ಭಿನ್ನವಾದ ಆಲೋಚನಾ ಕ್ರಮ, ಕ್ರಿಯೇಟಿವಿಟಿಗಳಿಂದಲೇ ಗಮನ ಸೆಳೆಯುವವರು ನಿರ್ದೇಶಕ ಯೋಗರಾಜ ಭಟ್. ಇದೀಗ ಅವರು ಅಷ್ಟೇ ವಿಶಿಷ್ಟವಾದ ರೀತಿಯಲ್ಲಿ, ಒಂದು ಮಹಾ ಪಿಡುಗಿನ ವಿರುದ್ಧ ಹೆಣ್ಮಕ್ಕಳನ್ನು ಪಾರು ಮಾಡುವ ಕಳಕಳಿಯೊಂದಿಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯ ಕೋರಿದ್ದಾರೆ. ಪಂಚತಂತ್ರ ಚಿತ್ರದ ಕಡೆಯಿಂದ ಇಂಥಾದ್ದೊಂದು ಸಂದೇಶ ರವಾನಿಸಿರುವ ಅವರು ಡಿಜಿಟಲ್ ಅಬ್ಯೂಸ್ ವಿರುದ್ಧ ತಣ್ಣಗೆ ಸಮರ ಸಾರಿದ್ದಾರೆ. ಈ ಮೂಲಕ ಡಿಜಿಟಲ್ ವಿಕೃತರಿಂದ ಮಾನಸಿಕ ಕಿರಿಕಿರಿಗೀಡಾಗಿರುವ ಲಕ್ಷಾಂತರ ಹೆಣ್ಣುಮಕ್ಕಳಿಗೆ ಧೈರ್ಯ ತುಂಬೋ ಕೆಲಸವನ್ನೂ ಮಾಡಿದ್ದಾರೆ. ಫೇಸ್ ಬುಕ್, ಇನ್ಸ್ಟಾಗ್ರಾಮ್ ಮುಂತಾದ […]
ಭಾವಕವಿ ಎಂ.ಎನ್ ವ್ಯಾಸರಾವ್ ಮರೆಯಾಗಿ ತಿಂಗಳಾಗುತ್ತಾ ಬಂದಿದೆ. ಸೂಕ್ಷ್ಮ ಭಾವಗಳ ಭಾವಗೀತೆ, ಚಿತ್ರಗೀತೆಗಳ ಮೂಲಕ ವ್ಯಾಸರಾವ್ ಅವರು ಬರೆದ ಕಡೇಯ ಗೀತೆಯೊಂದು ಇದೀಗ ಮಾಧುರ್ಯ ತುಂಬಿಕೊಂಡು ಪ್ರೇಕ್ಷಕರನ್ನ ತಲುಪಿಕೊಂಡಿದೆ! ವ್ಯಾಸರಾವ್ ಅವರು ಕಡೇಯದಾಗಿ ಹಾಡೊಂದನ್ನು ಬರೆದದ್ದು ಪವನ್ ಎನ್ ಶ್ರೀವತ್ಸ ನಿರ್ದೇಶನದ ಚೆಕ್ ಎಂಬ ಕಿರುಚಿತ್ರಕ್ಕಾಗಿ. `ಚದುರಂಗ ಚೌಕದ ಚದುರಂಗ’ ಎಂಬ ಈ ಹಾಡನ್ನು ಮನೋಜ್ ವಸಿಷ್ಠ ಸಂಗೀತ ನಿರ್ದೇಶನದಲ್ಲಿ ಚಿತ್ರತಂಡ ತಯಾರು ಮಾಡಿದೆ. ಅರುಂಧತಿ ವಸಿಷ್ಠ ಹಾಡಿರೋ ಈ ಹಾಡನ್ನು ಭಾವಲೋಕದ ಅಮರಜೀವಿ ಎಂ.ಎನ್ ವ್ಯಾಸರಾವ್ […]
ಕಿರಿಕ್ ಪಾರ್ಟಿ ಚಿತ್ರಕ್ಕೆ ಒಂದು ಹಾಡು ಮತ್ತು ಸಂಭಾಷಣೆ ಬರೆದು ಆ ಮೂಲಕವೇ ಮುಂಚೂಣಿಗೆ ಬಂದಿದ್ದ ಹುಡುಗ ಧನಂಜಯ್ ರಂಜನ್. ಆ ನಂತರವೂ ಒಂದಷ್ಟು ಚಿತ್ರಗಳಿಗೆ ಕೆಲಸ ಮಾಡಿದ್ದ ಧನಂಜಯ್ ಇದೀಗ `ಮೈಸೂರು ಡೈರೀಸ್’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿದ್ದ ಒಂದು ಪೋಸ್ಟರ್ ಮೂಲಕವೇ ಈ ಚಿತ್ರ ಟಾಕ್ ಕ್ರಿಯೇಟ್ ಮಾಡಿತ್ತು. ಇದೀಗ ವರಮಹಾಲಕ್ಷ್ಮಿ ಹಬ್ಬಕ್ಕೆ ಶುಭಾಶಯ ಕೋರುವ ನೆಪದಲ್ಲಿ ಮತ್ತೊಂದು ಪೋಸ್ಟರ್ ಬಿಡುಗಡೆಯಾಗಿದೆ. ಈ ಮೂಲಕವೇ ಚಿತ್ರತಂಡ ಮತ್ತೊಂದು ಸಂತಸದ ಸುದ್ದಿಯನ್ನೂ ಜಾಹೀರು […]
ಶರಾವತಿ ತೀರದಲ್ಲಿ, ನನ್ನ ಹಾಡು ನನ್ನದು ಎಂಬ ಎರಡು ಚಿತ್ರಗಳನ್ನು ನಿರ್ದೇಶನ ಮಾಡಿ ಮುಗಿಸಿರುವವರು ಪುನೀತ್ ಶರ್ಮ. ಈ ಎರಡೂ ಚಿತ್ರಗಳು ಬಿಡುಗಡೆಗೆ ಅಣಿಯಾಗಿರುವಾಗಲೇ ಅವರು ಮತ್ತೊಂದು ಚಿತ್ರಕ್ಕೆ ತಯಾರಾಗಿದ್ದಾರೆ. ಮಹಿಳಾ ಕೇಂದ್ರಿತವಾದ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ ನಾಯಕಿಯಾಗಿ ನಟಿಸಲಿದ್ದಾರೆ! ಪುನೀತ್ ಶರ್ಮ ಈಗಾಗಲೇ ನಿರ್ದೇಶನ ಮಾಡಿರೋ ಶರಾವತಿ ತೀರದಲ್ಲಿ ಮತ್ತು ನನ್ನ ಹಾಡು ನನ್ನದು ಚಿತ್ರಗಳು ಶೀರ್ಷಿಕೆಯಿಂದಲೇ ಪ್ರೇಕ್ಷಕರನ್ನು ಸೆಳೆದಿವೆ. ಅವೆರಡೂ ಕೂಡಾ ಸೂಕ್ಷ್ಮವಂತಿಕೆಯ ಕಥಾ ಹಂದರ […]
ವರ್ಷಗಳ ಹಿಂದೆ ಗಾಯಿತ್ರಿ ಅಂತೊಂದು ಚಿತ್ರ ತೆರೆ ಕಂಡಿತ್ತು. ಹಾರರ್ ಟೈಪಿನ ಈ ಚಿತ್ರನೋಡಿ ಅದ್ಯಾರೋ ರಕ್ತ ಕಾರಿಕೊಂಡು ಬಿದ್ದ ಎಂಬಂಥಾ ಚೀಪ್ ಗಿಮಿಕ್ಕು ನಡೆಸಿದರೂ ಈ ಚಿತ್ರ ಬರಖತ್ತಾಗಿರಲಿಲ್ಲ. ಆ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ರೋಹಿತ್ ಶೆಟ್ಟಿ ಎಂಬಾತ ಇದೀಗ ಆರೋಹಣ ಎಂಬ ಚಿತ್ರದಲ್ಲಿಯೂ ಹೀರೋ. ಈತ ಈಗ ಸಂಭಾವನೆ ಹಣ ಕೊಡದೆ ಮೋಸ ಮಾಡಿದ್ದಾನೆಂದು ಈ ಚಿತ್ರದ ನಿರ್ಮಾಪಕ ಸುಶೀಲ್ ಕುಮಾರ್ ಮೇಲೆ ಆರೋಪ ಮಾಡಿದ್ದಾನೆ! ಓಲಾ ಕ್ಯಾಬ್ ಡ್ರೈವರ್ ಆಗಿದ್ದುಕೊಂಡೇ ಸಿನಿಮಾ ಹೀರೋ […]
