ಗಿರ್ ಗಿಟ್ಲೆಗಾಗಿ ನಿರ್ದೇಶಕರು ಮಾಡಿದ್ದು ಆರು ವರ್ಷದ ವ್ರತ!

Picture of Cinibuzz

Cinibuzz

Bureau Report

ಗಿರ್ ಗಿಟ್ಲೆ ಚಿತ್ರದ ಮೂಲಕ ಮತ್ತೋರ್ವ ಭಿನ್ನ ಆಲೋಚನೆಯ ಪ್ರತಿಭಾವಂತ ನಿರ್ದೇಶರ ಆಗಮನವಾಗಿದೆ. ಈಗಾಗಲೇ ಬಿಡುಗಡೆಗೊಂಡಿರೋ ಟ್ರೈಲರ್, ಪ್ರೋಮೋಗಳ ಮೂಲಕವೇ ನಿರ್ದೇಶಕ ರವಿಕಿರಣ್ ಅಂಥಾದ್ದೊಂದು ಭರವಸೆಗೆ ಕಾರಣರಾಗಿದ್ದಾರೆ. ಇದೇ ಮಾರ್ಚ್ 15ರಂದು ಗಿರ್ ಗಿಟ್ಲೆ ಬಿಡುಗಡೆಯಾಗುತ್ತಿದೆ. ಎತ್ತ ನೋಡಿದರೂ ಈ ಚಿತ್ರದತ್ತ ಪಾಸಿಟೀವ್ ವಾತಾವರಣವೇ ಇದೆ. ಇಂತಾ ವಾತಾವರಣ ಹುಟ್ಟಿಕೊಂಡಿದ್ದರ ಹಿಂದೆ ನಿರ್ದೇಶಕರ ರವಿಕಿರಣ್ ಅವರ ಅಖಂಡ ಆರು ವರ್ಷಗಳ ವ್ರತದಂಥಾ ಕೆಲಸ, ಕನಸುಗಳಿವೆ ಅನ್ನೋದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.

ತುಂಬಾ ಕನಸಿಟ್ಟುಕೊಂಡು ರವಿಕಿರಣ್ ಅವರು ರೂಪಿಸಿದ್ದ ಕಥೆ, ಚಿತ್ರಕಥೆಯನ್ನ ಈ ಸಿನಿಮಾ ಹೊಂದಿದೆ. ಆದರೆ ಆರಂಭದಲ್ಲಿಯೇ ಕೆಲ ಮಂದಿಯ ಶೋಕಿಯ ಕಾರಣದಿಂದ ರವಿಕಿರಣ್ ಅವರಿಗೆ ಹಿನ್ನಡೆಯಾಗಿತ್ತು. ಯಾರೋ ಮಾಡಿದ ತಪ್ಪಿನಿಂದ ಆರಂಭವಾಗಿದ್ದ ಈ ಚಿತ್ರ ನಿಂತು ಹೋಗಿತ್ತು.

ಅದಾದ ನಂತರದಲ್ಲಿ ರವಿಕಿರಣ್ ಪಡಬಾರದ ಕಷ್ಟಗಳನ್ನೆಲ್ಲ ಪಟ್ಟಿದ್ದರು. ನಿರ್ಮಾಪಕರ ಮನೆ ಬಾಗಿಲಿಗೆ ಬರೋಬ್ಬರಿ ಮೂರುವರೆ ವರ್ಷಗಳ ಕಾಲ ಅಲೆದಾಡಿದ್ದರು. ಆದರೆ ಈ ಅವಧಿಯಲ್ಲಾದ ಆಘಾತದಿಂದ ಅವರೇನೂ ಕುಗ್ಗಿ ಹೋಗಲಿಲ್ಲ. ಬದಲಾಗಿ ಆ ಅವಧಿಯನ್ನೆಲ್ಲ ಕಥೆಯನ್ನು ತಿದ್ದಿ ತೀಡುತ್ತಾ ಮತ್ತಷ್ಟು ಹೊಳಪುಗೊಳಿಸಲೆಂದೇ ಮೀಸಲಾಗಿಟ್ಟಿದ್ದರು. ಆ ಕಾರಣದಿಂದಲೇ ಈ ಚಿತ್ರವೀಗ ಎಲ್ಲರ ಗಮನವನ್ನೂ ಸೆಳೆದುಕೊಂಡಿದೆ.

ಇನ್ನಷ್ಟು ಓದಿರಿ

Scroll to Top