ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳ ಪಾಲಿಗೆ ಇದು ನಿಜಕ್ಕೂ ಗುಡ್ ನ್ಯೂಸ್! ಬಹು ನಿರೀಕ್ಷಿತ ಚಿತ್ರ ‘ಉಸ್ತಾದ್ ಭಗತ್ ಸಿಂಗ್’ ಚಿತ್ರೀಕರಣ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ಶುರುವಾಗಿದೆ. ನಿರ್ದೇಶಕ ಹರೀಶ್ ಶಂಕರ್ ಆಕ್ಷನ್-ಕಟ್ ಹೇಳುತ್ತಿರುವ ಈ ಚಿತ್ರದ ಶೂಟಿಂಗ್ ಇತ್ತೀಚೆಗೆ ಅಲ್ಯುಮಿನಿಯಂ ಫ್ಯಾಕ್ಟರಿಯಲ್ಲಿ ಆರಂಭಗೊಂಡಿದೆ. ಈಗ ನಡೆಯುತ್ತಿರುವ ಶೆಡ್ಯೂಲ್ ಸುಮಾರು ಒಂದು ತಿಂಗಳ ಕಾಲ ಮುಂದುವರಿಯಲಿದೆ. ಈ ಅವಧಿಯಲ್ಲಿ ಪವನ್ ಕಲ್ಯಾಣ್ ಅವರ ಬಹುತೇಕ ದೃಶ್ಯಗಳನ್ನು ಚಿತ್ರೀಕರಿಸುವ ಸಾಧ್ಯತೆಯಿದೆ.

ಈ ಮಾಸ್ ಎಂಟರ್‌ಟೈನರ್ ಚಿತ್ರವು ‘ಗಬ್ಬರ್ ಸಿಂಗ್’ ಬ್ಲಾಕ್‌ಬಸ್ಟರ್ ನಂತರ ಪವನ್ ಕಲ್ಯಾಣ್ ಮತ್ತು ಹರೀಶ್ ಶಂಕರ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿದೆ. ನಾಯಕಿಯಾಗಿ ಶ್ರೀಲೀಲಾ ನಟಿಸುತ್ತಿದ್ದು, ಹಲವು ಖ್ಯಾತ ನಟರು ತಾರಾಗಣದಲ್ಲಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡುತ್ತಿದ್ದಾರೆ. ‘ಉಸ್ತಾದ್ ಭಗತ್ ಸಿಂಗ್’ 2026ರಲ್ಲಿ ಅದ್ದೂರಿ ತೆರೆ ಕಾಣಲಿದೆ.











































