಡಿ ಬಿಸಾಕಿದ್ದಾರೆ.


ಇದೇ ವಾಣಿಜ್ಯಮಂಡಳಿಯಲ್ಲಿ ಚೇಷ್ಟೆ ಮಂಜನ ಹಾವಳಿ ಮಿತಿ ಮೀರಿದ್ದು, ಸಿನಿಮಾಮಂದಿ ಶ್ಯಾನೆ ನೊಂದಿದ್ದಾರೆ. ಆಯಕಟ್ಟಿನ ಜಾಗದಲ್ಲಿರುವವರಿಗೆ ಮಾತ್ರ ಮಂಜನ ಉಪಟಳಗಳ ಬಗ್ಗೆ ಇನ್ನೂ ಏನೇನೂ ಗೊತ್ತಾಗಿಲ್ಲವಾ?

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸರಿಸುಮಾರು ಮೂವತ್ತು ವರ್ಷಕ್ಕೂ ಅಧಿಕ ಕಾಲ ಕೆಲಸ ಮಾಡಿ ʻಅನುಭವʼ ಹೊಂದಿರುವ ಮಂಜು ಒಳ್ಳೇ ಕೆಲಸಗಾರ ಅನ್ನೋದೇನೋ ನಿಜ. ಇಷ್ಟೂ ವರ್ಷಗಳ ಕಾಲ ಸಿನಿಮಾ ಇಂಡಸ್ಟ್ರಿಗೆ ಬಂವರು, ಹೋದವರೆಲ್ಲರನ್ನೆಲ್ಲ ಕಂಡಿರುವ ಮಂಜು ಯಾರಿಗೆ ಹೇಗೆ ಗೌರವ ಕೊಡಬೇಕು ಅನ್ನೋದನ್ನು ಮಾತ್ರ ಕಲಿತಂತಿಲ್ಲ. ಸಿನಿಮಾ ಟೈಟಲ್‌ ರಿಜಿಸ್ಟ್ರೇಷನ್‌ ಇಂದ ಹಿಡಿದು ಅನೇಕ ವಿಚಾರಗಳಿಗಾಗಿ ಚೇಂಬರಿಗೆ ಬರುವವರಿರುತ್ತಾರೆ. ಅದರಲ್ಲೂ ಹೊಸಬರಿಗೆ ಅನೇಕ ಗೊಂದಲಗಳಿರುತ್ತವೆ. ಅಂಥವರೊಂದಿಗೆ ಈತ ವರ್ತಿಸುವ ರೀತಿಯೇ ಸರಿಯಿಲ್ಲ ಅನ್ನೋದು ಬಹುತೇಕರ ಆರೋಪ. ಇನ್ನು ಈತನ ಕೈ ಬಿಸಿ ಮಾಡದಿದ್ದರೆ, ಯಾತೆಗೆವ ಕೆಲಸವೂ ನಡೆಯೋದಿಲ್ಲ ಎನ್ನುವುದು ಗುಟ್ಟಾಗೇನೂ ಉಳಿದಿಲ್ಲ. ಯಾರಾದರೂ ಒಳ್ಳೇ ಟೈಟಲ್‌ ರಿಜಿಸ್ಟರ್‌ ಮಾಡಲು ಬಂದರೆ, ಅದನ್ನು ʻಆಲ್‌ರೆಡಿ ರಿಜಿಸ್ಟರ್‌ ಆಗಿದೆʼ ಅಂತಾ ಹೇಳಿ, ಬೇರೆಯವರಿಗೆ ನೀಡುತ್ತಾರೆ ಎನ್ನುವʼ ಕಂಪ್ಲೇಂಟೂ ಇದೆ… ಹಿಂದೊಮ್ಮೆ ಛೇಂಬರ್‌ ದುಡ್ಡನ್ನು ದುರುಪಯೋಗ ಮಾಡಿಕೊಂಡು ಸಿಕ್ಕಿಬಿದ್ದಿದ್ದ. ಆಗಿನ ಅಧ್ಯಕ್ಷರು ʻಅಯ್ಯೋಪಾಪʼ ಅಂತಾ ಕ್ಷಮಾಪಣೆ ನೀಡಿದ್ದರು ಎನ್ನುವ ಮಾತಿದೆ.

ಈ ವಾಣಿಜ್ಯ ಮಂಡಳಿಯಲ್ಲಿ ಗೆದ್ದುಬಂದವರು ಒಂದು ವರ್ಷ ಇದ್ದು ಹೋಗ್ತಾರೆ. ಸೇವಾ ಅವಧಿ ಮುಗಿದು, ನಿವೃತ್ತಿಯ ನಂತರವೂ ಈತನನ್ನು ಕೆಲಸದಲ್ಲಿ ಮುಂದುವರೆಸಿದ್ದಾರೆ. ಸಕಲಪುರಾತನ ಎನಿಸಿಕೊಂಡಿರುವ ಮಂಜು ಧಿಮಾಕು ಜಾಸ್ತಿಯಾಗಿದೆ. ತಾನು ಹೇಳಿದ್ದೇ ಕಾನೂನು ಎನ್ನುವಂತಾಗಿದೆ. ಕಾಲ ಬದಲಾದಂತೆ ಯಾರೇ ಆದರೂ ಬದಲಾಗಲೇಬೇಕು. ಮಂಜು ಕೂಡಾ ತನ್ನ ಚೇಷ್ಟೆಗಳನ್ನು ಕಡಿಮೆ ಮಾಡಿಕೊಂಡರೆ ಒಳ್ಳೇದು!

  • ಶಿವಕುಮಾರ್‌

ಇನ್ನಷ್ಟು ಓದಿರಿ

Scroll to Top