ಡಬ್ ಸ್ಮ್ಯಾಶ್ ಹುಡ್ಗೀರ ರ್‍ಯಾಪ್ ಸಾಂಗ್!

Picture of Cinibuzz

Cinibuzz

Bureau Report

ರ್‍ಯಾಪ್ ಸಾಂಗ್‌ಗಳಿಗೆ ಹುಚ್ಚೆದ್ದು ಕುಣಿಯುವವರ ಸಂಖ್ಯೆ ಹೆಚ್ಚಾಗುತ್ತಲೇ ಅದರಲ್ಲಿ ಹೊಸಾ ಥರದ ಪ್ರಯೋಗಗಳೂ ವ್ಯಾಪಕವಾಗಿ ನಡೆಯುತ್ತಿವೆ. ಅದೇ ಹಾದಿಯಲ್ಲಿ ವಿಜೇತ್ ಸಂಗೀತ ಸಂಯೋಜನೆಯಲ್ಲೊಂದು ರ್‍ಯಾಪ್ ಸಾಂಗ್ ಬಿಡುಗಡೆಗೊಂಡಿದೆ. ಹುಡುಗೀರನ್ನು ಆವರಿಸಿಕೊಳ್ಳುತ್ತಾ, ಬಣ್ಣದ ಕನಸು ಬಿತ್ತುವ ಡಬ್ ಸ್ಮ್ಯಾಶ್ ಥೀಮ್‌ನಲ್ಲಿ ತಯಾರಾಗಿರೋ ಈ ಹಾಡೀಗ ಜನಪ್ರಿಯಗೊಳ್ಳುತ್ತಿದೆ.

ಈ ವೀಡಿಯೋ ಸಾಂಗ್ ಅನ್ನು ಉದಯ್ ಪಿಸುಮಾತು ನಿರ್ದೇಶನ ಮಾಡಿದ್ದಾರೆ. ಜೀವಿತಾ ಸುಬ್ರಮಣ್ಯ ನಿರ್ಮಾಣ ಮಾಡಿದ್ದಾರೆ. ಹರ್ಷಿತಾ ಸುಬ್ರಹ್ಮಣ್ಯ ಈ ಹಾಡನ್ನು ಹಾಡಿ ನಟಿಸಿದ್ದಾರೆ. ರ್‍ಯಾಪ್ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ವಿಜೇತ್ ಸಂಗೀತ ಸಂಯೋಜನೆಯಲ್ಲಿ ಈ ಸಾಂಗು ಚೆಂದಗೆ ಮೂಡಿ ಬಂದಿದೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಡಬ್ ಸ್ಮ್ಯಾಶ್ ಹವಾ ಜೋರಾಗಿದೆ. ಅನೇಕ ಹುಡುಗೀರು ಈ ಮಾಯಾಲೋಕದಲ್ಗಲಿ ಕಳೆದು ಹೋಗಿದ್ದಾರೆ. ವ್ಯಾಪಕಜ ಅಭಿಮಾನಿ ಪಡೆಯನ್ನೂ ಕೂಡಾ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಹೀಗೆ ಡಬ್ ಸ್ಮ್ಯಾಶ್ ಮಾಡೋ ಪ್ರತೀ ಹುಡುಗೀರಲ್ಲಿಯೂ ಬಣ್ಣ ಬಣ್ಣದ ಕನಸುಗಳಿರುತ್ತವೆ. ಆ ಮನೋಲೋಕಕ್ಕೆ ಕನ್ನಡಿ ಹಿಡಿಯುವಂಥಾ ಸಾಹಿತ್ಯ ಬರೆದಿರುವವರು ಭರ್ಜರಿ ಚೇತನ್. ಈ ಹಾಡೀಗ ರ್‍ಯಾಪ್ ಜಗತ್ತಿನಲ್ಲಿ ಹೊಸಾ ಅಲೆಯೊಂದನ್ನು ಸೃಷ್ಟಿಸಿದೆ.

#

ಇನ್ನಷ್ಟು ಓದಿರಿ

Scroll to Top