ಪ್ಲೇ ಗರ್ಲ್ ಲುಕ್ ನಲ್ಲಿ ರಾಕುಲ್ ಪ್ರೀತ್ ಸಿಂಗ್!

Picture of Cinibuzz

Cinibuzz

Bureau Report

ಟಾಲಿವುಡ್ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ್ ಅಭಿನಯಿಸಿರುವ ಮನ್ಮಥುಡು 2 ಚಿತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್ ಜತೆಯಾಗಿದ್ದಾರೆ. ಈ ರೊಮ್ಯಾಂಟಿಕ್ ಎಂಟಟೇನರ್ ಆಗಿರುವ ಈ ಚಿತ್ರದಲ್ಲಿ ರಾಕುಲ್ ಎರಡು ಶೇಡಿನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಂದಹಾಗೆ ನಾಯಕಿ ಸಾಂಪ್ರದಾಯಿಕ ಹುಡುಗಿ ಅವಂತಿಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಮತ್ತೊಂದು ಶೇಡಿನಲ್ಲಿ ಪ್ಲೇ ಗರ್ಲ್ ಆಗಿಯೂ ರಾಹುಲ್ ಕಾಣಿಸಿಕೊಂಡಿದ್ದಾರೆ.

ಮನ್ಮಥುಡು 2 ಚಿತ್ರದ ಸೀನೊಂದರಲ್ಲಿ ರಾಕುಲ್ ಸಿಗರೇಟ್ ಸೇದುತ್ತಾ ಮಾಡರ್ನ್ ಯುವತಿಯಾಗಿ ಕಾಣಿಸಿಕೊಂಡಿದ್ದಾರೆ. ಸಖತ್ ಬೋಲ್ಡ್ ಆದ ರಾಕುಲ್ ಲುಕ್ಕಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಉಳಿದಂತೆ ಹಿರಿಯ ನಟಿ ಲಕ್ಷ್ಮೀ, ಸಮಂತಾ ಅಕ್ಕಿನೇನಿ, ಕೀರ್ತಿ ಸುರೇಶ್, ರಾವ್ ರಮೇಶ್, ಝಾನ್ಸಿ ಸೇರಿದಂತೆ ಬಹುದೊಡ್ಡ ತಾರಾಂಗಣವೇ ಇದೆ.

ಇನ್ನಷ್ಟು ಓದಿರಿ

Scroll to Top