ಮೋದಿ ಗೆಲುವಿಗೆ ಉಪೇಂದ್ರ ಏನಂದ್ರು!

Picture of Cinibuzz

Cinibuzz

Bureau Report

ನಿನ್ನೆಯಷ್ಟೇ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ನರೇಂದ್ರ ಮೋದಿಯವರು ಎರಡನೇ ಬಾರಿ ಸ್ವತಂತ್ರ್ಯ ಬಹುಮತ ಪಡೆಯುವ ಮೂಲಕ ಪ್ರಧಾನಮಂತ್ರಿಯೂ ಆಗಿದ್ದಾರೆ. ಪ್ರಾರಂಭದಿಂದಲೂ ಪರೋಕ್ಷವಾಗಿ ನರೇಂದ್ರ ಮೋದಿಯವರ ನಿಲುವುಗಳಿಗೆ ಸಪೋರ್ಟ್ ಮಾಡುತ್ತಲೇ ಬಂದಿದ್ದ ಉಪೇಂದ್ರ ಅವರು ಲೋಕಸಭಾ ಚುನಾವಣೆಯಲ್ಲಿ ಪ್ರಜಾಕೀಯದ ಮೂಲಕ ಸಕ್ರಿಯರಾಗಿದ್ದರು.

ಇನ್ನು ಮೋದಿ ಅಭೂತಪೂರ್ವ ಯಶಸ್ಸಿಗೆ ಬುದ್ದಿವಂತ 2 ಮುಹೂರ್ತ ಸಮಾರಂಭದಲ್ಲಿ ಪ್ರತಿಕ್ರಿಯೆ ನೀಡಿರುವ ಉಪೇಂದ್ರ,ಮೋದಿ ಮತ್ತೆ ಗೆಲುವು ಸಾಧಿಸಿರುವುದು ಖುಷಿ ತಂದಿದೆ. ಈ ಐದು ವರ್ಷದಲ್ಲಿ ಮೋದಿ ಮತ್ತಷ್ಟು ಸಾಧನೆ ಮಾಡುತ್ತಾರೆಂಬ ನಾನೂ ಕಾಯುತ್ತಿದ್ದೇನೆ. ಸ್ಮಾರ್ಟ್ ಸಿಟಿಯಂತಹ ಯೋಜನೆಗಳು ದೀರ್ಘ ಕಾಲದ್ದು, ಈ ಐದು ವರ್ಷದಲ್ಲಿ ಮೋದಿ ಮತ್ತಷ್ಟು ಸಾಧಿಸುತ್ತಾರೆನ್ನುವ ಭರವಸೆಯಿದೆ. ಇನ್ನು ಪ್ರಜಾಕೀಯದ ಫಲಿತಾಂಶ ಖುಷಿ ತಂದಿದೆ. ಕಡಿಮೆ ಅವಧಿಯಲ್ಲೆ ನಮ್ಮ ಪಕ್ಷ ಜನರ ಗಮನ ಸೆಳೆದಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಮುಂದುವರೆದು ಉತ್ತಮ ಕೆಲಸಗಳನ್ನು ಮಾಡಲಿ. ಸರ್ಕಾರ ಉರುಳುವುದು ಮತ್ತೆ ಎಲೆಕ್ಷನ್ ಆಗೋದು ಚೆನ್ನಾಗಿರೋದಿಲ್ಲ , ಜನ ಕೂಡ ಪ್ರಿಪೇರ್ ಆಗಿರೋದಿಲ್ಲ ಎಂದಿದ್ದಾರೆ.

ಇನ್ನಷ್ಟು ಓದಿರಿ

Scroll to Top