ಯಾವುದೋ ಭಾಷೆಯ ಸಿನಿಮಾವನ್ನು ಕಡ ತಂದು ತಮ್ಮದೇ ಕಲಾಕೃತಿ ಎನ್ನುವಂತೆ ಪೋಸು ಕೊಡೋರು, ಯಾವತ್ತಾದರೂ ಒಂದು ದಿನ ಸಿಗೇಬಿದ್ದಾಗ ಮಳ್ಳನಗೆ ಬೀರೋದು ಕನ್ನಡ ಚಿತ್ರರಂಗದಲ್ಲೇನು ಹೊಸದಲ್ಲ. ಇತ್ತೀಚೆಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ ದ್ರೋಣ ಅನ್ನೋ ಸಿನಿಮಾವೊಂದು ಆರಂಭವಾಗಿ ಭಾರೀ ಪ್ರಚಾರ ಪಡೆದಿತ್ತು. ಈಗ ಆ ಸಿನಿಮಾದ ಕಥೆಯೂ ಅದೇ ಹಾದಿಯಲ್ಲಿದೆ. ಈ ಚಿತ್ರ ಆರಂಭವಾದ ದಿನದ ಪೋಸ್ಟರುಗಳು, ಜಾಹೀರಾತುಗಳಲ್ಲಿ ಕಥೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ ಪ್ರಮೋದ್ ಚಕ್ರವರ್ತಿ ಅಂತಾ ಪ್ರಚಾರ ಮಾಡಲಾಗಿತ್ತು. “ಭಾಳಾ ವರ್ಷಗಳಿಂದ […]
ಒಂದು ಸಮಸ್ಯೆ ಬಂದಾಕ್ಷಣ ದಿ ಎಂಡ್ ಎಂಬಂತೆ ಕುಸಿದು ಕೂರೋದು ಮನುಷ್ಯ ಸಹಜ ಮನಸ್ಥಿತಿ. ಆದರೆ ಬದುಕೆಂಬುದು ತಾನು ಸೃಷ್ಟಿಸೋ ಸಮಸ್ಯೆಗಳಿಗೆ ತಾನೇ ಪರಿಹಾರವೂ ಆಗುತ್ತೆ. ಕತ್ತಲೆಂದುಕೊಂಡಲ್ಲಿ ಬೆಳಕು, ನೋವುಂಡಲ್ಲೇ ನೆಮ್ಮದಿ ಮತ್ತು ಕಗ್ಗಂಟೆಂದುಕೊಂಡಿದ್ದು ಸರಳಾತಿಸರಳ… ಇಂಥಾ ಬದುಕಿಗೆ ಹತ್ತಿರಾದ ವಿಚಾರಗಳನ್ನೇ ಒಂದು ಸುಂದರವಾದ ಸೆಲ್ಫಿಯಾಗಿ ಸೆರೆ ಹಿಡಿದಂತಿರೋ ಚಿತ್ರ ಲೈಫ್ ಜೊತೆ ಒಂದ್ ಸೆಲ್ಫಿ! ನಿರ್ದೇಶಕನಾಗೋ ಆಸೆಯನ್ನೇ ಬದುಕಿನ ಪರಮ ಗುರಿ ಅಂದುಕೊಂಡು ಹೊರಟವನೊಬ್ಬ, ಆಗರ್ಭ ಶ್ರೀಮಂತನ ಮಗನಾದರೂ ಎದೆ ತುಂಬಾ ಸಂಕಟವನ್ನೇ ತುಂಬಿಕೊಂಡಿರುವ ಮತ್ತೊಬ್ಬ, […]
Rating : 4/5 Title – Sarkari Hiriya Prathamika Shale Kasargod, Koduge Ramanna Rai, Producer – Rishab Shetty Films, Direction – Rishab Shetty, Music – Vasuki Vybhav, Cinematography – Venkatesh Anguraj, Cast – Ananthnag, Ramesh Bhat, Pramod Shetty, Prakash Tuminadu, Ranjan, Sampath, Saptha Pavuru, Balakrishna P, Nagaraj and others. In the history of Kannada cinema the […]
