ಸಿಂಪಲ್ ಸುನಿ ಜೊತೆ ಶರಣ್ ತ್ರಿಶಂಕು ಸ್ವರ್ಗ!

Picture of Cinibuzz

Cinibuzz

Bureau Report

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕವೇ ಸ್ಟಾರ್‌ಗಿರಿ ಪಡೆದುಕೊಂಡಿರುವವರು ನಿರ್ದೇಶಕ ಸುನಿ. ಸದಾ ಹೊಸತನದ ಕಥೆಗಳಿಗೇ ಹಾತೊರೆಯುತ್ತಾ ಬಂದಿರೋ ಅವರೀಗ ವಿಶಿಷ್ಟವಾದೊಂದು ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ. ಈ ಮೂಲಕ ಹೊಸಾ ವರ್ಷಕ್ಕೆ ಹೊಸಾ ಥರದ ಪ್ರಯಾಣ ಆರಂಭಿಸೋ ತಯಾರಿಯಲ್ಲಿರೋ ಸುನಿಗೆ ನಟ ಶರಣ್ ಜೊತೆಯಾಗಿದ್ದಾರೆ!

ಸಿಂಪಲ್ ಸುನಿ ಶರಣ್ ಅವರಿಗಾಗೊಂದು ಚಿತ್ರ ಮಾಡಲು ತಯಾರಿ ಆರಂಭಿಸಿದ್ದಾರೆ. ಈ ಚಿತ್ರವನ್ನು ಸಿಂಪಲ್ ಸುನಿ ನಿರ್ಮಾಣ ಮಾಡುತ್ತಿರೋದು ವಿಶೇಷ. ಈ ನಿರ್ಮಾಣ ಕಾರ್ಯಕ್ಕೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೂಡಾ ಜೊತೆಯಾಗಿದ್ದಾರೆ. ಈ ಮೂಲಕ ಸುನಿ ಕೈಗೆತ್ತಿಕೊಂಡಿರುವ ಕಥೆಯಲ್ಲಿಯೂ ವಿಶೇಷತೆಯಿದೆ. ಮಹಾಭಾರತದಲ್ಲಿ ತ್ರಿಶಂಕು ಸ್ವರ್ಗದ ಅಧ್ಯಾಯವಿದೆಯಲ್ಲಾ? ಅದರ ಎಳೆಯನ್ನೆತ್ತಿಕೊಂಡು ಬೇರೆಯದ್ದೇ ಥರದ ಕಾಮಿಡಿ ಥ್ರಿಲ್ಲರ್ ಕಥೆಯನ್ನುಪ್ರಯೋಗಿಸಲಾಗುತ್ತಿದೆಯಂತೆ.

ಈ ಚಿತ್ರದ ಬಗ್ಗೆ ಶರಣ್ ಕೂಡಾ ಖುಷಿಯಿಂದಲೇ ರೆಡಿಯಾಗುತ್ತಿದ್ದಾರೆ. ಯಾಕೆಂದರೆ ಸಿಂಪಲ್ ಸುನಿ ಈ ವರೆಗೆ ನೋಡಿರದಂಥಾ ಪಾತ್ರವನ್ನು ಶರಣ್‌ಗಾಗಿ ರೂಪಿಸಿದ್ದಾರಂತೆ. ಇನ್ನೂ ಈ ಚಿತ್ರಕ್ಕೆ ಹೆಸರಿಟ್ಟಿಲ್ಲ. ಹೊಸಾ ವರ್ಷದ ಆರಂಭದಲ್ಲಿಯೇ ಟೈಟಲ್ ಅನಾವರಣಗೊಳ್ಳೋ ಸಾಧ್ಯತೆಗಳಿವೆ. ಅದಾದ ನಂತರ ಚಿತ್ರೀಕರಣ ಶುರು ಮಾಡಿ ಒಂದೇ ಹಂತದಲ್ಲಿ ಮುಗಿಸಿಕೊಳ್ಳಲು ಸುನಿ ಯೋಜನೆ ಹಾಕಿಕೊಂಡಿದ್ದಾರೆ.

#

ಇನ್ನಷ್ಟು ಓದಿರಿ

Scroll to Top