ಡಾ ರಾಜ್ ಮೊಮ್ಮಗನಿಗೊಲಿದ ಕೆಂಡಸಂಪಿಗೆ!

Picture of Cinibuzz

Cinibuzz

Bureau Report


ಕನ್ನಡದಲ್ಲಿ ಅಪಾರ ಅವಕಾಶಗಳನ್ನು ಗಳಿಸಿಕೊಳ್ಳುತ್ತಲೇ ಪರಭಾಷೆಗೂ ಜಿಗಿದ ಖುಷಿಯಲ್ಲಿರುವವಳು ಮಾನ್ವಿತಾ ಕಾಮತ್. ಇದೀಗ ಮಾನ್ವಿತಾ ಡಾ ರಾಜ್‌ಕುಮಾರ್ ಮೊಮ್ಮಗ ಧೀರೇನ್ ನಾಯಕನಾಗಿರೋ ದಾರಿ ತಪ್ಪಿದ ಮಗ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ.

ಧೀರೇನ್ ಎಂಟ್ರಿ ಕೊಡುತ್ತಿರೋ ದಾರಿ ತಪ್ಪಿದ ಮಗನ ಬಗ್ಗೆ ಈ ಹಿಂದಿನಿಂದಲೂ ವ್ಯಾಪಕವಾಗಿ ಸುದ್ದಿಗಳು ಹರಿದಾಡುತ್ತಿದ್ದವು. ಈ ವಿಚಾರ ಅಧಿಕೃತವಾಗಿ ಜಾಹೀರಾದರೂ ನಾಯಕಿ ಯಾರಾಗಲಿದ್ದಾರೆಂಬ ಕುತೂಹಲ ಮಾತ್ರ ಹಾಗೆಯೇ ಉಳಿದುಕೊಂಡಿತ್ತು. ಇಲ್ಲಿ ನಾಯಕಿಯದ್ದು ಲವ ಲವಿಕೆಯಿಂದಿರೋ ಮುದ್ದಾದ ಪಾತ್ರ. ಅದಕ್ಕೆ ಹುಡುಕಾಟ ನಡೆಸಿದ ನಿರ್ದೇಶಕರು ಕಡೆಗೂ ಮಾನ್ವಿತಾಳನ್ನು ಆಯ್ಕೆ ಮಾಡಿದ್ದಾರೆ.

ರಾಜ್ ಮೊಮ್ಮಗ ಧೀರೇನ್ ಈಗಾಗಲೇ ಈ ಚಿತ್ರದ ಪಾತ್ರಕ್ಕಾಗಿ ಪಟ್ಟು ಹಿಡಿದು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ನಟನೆಯಲ್ಲಿ ತರಬೇತಿ ಪಡೆದು ಡ್ಯಾನ್ಸ್, ಫೈಟ್‌ಗಳಲ್ಲಿಯೂ ಪಳಗಿಕೊಂಡಿದ್ದಾರೆ. ನಿರ್ದೇಶಾಕ ಅನಿಲ್ ಕುಮಾರ್ ಕೂಡಾ ಎಲ್ಲ ಸಿದ್ಧತೆಗಳನ್ನೂ ಮುಗಿಸಿಕೊಂಡು ಚಿತ್ರೀಕರಣದತ್ತ ಮುಖ ಮಾಡಿದ್ದಾರೆ.
ನಟಿ ಮಾನ್ವಿತಾ ಕೆಂಡ ಸಂಪಿಗೆ ಮೂಲಕ ಎಂಟ್ರಿ ಕೊಟ್ಟು ಆ ನಂತರ ಟಗರು ಚಿತ್ರದ ಮೂಲಕ ಹೆಚ್ಚಿನ ಅವಕಾಶಗಳನ್ನು ತನ್ನದಾಗಿಸಿಕೊಳ್ಳುತ್ತಿದ್ದಾಳೆ. ಈ ಸಮಯದಲ್ಲಿಯೇ ಮರಾಠಿ ಚಿತ್ರಕ್ಕೆ ನಾಯಕಿಯಾಗೋ ಅವಕಾಶವೂ ಒಲಿದು ಬಂದಿದೆ. ಅದನ್ನೊಪ್ಪಿಕೊಂಡು ಮರಾಠಿಯಲ್ಲಿಯೂ ಸಕ್ರಿಯವಾಗಿರೋ ಮಾನ್ವಿತಾ ದಾರಿ ತಪ್ಪಿದ ಮಗನಿಗೂ ಸಾಥ್ ಕೊಡಲು ಮುಂದಾಗಿದ್ದಾಳೆ.

#

ಇನ್ನಷ್ಟು ಓದಿರಿ

Scroll to Top