ಕಾಸರಗೋಡಿನಲ್ಲಿ ಕನ್ನಡ ಇದೆ. ಆದರೆ, ಕಾಸರಗೋಡು ಕರ್ನಾಟಕದಿಂದ ತಪ್ಪಿಸಿಕೊಂಡು ಎಷ್ಟೋ ವರ್ಷಗಳಾಗಿವೆ. ನಮ್ಮ ತಾಯ್ನುಡಿಯನ್ನು ನಮ್ಮೊಳಗೆ ಬದುಕಿಸಿಕೊಳ್ಳೋದೇ ಕಷ್ಟ. ಇಂಥಾದ್ದರಲ್ಲಿ ಯಾರದ್ದೋ ಹಿಡಿತದಲ್ಲಿರುವ ನೆಲದಲ್ಲಿ ನಮ್ಮದೆಂಬ ಭಾಷೆಯನ್ನು ದಕ್ಕಿಸಿಕೊಳ್ಳೋದು ಎಂಥಾ ಯಾತನೆಯ ಕೆಲಸವಲ್ಲವೇ? ಅದು ಎಂಥಾ ತ್ರಾಸದ ವಿಚಾರವೆಂಬುದನ್ನು ಒಂದು ಸರ್ಕಾರಿ ಶಾಲೆಯ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ಹಿಡಿದಿಡುವ ಚಿತ್ರ ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ! ಅದು ಕಾಸರಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಶಾಲೆಯ ಬೋರ್ಡನ್ನು ರಾಮಣ್ಣ ರೈ ಕೊಡುಗೆ ನೀಡಿದ್ದಾರಾದರೂ ಕನ್ನಡವನ್ನು […]
ದಿನಕರ್ ನಿರ್ದೇಶನದ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಬಗ್ಗೆ ಪ್ರಜ್ವಲ್ ದೇವರಾಜ್ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ನಾಯಕರಲ್ಲೊಬ್ಬರಾಗಿರೋ ಪ್ರಜ್ವಲ್ ಈ ಚಿತ್ರದಲ್ಲಿ ಕೋಟ್ಯಾಧೀಶನ ಮಗ ವಿರಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರವನ್ನ ಬರೀ ನಟಿಸದೇ ಪ್ರೀತಿಸುವಂತಾಗಿದ್ದಕ್ಕೆ, ಇಡೀ ಚಿತ್ರ ಆರಂಭಿಕವಾಗಿಯೇ ಕಾಡಿದ್ದಕ್ಕೆ ಪ್ರಜ್ವಲ್ ತಮ್ಮದೇ ಆದ ಕಾರಣಗಳನ್ನು ಕೊಟ್ಟಿದ್ದಾರೆ! ದಿನಕರ್ ಅವರ ಮಡದಿ ಮಾನಸಾ ಬರೆದ ಈ ಕಥೆಯನ್ನು ಕೇಳಿದಾಗ ಮೊದಲ ಹಂತದಲ್ಲಿಯೇ ಪ್ರಜ್ವಲ್ಗೆ ಇಷ್ಟವಾಗಿತ್ತಂತೆ. ಅದಕ್ಕೆ ಕಾರಣ ಇಡೀ ಕಥೆ ಬದುಕಿನ […]