ಕಾರ್ಮಿಕರ ಕೈ ಹಿಡಿದರು ನಿಖಿಲ್ ಕುಮಾರ್!

Picture of Cinibuzz

Cinibuzz

Bureau Report

ಕೊರೊನ ಎಂಬ ಮಹಾಮಾರಿ ವಿಶ್ವದಾದ್ಯಂತ ತನ್ನ ಅಟ್ಟಹಾಸ ತೋರುತ್ತಿದೆ. ಈ ಪೀಡೆ ಹೆಚ್ಚು ಹರಡದಿರಲು, ಭಾರತ ಸರ್ಕಾರ ಏಪ್ರಿಲ್  ೧೪ ರವರೆಗೂ ಲಾಕ್ ಡೌನ್ ಆದೇಶ ನೀಡಿದೆ. ನಿಯಮ ಪಾಲಿಸಬೇಕಾಗಿರುವುದು ಎಲ್ಲರ ಕರ್ತವ್ಯ. ಅದರೆ ಈ ಸಂದರ್ಭದಲ್ಲಿ ಕಾರ್ಮಿಕ ವರ್ಗ ಕೆಲಸವಿಲ್ಲದೆ ತುಂಬಾ ಕಷ್ಟ ಪಡುತ್ತಿದೆ. ಚಲನಚಿತ್ರ ಕಾರ್ಮಿಕರೂ ಈ ಸಮಸ್ಯೆಗೆ ಹೊರತಲ್ಲ..

ಚಲನಚಿತ್ರ ಕಾರ್ಮಿಕರ ಸಮಸ್ಯೆ ಅರಿತಿರುವ ನಾಯಕನಟ ನಿಖಿಲ್ ಕುಮಾರಸ್ವಾಮಿ ಅವರು ಕಾರ್ಮಿಕರಿಗೆ ದಿನಸಿ, ಆಹಾರ ಸೇರಿದಂತೆ ತಿಂಗಳ ಮೂಲಭೂತ ಖರ್ಚಿಗಾಗಿ ಅವರ ಖಾತೆಗೆ ಇಂತಿಷ್ಟು ಹಣ ಸಂದಾಯ ಮಾಡಲಿದ್ದಾರೆ.

ಹೊಟ್ಟೆ ತುಂಬಿದ ಹೀರೋಗಳು ಸಿನಿಮಾದಲ್ಲಿ ದುಡಿಯುವ ಬಡ ಕಾರ್ಮಿಕರ ಕಡೆ ಗಮನ ಕೊಡೋದು ವಿರಳ. ಆದರೆ ಸ್ವತಃ ನಿಖಿಲ್ ತಂದೆ ಕುಮಾರಸ್ವಾಮಿ ರಾಜಕೀಯಕ್ಕೆ ಎಂಟ್ರಿ ಕೊಡೋ ಮುಂಚೆ ನಿರ್ಮಾಪಕರಾಗಿ ದುಡಿದವರು. ಸಿನಿಮಾ ಕಾರ್ಮಿಕರ ಬವಣೆ ಕುಮಾರಸ್ವಾಮಿಯವರಿಗೆ ಇಂಚಿಂಚೂ ಗೊತ್ತಿದೆ. ತಂದೆಯ ಮಾರ್ಗದಲ್ಲೇ ನಡೆಯುತ್ತಿರುವ ನಿಖಿಲ್ ಸಿನಿಮಾ ಕಾರ್ಮಿಕರ ಕಷ್ಟವನ್ನು ಅರಿತು ಸಹಾಯಕ್ಕೆ ಮುಂದಾಗಿರುವುದು ನಿಜಕ್ಕೂ ಮೆಚ್ಚಬೇಕಾದ ವಿಚಾರ. ಈಗಾಗಲೇ ದುಡಿಮೆ ಕಳೆದುಕೊಂಡು ಕಂಗಾಲಾಗಿರುವ ಚಿತ್ರ ಕಾರ್ಮಿಕರ ಊಟ-ಬಟ್ಟೆಗಳಲ್ಲದೇ ಮುಂದಿನ ದಿನಗಳ ಬದುಕಿಗೆ ಆರ್ಥಿಕ ಬೆಂಬಲ ಕೂಡಾ ಗತ್ಯವಿದೆ. ಚಿತ್ರರಂಗದಲ್ಲಿ ದೊಡ್ಡ ಹೆಸರು, ಹಣ ಮಾಡಿರುವ ನಿರ್ಮಾಪಕರು, ಹೀರೋಗಳೆಲ್ಲಾ ಸೇರಿ ಆ ಜವಾಬ್ದಾರಿಯನ್ನು ಹೊರಬೇಕಿದೆ.

ಇನ್ನಷ್ಟು ಓದಿರಿ

Scroll to Top